ಶಹಾಪುರ: ನಗರದ ಮಮದಾಪುರ ಬಡಾವಣೆಯಲ್ಲಿನ ಕೂಲಿ ಕಾರ್ಮಿಕ ಮಲ್ಲಪ್ಪ ಅವರ ಶೆಡ್ ಶುಕ್ರವಾರ ಆಕಸ್ಮಿಕ ವಿದ್ಯುತ್ ಅವಘಡದಿಂದ ಬೆಂಕಿಗೆ ಆಹುತಿಯಾಗಿ ಶೆಡ್‌ನಲ್ಲಿದ್ದ ದಿನಸಿ ವಸ್ತುಗಳು ಸೇರಿದಂತೆ ಬಟ್ಟೆ ಸಹಿತ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಭೇಟಿ ನೀಡಿ ವೈಯಕ್ತಿಕ ಸಹಾಯಧನ ನೀಡಿದರು.
ಅಲ್ಲದೆ ನಗರಸಭೆಯ ನಗರೋತ್ಥಾನ ಯೋಜನೆಯ 4ನೇ ಹಂತದಲ್ಲಿ ಕಾರ್ಮಿಕನಿಗೆ ಪಕ್ಕಾ ಮನೆ ನಿರ್ಮಿಸಿಕೊಳ್ಳಲು ₹2.50ಲಕ್ಷ ಅನುದಾನವನ್ನು ಸ್ಥಳದಲ್ಲಿಯೇ ಇದ್ದ ನಗರಸಭೆ ಪೌರಾಯುಕ್ತ ರಮೇಶ ಬಡಿಗೇರ್ ಅವರಿಗೆ ಸೂಚನೆ ನೀಡಿ ಮಂಜೂರು ಮಾಡಿಸಿದರು.
ನಗರಸಭೆ ಪೌರಾಯುಕ್ತ ರಮೇಶ ಬಡಿಗೇರ್, ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್, ಮುಖಂಡರಾದ ಸೈಯದ್ ಮುಸ್ತಫಾ ದರ್ಬಾನ್, ಮಲ್ಲೇಶಿ ಮಮದಾಪುರ, ಸಣ್ಣ ಮಾನಯ್ಯ ಹಾದಿಮನಿ, ಶಿವಮಹಾಂತ ಚಂದಾಪುರ, ಮಲ್ಲಪ್ಪ ಗೋಗಿ,ನಿಂಗಣ್ಣ ರಾಕಂಗೇರಿ ಉಪಸ್ಥಿತರಿದ್ದರು.