ಗುರುವಾರ , ಅಕ್ಟೋಬರ್ 29, 2020
27 °C

ಭೀಮಾ ಪ್ರವಾಹ; ₹ 80 ಕೋಟಿ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ತಾಲ್ಲೂಕಿನಲ್ಲಿ ಭೀಮಾ ಪ್ರವಾಹದಿಂದ ಮನೆಗಳು, ಬೆಳೆಗಳು ರಸ್ತೆ ಸೇರಿದಂತೆ  ₹ 80 ಕೋಟಿ ಹಾನಿಯಾಗಿದೆ. ಸರ್ಕಾರ ತಕ್ಷಣ ಪರಿಹಾರ ನೀಡಬೇಕೆಂದು ಶಾಸಕ ಎಂ.ವೈ.ಪಾಟೀಲ ಒತ್ತಾಯಿಸಿದರು.

ಭೀಮಾ ಪ್ರವಾಹಕ್ಕೆ ಒಳಗಾಗಿರುವ ತಾಲ್ಲೂಕಿನ ಜೇವರ್ಗಿ(ಬಿ), ಭಂಕಲಗಾ, ಗೌರ(ಕೆ), ಗೌರ(ಬಿ) ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ನಂತರ ಮಾತನಾಡಿದ ಅವರು, ಜನರು ಕಷ್ಟದಲ್ಲಿದ್ದಾರೆ. ಅವರಿಗೆ ತುರ್ತಾಗಿ ಪರಿಹಾರ ಬೇಕಿದೆ ಎಂದರು.

ಪ್ರವಾಹ ನಿಂತ ತಕ್ಷಣ ಕೃಷಿ, ಕಂದಾಯ, ತೋಟಗಾರಿಕೆ ಅಧಿಕಾರಿಗಳು ಜಂಟಿಯಾಗಿ ಪ್ರತಿ ರೈತರ ಜಮೀನುಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಕಳುಹಿಸಬೇಕು. ಸರ್ಕಾರವು ಸಹ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ನೀಡಬೇಕು. ಸರ್ಕಾರ ಪರಿಹಾರ ನೀಡುವಲ್ಲಿ ಅಸಡ್ಡೆ ಮಾಡಬಾರದು. ಸಂತ್ರಸ್ತರು ಕಷ್ಟದಲ್ಲಿದ್ದಾರೆ ಎಂದು ಚಿಂತೆಯಲ್ಲಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಶಿರಸಗಿ, ಜಿ.ಪಂ ಮಾಜಿ ಸದಸ್ಯರಾದ ಪ್ರಕಾಶ ಜಮಾದಾರ, ಸಂಗನಗೌಡ ಪಾಟೀಲ ಸೊನ್ನ, ಶ್ರೀಶೈಲ ಪಾಟೀಲ ಗೌರ, ಸಂತೋಷ ವಗದರಗಿ, ಸಿದ್ದು ಶಿರಸಗಿ, ದುಂಡೇಶ ಗೌರ, ವಿಶ್ವನಾಥ ಕಾಮನಳ್ಳಿ, ಕಲ್ಲಪ್ಪ ಪ್ಯಾಟಿ, ವಿಠ್ಠಲ ಜಾಮಗೊಂಡ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.