ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜುಗಳಲ್ಲಿ ಡಾ.ಅಂಬೇಡ್ಕರ್ ಓದು ಕಾರ್ಯಕ್ರಮ

ಜಿಲ್ಲೆಯ ಐದು ಕಡೆ ಉಪನ್ಯಾಸ, ತಲಾ ₹20 ಸಾವಿರ ಖರ್ಚು, ಪ್ರಮಾಣ ಪತ್ರ ವಿತರಣೆ
Last Updated 12 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಯಾದಗಿರಿ: ವಿದ್ಯಾರ್ಥಿಗಳಲ್ಲಿ ಅಧ್ಯಯನಶೀಲತೆ ಹೆಚ್ಚುಸುವ ದೃಷ್ಟಿಯಿಂದ ‘ಡಾ.ಅಂಬೇಡ್ಕರ್ ಓದು’ ಕಾರ್ಯಕ್ರಮವನ್ನು ಸರ್ಕಾರ ಜಾರಿಗೆ ತಂದಿದೆ.

2019–20ರಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಾಗಿದೆ. ಕಾಲೇಜು ಮಟ್ಟದ ವಿದ್ಯಾರ್ಥಿಗಳಿಗೆ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ ಬಗ್ಗೆ ತಿಳಿವಳಿಕೆ ಮತ್ತು ಅವರ ಜೀವನ ಚರಿತ್ರೆ ಹಾಗೂ ಓದುವುದರಿಂದ ಆಗುವ ಲಾಭಗಳ ಕುರಿತಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

ಈಗಾಗಲೇ ಜಿಲ್ಲೆಯ ಐದು ಸ್ಥಳಗಳಲ್ಲಿ ‘ಅಂಬೇಡ್ಕರ್ ಓದು’ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಓದುವಿಕೆಯನ್ನು ಪ್ರೇರಿಸುವ ಕೆಲಸ ಮಾಡಲಾಗಿದೆ.

ಎಲ್ಲೆಲ್ಲಿ ಕಾರ್ಯಕ್ರಮ: ಜಿಲ್ಲೆಯ ವಿವಿಧ ಪದವಿ ಪೂರ್ವ, ಪದವಿ ಕಾಲೇಜುಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇತೃತ್ವದಲ್ಲಿ ಕಾಲೇಜು ಸಹಯೋಗದೊಂದಿಗೆ ಈ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜು ಕೆಂಭಾವಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಶಹಾಪುರ, ಸರ್ಕಾರಿ ಪದವಿ ಪೂರ್ವ ಕಾಲೇಜು ಭೀಮರಾಯನಗುಡಿ, ಚಂದ್ರಶೇಖರ ವಿದ್ಯಾ ಸಂಸ್ಥೆಯ ಕೆ.ಆರ್‌. ನಾಗಗೌಡ ಕಾಲೇಜು ಹಾಗೂ ಬಸವೇಶ್ವರ ಪದವಿ ಮಹಾವಿದ್ಯಾಲಯ ಯಾದಗಿರಿಯಲ್ಲಿ ‘ಅಂಬೇಡ್ಕರ್‌ ಓದು’ ಕಾರ್ಯಕ್ರಮ ನಡೆಸಲಾಗಿದೆ. ಒಂದು ವರ್ಷದಲ್ಲಿ 5 ಕಡೆ ಇಂಥ ಕಾರ್ಯಕ್ರಮ ನಡೆಸಲು ಸರ್ಕಾರವೇ ಧನ ಸಹಾಯ ನೀಡುತ್ತಿದೆ.

₹1 ಲಕ್ಷ ಧನ ಸಹಾಯ: ಐದು ಕಾಲೇಜುಗಳಲ್ಲಿ ತಲಾ ಒಂದು ‘ಅಂಬೇಡ್ಕರ್‌ ಓದು’ ಕಾರ್ಯಕ್ರಮಕ್ಕೆ ತಲಾ ₹20 ಸಾವಿರ ಮೀಸಲೀಡಲಾಗಿದೆ. ಅಂಬೇಡ್ಕರ್ ಬಗ್ಗೆ ಉಪನ್ಯಾಸ ನೀಡುವರಿಗೆ, ಕಾರ್ಯಕ್ರಮ ನಿರೂಪಕರಿಗೆ, ಕಾರ್ಯಕ್ರಮ ಅಯೋಜಕರಿಗೆ, ಬ್ಯಾನರ್‌, ಆಹ್ವಾನ ಪತ್ರಿಕೆ, ಹಾರ, ಶಾಲು ಸೇರಿದಂತೆ ಹೀಗೇ ₹20 ಸಾವಿರ ಖರ್ಚು ನಿಗದಿ ಪಡಿಸಲಾಗಿದೆ.

ಏನಿರುತ್ತದೆ ‘ಅಂಬೇಡ್ಕರ್‌ ಓದು’ ನಲ್ಲಿ?: ಅಂಬೇಡ್ಕರ್‌ ಅವರ ಬಗ್ಗೆ ಉಪನ್ಯಾಸ, ಪ್ರಬಂಧ ಸ್ಪರ್ಧೆ, ಆಶುಭಾಷಣ, ಕವಿಗೋಷ್ಠಿ, ರಸ ಪ್ರಶ್ನೆ ಇತ್ಯಾದಿ ಕಾರ್ಯಕ್ರಮಗಳಿರುತ್ತವೆ. ಪ್ರಥಮ, ದ್ವಿತೀಯ, ತೃತೀಯ ಹೀಗೇ 5 ಬಹುಮಾನಗಳನ್ನು ನೀಡಲಾಗುತ್ತಿದೆ. ಜೊತೆಗೆ ಪ್ರಮಾಣ ಪತ್ರ ನೀಡಿ ವಿದ್ಯಾರ್ಥಿಗಳಿಗೆ ಓದುವ ಅಭಿರುಚಿಯನ್ನು ಹೆಚ್ಚಿಸಲಾಗುತ್ತಿದೆ.

‘ಈ ಕಾರ್ಯಕ್ರಮದಿಂದ ಹಲವಾರು ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ಜೀವನ ದರ್ಶನವಾಗಿದೆ. ಅನೇಕರು ಪ್ರಭಾವಿತರಾಗಿದ್ದಾರೆ. ಅಂಬೇಡ್ಕರ್‌ ಅವರು ತಾಸುಗಟ್ಟಲೇ ಗ್ರಂಥಾಲಯಗಳಲ್ಲಿ ಓದುವಿಕೆಯಲ್ಲಿ ತೊಡಗಿಸಿಕೊಸಿಕೊಳ್ಳುತ್ತಿದ್ದರು. ಅಧ್ಯಯನದ ಮೂಲಕವೇ ಅನೇಕ ದೇಶಗಳ ಸಂವಿಧಾನವನ್ನು ಓದಿದ್ದಾರೆ. ಈ ಮೂಲಕ ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ ರಚಿಸಿದ್ದಾರೆ. ಅವರ ಜೀವನ ವಿದ್ಯಾರ್ಥಿಗಳಿಗೆ ಆದರ್ಶ ಪ್ರಾಯವಾಗಿದೆ. ಅವರ ವಿಚಾರಧಾರೆ ತಿಳಿದುಕೊಳ್ಳಲು ಸಹಾಯವಾಗಿದೆ. ಹೀಗಾಗಿ ಸರ್ಕಾರ ಇಂಥ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ’ ಎನ್ನುತ್ತಾರೆಕನ್ನಡ ಮತ್ತು ಸಂಸ್ಕೃತಿ ಇಲಾಖೆಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ.

‘ವಿದ್ಯಾರ್ಥಿಗಳು ಆನ್‌ಲೈನ್‌ ಗೆಮ್‌, ವಾಟ್ಸ್‌ ಆ್ಯಪ್, ಫೇಸ್‌ಬುಕ್‌ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುತ್ತಾರೆ. ಅವರಿಗೆ ಓದಿನ ಬಗ್ಗೆ ಮಾಹಿತಿ ನೀಡಿ, ಅತ್ತ ಅವರನ್ನು ಸೆಳೆಯುವ ಕಾರ್ಯಕ್ರಮ ಇದು. ವಿವಿಧ ಸ್ಪರ್ಧೆ ಏರ್ಪಡಿಸಿ ಪುಸ್ತಕಗಳನ್ನು ಬಹುಮಾನವಾಗಿ ನೀಡುವ ಮೂಲಕ ಓದುವ ಹವ್ಯಾಸ ಹೆಚ್ಚಿಸಿಕೊಳ್ಳುವಂತೆ ಉಪನ್ಯಾಸ ನೀಡಲಾಗುತ್ತಿದೆ' ಎನ್ನುತ್ತಾರೆ ಅವರು.

***

ಅಂಬೇಡ್ಕರ್‌ ಅವರು ಯಾವ ರೀತಿ ಅಧ್ಯಯನಶೀಲರಾಗಿದ್ದರು. ಅದರಿಂದ ದೇಶಕ್ಕೆ ಸಂವಿಧಾನ ರಚನೆಗೆ ಕಾರಣರಾಗಿದ್ದಾರೆ. ಅದರಂತೆ ವಿದ್ಯಾರ್ಥಿಗಳಿಗೆ ಅವರ ಜೀವನ ಸಾಧನೆಗಳನ್ನು ತಿಳಿಸುವ ಅಂಬೇಡ್ಕರ್ ಓದು ಕಾರ್ಯಕ್ರಮವಾಗಿದೆ

ಕೊಟ್ರೇಶ ಮರಬನಹಳ್ಳಿ, ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

***

ಅಂಬೇಡ್ಕರ್‌ ಓದು ಮೂಲಕ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ಈ ಮೂಲಕ ವಿದ್ಯಾರ್ಥಿಗಳು ಅಂಬೇಡ್ಕರ್‌ ಅವರನ್ನು ಓದಲು, ಅಧ್ಯಯನ ಕೈಗೊಳ್ಳಲು ಸಾಧ್ಯವಾಗುತ್ತದೆ

ಗೋಪಾಲ ದಾಸನಕೇರಿ, ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT