ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ ಜಿಲ್ಲೆಯ ಕಲಾವಿದರಿಗೆ ಅನ್ಯಾಯ: ರವಿ

Published 12 ಆಗಸ್ಟ್ 2024, 15:37 IST
Last Updated 12 ಆಗಸ್ಟ್ 2024, 15:37 IST
ಅಕ್ಷರ ಗಾತ್ರ

ಯಾದಗಿರಿ: ‘ಜಿಲ್ಲೆಯಾಗಿ 14 ವರ್ಷಗಳಾದರೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಜಿಲ್ಲೆಯಿಂದ ನಾಟಕ ಅಕಾಡೆಮಿಗೆ ಯಾವೊಬ್ಬ ಕಲಾವಿದರನ್ನು ಸದಸ್ಯರನ್ನಾಗಿ ಮಾಡದೆ ಕಲಾವಿದರನ್ನು ಅವಮಾನ ಮಾಡಿದ್ದಾರೆ’ ಎಂದು ಸುರಪುರ ನಾಟ್ಯ ಹವ್ಯಾಸಿ ಕಲಾವಿದರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ರವಿ ನಾಯಕ ಬೈರಿಮಡ್ಡಿ ಆರೋಪಿಸಿದರು.

ರಾಜಕೀಯ ಇಚ್ಛಾಶಕ್ತಿ ಕೊರತೆ ಹಾಗೂ ಕನ್ನಡ ಸಂಸ್ಕೃತ ಇಲಾಖೆ ನಿರ್ಲಕ್ಷ್ಯತನದಿಂದ ಜಿಲ್ಲೆಗೆ ಕರ್ನಾಟಕ ನಾಟಕ‌ ಅಕಾಡೆಮಿ ಪ್ರಶಸ್ತಿಗೆ ಜಿಲ್ಲೆಯ ಕಲಾವಿದರನ್ನು ಪ್ರತಿವರ್ಷ ಕಡೆಗಣಿಸುತ್ತಿರುವುದು‌ ಖಂಡರ್ನಾಹ’ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಕೊಡ ಮಾಡುವ ವಾರ್ಷಿಕ ಪ್ರಶಸ್ತಿಯಲ್ಲಿ ಜಿಲ್ಲೆಯ ಕಲಾವಿದರಿಗೆ ಸರ್ಕಾರ ಅನ್ಯಾಯ ಮಾಡಿ ನೆರೆಯ ಜಿಲ್ಲೆ ಕಲಬುರಗಿಯಿಂದ ಪ್ರಶಸ್ತಿಗೆ ಆಯ್ಕೆ ಮಾಡಿ ಸುಮಾರು 14 ವರ್ಷಗಳಲ್ಲಿ ಕೇವಲ 2 ಬಾರಿ ಜಿಲ್ಲೆಗೆ ಪ್ರಶಸ್ತಿ ನೀಡಿ 3 ನೇ ಬಾರಿ ಜಿಲ್ಲೆ ನಾಮನಿರ್ದೇಶನವಾಗಿದೆ. ಆದರೆ, ಪ್ರಶಸ್ತಿ ಸ್ವೀಕರಿಸುವ ಕಲಾವಿದ ನೆರೆಯ ಕಲಬುರಗಿ ಜಿಲ್ಲೆಯವರಾಗಿದ್ದು, ಜಿಲ್ಲೆಗೆ ಕಡೆಗಣನೆ ಮಾಡಿ ಅವಕಾಶ ವಂಚಿತರನ್ನಾಗಿ ಮಾಡಿದ್ದಾರೆ. ಕೂಡಲೇ ಇದನ್ನು ರದ್ದುಪಡಿಸಿ ಜಿಲ್ಲೆಯ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡುವ ಕೆಲಸ ಆಗಬೇಕು ಎಂದು ಹೇಳಿದರು.

ಕೂಡಲೇ ಈ ವಾರ್ಷಿಕ ಪ್ರಶಸ್ತಿ ರದ್ದು ಮಾಡಿ ಜಿಲ್ಲೆಯ ಕಲಾವಿದರು ಆಯ್ಕೆ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ‌ನೀಡಿದರು.

ಮೂಕ‌ನಾಯಕ ಸಾಂಸ್ಕೃತಿಕ ಕಲಾ‌ ನಾಟ್ಯ ಸಂಘದ ಅಧ್ಯಕ್ಷ ಮಲ್ಲೇಶ ಕೋನಾಳ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಾಂತಯ್ಯ ಸ್ವಾಮಿ ಖಾನಾಪುರ, ಕಲಾವಿದರಾದ ಶಂಕರ ‌ಶಾಸ್ತ್ರಿ, ಬಸವರಾಜ ಮುಂಡರಗಿ, ರಂಗನಾಥ ದೊರೆ, ಸಾಬಯ್ಯ ಕಲಾಲ್‌ ಮುಂಡರಗಿ, ಇಸ್ಮಾನ ಪಟೇಲ್ ಮುಂಡರಗಿ, ದೊಡ್ಡ ನಾಗೇಶ ಶಾರದಳ್ಳಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT