ಸೋಮವಾರ, ಡಿಸೆಂಬರ್ 5, 2022
21 °C

ಅಧಿಕಾರಿಗಳ ಗ್ರಾಮ ವಾಸ್ತವ್ಯ; ಸ್ಥಳದಲ್ಲೇ ಅರ್ಜಿ ವಿಲೇವಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ವಡಗೇರಾ ತಾಲ್ಲೂಕಿನ ಜೋಳದಡಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಯೋಜನೆಯಡಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಿತು.

ತಹಶೀಲ್ದಾರ್‌ ಸುರೇಶ ಅಂಕಲಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಆಭಾ ಕಾರ್ಡ್‌ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಆದರೆ, ಬಹಳಷ್ಟು ಜನರು ಇದರ ಬಗ್ಗೆ ಆಸಕ್ತಿ ತೊರದೆ ಕೆಲವೇ ಕೆಲವು ಜನರು ಮಾತ್ರ ಇಲ್ಲಿಯವರೆಗೆ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ.

ಪ್ರತಿಯೊಬ್ಬರು ಆಭಾ ಕಾರ್ಡ್‌ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಒಟ್ಟು 55 ಅರ್ಜಿಗಳು ಸ್ವೀಕೃತಿಯಾಗಿದ್ದು, ಎಸ್‌ಎಸ್‌ವೈ7, ಪಿಎಚ್‌ಪಿ 1, ಪಹಣಿ ತಿದ್ದುಪಡಿ 13 ಸೇರಿ ಒಟ್ಟು 21 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಲಾಗಿದೆ. ಬಾಕಿ 34 ಅರ್ಜಿಗಳು ಉಳಿದಿವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ
ನೀಡಿದರು.

ಗ್ರೇಡ್-2 ತಹಶೀಲ್ದಾರ್‌ ಪ್ರಕಾಶ ಹೊಸಮನಿ, ಉಪ ತಹಶೀಲ್ದಾರ್‌ ಸಂಗಮೇಶ ದೇಸಾಯಿ, ಕಂದಾಯ ನಿರೀಕ್ಷಕರಾದ ಗಿರೀಶ ರಾಯಕೋಟಿ, ಸಿದ್ಧಯ್ಯಸ್ವಾಮಿ, ಗ್ರಾಮ ಲೆಕ್ಕಿಗರಾದ ಬಸವರಾಜ ಮೂಡಗಿ, ಬಸವರಾಜ ವಾಲೀಕಾರ, ಸಿದ್ದಣ್ಣಗೌಡ
ಸೇರಿದಂತೆ ಗ್ರಾಮಸ್ಥರು, ಅಧಿಕಾರಿಗಳು ಇದ್ದರು.

24 ಅರ್ಜಿ ಸ್ವೀಕೃತ, 12 ವಿಲೇವಾರಿ

ಗುರುಮಠಕಲ್: ತಾಲ್ಲೂಕಿನ ಯಲಸತ್ತಿ ಗ್ರಾಮದಲ್ಲಿ ಶನಿವಾರ ಜರುಗಿದ ತಾಲ್ಲೂಕು ಮಟ್ಟದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಒಟ್ಟು 24 ಅರ್ಜಿಗಳು ಸ್ವೀಕೃತವಾಗಿದ್ದು, 12 ಅರ್ಜಿಗಳನ್ನು ಸ್ಥಳದಲ್ಲೇಲೆ ವಿಲೇವಾರಿ ಮಾಡಲಾಗಿದೆ.

ಸಂಧ್ಯಾ ಸುರಕ್ಷಾ 8, ವಿಧವಾ ವೇತನ 2, ಅಂಗವಿಕ ವೇತನ 2, ಪಂಚಾಯತ್ ರಾಜ್ 3, ಶಿಕ್ಷಣ 1, ಜೆಸ್ಕಾಂ 1, ಭೂಮಿ ಕೇಂದ್ರ 1, ಸಿಡಿಪಿಒ 2, ಸಾರಿಗೆ ಸಂಸ್ಥೆ 1, ದೇವಸ್ಥಾನ 1, ಲೋಕೋಪಯೋಗಿ 2 ಸೇರಿ ಒಟ್ಟು 24 ಅರ್ಜಿಗಳು ಸ್ವೀಕರಿಸಿದ್ದು, ವಿವಿಧ ಪಿಂಚಣಿ ಯೋಜನೆಗಳ 12 ಅರ್ಜಿಗಳನ್ನು ವಿಲೇವಾರಿ ಮಾಡಿ ಫಲಾನುಭವಿಗಳಿಗೆ ವಿತರಿಸಲಾಗಿದೆ. ಉಳಿದ ಅರ್ಜಿಗಳನ್ನು ಸಂಬಧಿತ ಇಲಾಖೆಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ತಹಶೀಲ್ದಾರ್ ಶರಣಬಸವ ರಾಣಪ್ಪ ಭರವಸೆ ನೀಡಿದರು.

ಸಿಡಿಪಿಒ ವನಜಾಕ್ಷಿ ಬೆಂಡಗೇರಿ, ಕೃಷಿ ಅಧಿಕಾರಿ ಮಹಿಪಾಲರೆಡ್ಡಿ ತಮ್ಮ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳು, ಯೋಜನೆಗಳು ಹಾಗೂ ಸದ್ಯ ಅವರುಗಳ ಗುರಿ ಕುರಿತು ಮಾಹಿತಿ ನೀಡಿದರು.

ಆರೋಗ್ಯ ಇಲಾಖೆಯ ಸಿಬ್ಬಂದಿ ಆನೆಕಾಲು ರೋಗದ ಕುರಿತು ಜಾಗೃತಿ ಮೂಡಿಸಿ ಮಾತ್ರೆ
ವಿತರಿಸಿದರು.

ಗ್ರೇಡ್-2 ತಹಶೀಲ್ದಾರ್ ನರಸಿಂಹಸ್ವಾಮಿ, ಉಪ ತಹಶೀಲ್ದಾರ್ ಬಸವರಾಜ ಸಜ್ಜನ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾ, ಉಪಾಧ್ಯಕ್ಷೆ ಮಾಣಿಕಮ್ಮ, ಕಂದಾಯ ನಿರೀಕ್ಷಕ ಭೀಮಸೇನರಾವ ಪಾಟೀಲ, ಪಿಡಿಒ ಶರಣಪ್ಪ ಮೈಲಾರಿ ಸೇರಿದಂತೆ ಜೆಸ್ಕಾಂ, ಆರೋಗ್ಯ ಅಧಿಕಾರಿಗಳು, ಗ್ರಾಮಲೆಕ್ಕಿಗರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.