ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಡಗರದ ಎಳ್ಳ ಅಮಾವಾಸ್ಯೆ

Last Updated 26 ಡಿಸೆಂಬರ್ 2019, 12:10 IST
ಅಕ್ಷರ ಗಾತ್ರ

ಸೈದಾಪುರ: ಗ್ರಾಮೀಣ ಭಾಗದ ರೈತರು ಬುಧವಾರ ಎಳ್ಳ ಅಮಾವಾಸ್ಯೆ ಹಬ್ಬವನ್ನು ಭೂ ತಾಯಿಗೆ ಭಕ್ತಿಯಿಂದ ಚರಗ ಚೆಲ್ಲುವು ಮೂಲಕ ಸಂಭ್ರಮದಿಂದ ಆಚರಿಸಿದರು.

ರೈತಾಪಿ ವರ್ಗ ಕುಟುಂಬ ಮತ್ತು ಸ್ನೇಹಿತರ ಜೊತೆಗೂಡಿ ತಮ್ಮ ಹೊಲಗಳಿಗೆ ತೆರಳಿ ಪಾಂಡವರ ರೂಪದಲ್ಲಿ 5 ಕಲ್ಲುಗಳನ್ನು ಬನ್ನಿ ಮರದ ಪಕ್ಕ ಇಟ್ಟು ಪೂಜೆ ಸಲ್ಲಿಸಿದರು. ಭೂಮಿ ತಾಯಿಗೆ ಸೀರೆ ಅರ್ಪಿಸಿ ತಾವು ಮನೆಯಿಂದ ತೆಗೆದುಕೊಂಡ ಬಂದಿದ್ದ ಆಹಾರ ಪದಾರ್ಥಗಳಾದ ಸಜ್ಜೆ ರೊಟ್ಟಿ, ಶೇಂಗಾ ಹೋಳಿಗೆ, ಕಡಬು, ಬದನೆಕಾಯಿ, ಪುಂಡೆಪಲ್ಲೆ ಅನ್ನ, ಸಾರು, ಒಂದೆ ತಟ್ಟೆಯಲ್ಲಿ ಕಲುಕಿ ಜಮೀನಿನ ಸುತ್ತೆಲ್ಲಾ ಚರಗಾ ಚೆಲ್ಲಿ ಫಸಲು ಚನ್ನಾಗಿ ಇರಲಿ ಎಂದು ಪ್ರಾರ್ಥಿಸಿದರು.

ಆದರೆ ಈ ಸಲ ರೈತರು ಜೋಳದ ಬೆಳೆಯನ್ನು ಕಡಿಮೆ ಬೆಳೆದರೂ ಹಬ್ಬವನ್ನು ಸಂತೋಷ ಸಂಭ್ರಮದಿಂದ ಆಚರಿಸಿಲಾಯಿತು. ಇನ್ನೂ ಕೆಲ ರೈತರು ತಮ್ಮ ಹೊಲದಲ್ಲಿ ಜೋಳ ಬೆಳಯದಿದ್ದರೂ ತಮ್ಮ ಹೊಲಕ್ಕೆ ಹೋಗಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಬಂದಿದ್ದಾರೆ. ಆದರೂ ಅಮಾವಾಸ್ಯೆ ದಿನವನ್ನು ಭೂ ಮಾತೆಯನ್ನು ಆರಾಧನೆ ಮಾಡುವ ಪವಿತ್ರ ದಿನಾವಾಗಿ ಆಚರಿಸುತ್ತಿರುವ ಹಬ್ಬವಾಗಿರುವುದು ವಿಶೇಷವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT