ವಡಗೇರಾ: ತಾಲ್ಲೂಕಿನ ಮಾಚನೂರ ಗ್ರಾಮದ ಗ್ರಾಮದೇವತೆ ಮರಗಮ್ಮದೇವಿಯ 13ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಭವ್ಯ ರಥೋತ್ಸವವು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ರಥೋತ್ಸವದ ನಿಮಿತ್ತ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಪಲ್ಲಕ್ಕಿಯನ್ನು ಮೆರವಣಿಗೆ ಮಾಡಲಾಯಿತು. ನಂತರ ರಥಕ್ಕೆ ಹೂಗಳಿಂದ ಅಲಂಕರಿಸಿ ಸಂಜೆ ರಥೋತ್ಸವ ಜರುಗಿತು.

ಈ ವೇಳೆ ಭಕ್ತರು ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು, ಮಂಡಳ ಎಸೆದು ಭಕ್ತಿ ಪರಾಕಾಷ್ಠೆ ಮೆರೆದರು. ‘ಮರಗಮ್ಮದೇವಿ ಪರಾಕ್..’ ಅಂತ ಘೋಷಣೆ ಕೂಗುತ್ತಾ ರಥೋತ್ಸವ ಭಕ್ತರು ಕಣ್ಣು ತುಂಬಿಕೊಂಡರು.

ಈ ಸಂದರ್ಭದಲ್ಲಿ ಶರಣಯ್ಯಸ್ವಾಮಿ, ಸಿದ್ದಯ್ಯಸ್ವಾಮಿ, ಬಸು ಮುತ್ಯಾ, ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ, ವಿಜಯ್ ರಾಘವರೆಡ್ಡಿ ಮಾಲೀಪಾಟೀಲ, ವೀರಭದ್ರಪ್ಪಗೌಡ ಪೊಲೀಸ್ ಪಾಟೀಲ, ವೀರುಪಾಕ್ಷಪ್ಪಗೌಡ ಪರಸಾಪೂರ, ಪ್ರಭು ಪೂಜಾರಿ, ಗಡ್ಡೆಪ್ಪ ಪೂಜಾರಿ, ಹಣಮಂತ ಪೂಜಾರಿ, ಮರೆಪ್ಪ ಪೂಜಾರಿ, ಮಲ್ಲಪ್ಪ, ಮೋನಪ್ಪ, ರವಿ, ಹಣಮಂತ, ಭಾಗಪ್ಪ, ಭೀಮರಾಯ್, ಶಂಕ್ರೆಪ್ಪ, ಬಸಪ್ಪ, ಬುಗಪ್ಪ, ಸಿದ್ದಪ್ಪ, ಬಾಲಪ್ಪ, ಭೀಮಾಶಂಕರ, ಮಲ್ಲಪ್ಪ, ಜಗದೀಶ ಗ್ರಾಮಸ್ಥರು, ಭಕ್ತರು ಹಾಗೂ ಸಹಸ್ರಾರು ಭಕ್ತರು ಭಾಗಿಯಾಗಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.