ಗುರುವಾರ , ನವೆಂಬರ್ 14, 2019
19 °C

ಕಣ್ವಮಠದ ಶ್ರೇಯಾಭಿವೃದ್ಧಿಗೆ ಬದ್ಧ: ಜೋಶಿ

Published:
Updated:
Prajavani

ಕಕ್ಕೇರಾ: ‘ ಪ್ರಮುಖ ಮಠದಲ್ಲಿ ಕಣ್ವಮಠ ಒಂದಾಗಿದ್ದು, ಭಕ್ತರ ಶ್ರೇಯಾಭಿವೃದ್ಧಿ ಹಾಗೂ ಧಾರ್ಮಿಕ ಪರಂಪರೆ  ಉಳಿವಿಗೆ ಶ್ರಮಿಸಲಾಗುವುದು’ ಎಂದು ಕಣ್ವಮಠದ ನೂತನ ಪೀಠಾಧಿಪತಿ ರವೀಂದ್ರಾಚಾರ್ಯ ಜೋಶಿ ಹೇಳಿದರು.

ಸಮೀಪದ ಹುಣಸಿಹೊಳೆ ಕಣ್ವಮಠದಲ್ಲಿ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು.

‘ಕಣ್ವಮಠವು ಆಚಾರ, ವಿಚಾರ, ನೇಮ, ಶುಕ್ಲಯಜುರ್ವೇದ ಪಠಣದಲ್ಲಿ ವಿಶಿಷ್ಟತೆ ಹೊಂದಿದೆ. ಹೀಗಾಗಿ ಪರಂಪರೆಯಿಂದ ಬೆಳೆದು ಬಂದ ಧಾರ್ಮಿಕ ವಿಧಿ ವಿಧಾನ ಉಳಿಸಿಕೊಂಡು ಮಠದ ಅಭಿವೃದ್ಧಿಯ ಜತೆಗೆ ಭಕ್ತರ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಲಾಗುವುದು’ ಎಂದು ತಿಳಿಸಿದರು.

‘ಭಕ್ತರೇ ಮಠಕ್ಕೆ ಉಸಿರು. ಭಕ್ತರ ಆಕಾಂಕ್ಷೆಗೆ ಆರ್ಶೀವದಿಸುತ್ತಾ ಕಣ್ವಮಠದ ಮೇಲೆ ಇಟ್ಟಿರುವ ಸೇವಾ ಭಕ್ತಿ ಉಳಿಸಿಕೊಂಡು ಮಠಕ್ಕೆ ಇನ್ನುಮುಂದೆ ಯಾವುದೇ ಕಪ್ಪು ಚುಕ್ಕೆ ಬರದಂತೆ ಸೇವೆ ಮಾಡುತ್ತೇನೆ’ ಎಂದು ಶ್ರೀಗಳು ಹೇಳಿದರು.

ಬೆಂಗಳೂರು, ಕಲಬುರ್ಗಿ, ಯಾದಗಿರಿ, ಹಟ್ಟಿ, ಮಸ್ಕಿ, ಸಿಂಧನೂರು ಸೇರಿದಂತೆ ವಿವಿಧ ಕಡೆಯಿಂದ ಬಂದಿದ್ದ ಭಕ್ತರು ಹಾಜರಿದ್ದರು.

ಈ ಸಂದರ್ಭದಲ್ಲಿ ಕಣ್ವಮಠದ ಆಡಳಿತ ಮಂಡಳಿ ಟ್ರಸ್ಟ್ ಯಲಹಂಕದ ಮಲತ್ತಳ್ಳಿ ವೆಂಕಟೇಶ ಮೂರ್ತಿ, ಭೀಮಶೇನ ಗುಡಿ, ಕೈವಾರ ಕೃಷ್ಣಮೂರ್ತಿ, ರವಿಕಿರಣ ಕುಲಕರ್ಣಿ ಹಾಗೂ ಟ್ರಸ್ಟಿನ ಹುಣಸಿಹೊಳೆಯ ಡಾ.ವೈ.ವಿ.ನಾಗರಾಜರಾವ್, ರಾಘವೇಂದ್ರ ಕಾಮನಟಗಿ, ಗಂಗಾಧರ ಜೋಶಿ, ಸುರೇಶ ಜೋಶಿ ಹುಣಸಿಹೊಳೆ, ಮನೋಹರ ಮೂಡಿಗೇರಿ, ವೆಂಕಟೇಶ ಮೂರ್ತಿ, ಎನ್., ಅಖಿಲ‌ ಭಾರತ ಕಣ್ವ ಪರಿಷತ್ತಿನ ಅಧ್ಯಕ್ಷ ಪಿ.ಎಸ್.ಕುಲಕರ್ಣಿ, ಮಠದ ದಿವಾನ ಸುರೇಶ ಕುಲಕರ್ಣಿ, ರಾಘವೇಂದ್ರ ಪುರೋಹಿತ ಸೇರಿದಂತೆ ಮಠದ ಭಕ್ತರು ಇದ್ದರು.

ಪ್ರತಿಕ್ರಿಯಿಸಿ (+)