ಯಾದಗಿರಿ, ಕೆಂಭಾವಿಯಲ್ಲಿ ಉತ್ತಮ ಮಳೆ

ಯಾದಗಿರಿ: ನಗರ ಸೇರಿದಂತೆ ಕೆಂಭಾವಿ ವಲಯದಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ. ಉಳಿದೆಡೆ ಮೋಡ ಕವಿದ ವಾತಾವರಣ ಇತ್ತು.
ನಗರದಲ್ಲಿ ಭಾನುವಾರ ಸಂಜೆ 4.30 ರಿಂದ 5 ಗಂಟೆ ವರೆಗೆ ಜೋರುಗಾಳಿ ಸಮೇತ ಮಳೆಯಾಯಿತು. ನಗರದ ರೈಲ್ವೆ ಸ್ಟೇಷನ್ ರಸ್ತೆಯ ತಗ್ಗು ಪ್ರದೇಶದಲ್ಲಿ ನೀರು ನಿಂತು ಆಟೊ, ಸರಕು ಸಾಗಣೆ ವಾಹನ ಸವಾರರು ಪರದಾಡಿದರು.
ಕೆಂಭಾವಿಯ ಗುತ್ತಿಬಸವೇಶ್ವರ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ರಸ್ತೆ ಮೇಲೆ ನೀರು
ನಿಂತುಕೊಂಡಿತ್ತು.
ಮುಂಗಾರು ಬೆಳೆ ಬಿತ್ತನೆ: ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಆರಂಭವಾಗಿದ್ದು, ಹೆಸರು, ಉದ್ದು ಬಿತ್ತನೆ ಆರಂಭವಾಗಿದೆ. ಜಿಲ್ಲೆಯಲ್ಲಿ 16 ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರದಿಂದ ಈಗಾಗಲೇ 111 ಕ್ವಿಂಟಲ್ ಬೀಜ ರಿಯಾಯಿತಿ ದರದಲ್ಲಿ ಮಾರಾಟವಾಗಿದೆ ಎಂದು ಕೃಷಿ ಉಪನಿರ್ದೇಶಕ ಡಾ.ಬಾಲರಾಜ ರಂಗರಾವ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.