ಹುಣಸಗಿ: ಕಾಲಜ್ಞಾನಿ ಕೊಡೇಕಲ್ಲ ಬಸವಣ್ಣನವರ ಮೂರನೇ ಪುತ್ರರಾದ ಸಂಗಮೇಶ್ವರರ (ಸಂಗಯ್ಯ) ಅವರ ಜಾತ್ರೆಯು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯಲ್ಲಿ ಬುಧವಾರ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಬುಧವಾರ ಬೆಳಿಗ್ಗೆಯಿಂದ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಳ್ಳಲು ನೂರಾರು ಭಕ್ತರು ಕೊಡೇಕಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಪಾದಯಾತ್ರೆಯ ಕಳೆದ ಎರಡು ವಾರಗಳ ಹಿಂದೆ ತೆರಳಿದ್ದರು.

ಕನಕದಾಸರ ಮುಂಡಿಗೆಗಳನ್ನು ಬಿಡಲು ತೆರಳಿದ ಸಂಗಮೇಶ್ವರರು ಕಾಗಿನೆಲೆಯಲ್ಲಿ ನೆಲೆಸಿ ನಂಬಿ ಬರುವ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾ, ಎಲ್ಲರನ್ನು ಪೊರೆಯುವ ದೇವರು ಎಂದು ಈ ಭಾಗದ ಭಕ್ತರ ನಂಬಿಕೆಯಾಗಿದೆ. ಕಾಗಿನೆಲೆಯ ಸಂಗಯ್ಯನ ಜಾತ್ರೆಯ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಗದ್ದುಗೆಗೆ ಅಷ್ಟವಿಧಾರ್ಚನೆ ವಿಶೇಷ ಪೂಜೆ ನೆರವೆರಿದವು.

ಕೊಡೇಕಲ್ಲ ಬಸವ ಪೀಠ ಮಹಲಿನಮಠದ ವೃಷಬೇಂದ್ರ ಅಪ್ಪನವರ ಸಾನ್ನಿಧ್ಯದಲ್ಲಿ ಬೆಳಿಗ್ಗೆ ಛತ್ರ ಚಾಮರ ಹಾಗೂ ಮಂಗಳವಾದ್ಯ ಮೇಳಗಳೊಂದಿಗೆ ವಿವಿಧ ಹೂಗಳಿಂದ ಅಲಂಕೃತ ಸಂಗಯ್ಯ ದೇವರ ಪಲ್ಲಕ್ಕಿಯ ಉತ್ಸವ ಸಂಭ್ರಮದೊಂದಿಗೆ ಆರಂಭವಾಯಿತು. ರಾಜಬೀದಿಗಳಲ್ಲಿ ಪಲ್ಲಕ್ಕಿ ಸಾಗಿ ಮತ್ತೆ ಮಧ್ಯಾಹ್ನ ದೇವಸ್ಥಾನ ತಲುಪಿತು. ಜಾತ್ರೆಯಲ್ಲಿ ಪಾಲ್ಗೊಂಡು ಬಹುತೇಕ ಭಕ್ತರು ಮುಡುಪು ಸಮರ್ಪಿಸಿ ಕೃತಾರ್ಥರಾದರು.

ಹುಣಸಗಿ ತಾಲ್ಲೂಕಿನ ಕೊಡೇಕಲ್ಲ, ಬೂದಿಹಾಳ, ರಾಜನಕೋಳೂರು, ಹಾಗೂ ಸುರಪುರ ರಂಗಂಪೇಟ, ಅಮ್ಮಾಪುರ, ವಿಜಯಪುರ ಜಿಲ್ಲೆಯ ವೀರೇಶ ನಗರ, ನಾಲತವಾಡ, ಮುದ್ದೇಬಿಹಾಳ, ಆಹೇರಿ, ಕಗ್ಗೋಡ ಸೇರಿದಂತೆ ಇತರ ಭಾಘಗಳಿಂದ ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಭಕ್ತಿ ಸಮರ್ಪಿಸಿದರು ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.