ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸಗಿ: ಎಲ್ಲೆಡೆ ಕರ್ನಾಟಕ ರಾಜ್ಯೋತ್ಸವ ಸಂಭ್ರಮ

ಹೋರಾಟಗಾರ, ಕವಿಗಳ ವೇಷ ಧರಿಸಿದ ಮಕ್ಕಳು, ಉಪನ್ಯಾಸ ಆಯೋಜನೆ
Last Updated 2 ನವೆಂಬರ್ 2022, 7:16 IST
ಅಕ್ಷರ ಗಾತ್ರ

ಹುಣಸಗಿ: ‘ಕನ್ನಡ, ಭಾಷೆ, ಸಾಂಸ್ಕೃತಿಕ ಪರಂಪರೆ ಮತ್ತು ಸಾಹಿತ್ಯಕ್ಕೆ ತನ್ನದೇ ಆದ ಐತಿಹಾಸಿಕ ಮಹತ್ವವಿದ್ದು, ಅದನ್ನು ಪ್ರತಿಯೊಬ್ಬ ಕನ್ನಡಿಗರೂ ತಿಳಿದುಕೊಳ್ಳಬೇಕು’ ಎಂದು ತಹಶೀಲ್ದಾರ್ ಜಗದೀಶ ಚೌರ್ ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ತಾಲ್ಲೂಕ ಆಡಳಿತದಿಂದ ಆಯೋಜಿಸಿದ್ದ 67ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ಮಾತನಾಡಿದರು.

ನೀಲಮ್ಮ ನಾಗರಬಟ್ಟ ವಿಶೇಷ ಉಪನ್ಯಾಸ ನೀಡಿದರು.

ವಿವಿಧ ರಂಗದಲ್ಲಿ ಸೇವೆ ಸಲ್ಲಿಸಿದ ಡಾ.ವೀರಭದ್ರಗೌಡ ಹೊಸಮನಿ, ಅನಿಲ ಬಿರಾದಾರ, ಎಸ್.ಎಸ್.ಮಾರನಾಳ, ವಿಜಯಲಕ್ಷ್ಮಿ ಪೌಜದಾರ, ರೈತ ರಾಜು ದೊಡ್ಡಮನಿ, ಧನರಾಜ, ಶಾಂತಪ್ಪ ಗ್ರಾಮ ಸಹಾಯಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ತಾಲ್ಲೂಕು ಪಂಚಾಯಿತಿ ಇಓ ಬಸವರಾಜಯ್ಯ ಹಿರೇಮಠ, ಸಿಪಿಐ ಎಂ.ಬಿ.ಚಿಕ್ಕಣ್ಣನವರ್, ಕಸಾಪ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ, ಕರವೇ ಅಧ್ಯಕ್ಷ ಶಿವಲಿಂಗ ಪಟ್ಟಣಶೆಟ್ಟಿ ಇದ್ದರು.
ನಾಗನಗೌಡ ಪಾಟೀಲ ನಿರೂಪಿಸಿದರು. ವೆಂಕಟೇಶ ವಂದಿಸಿದರು.

ಮಹಾಂತಸ್ವಾಮಿ ವೃತ್ತದಿಂದ ಬಸವೇಶ್ವರ ವೃತ್ತದವರೆಗೆಮೆರವಣಿಗೆ ನಡೆಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳು ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಸ್ವಾಮಿ ವಿವೇಕಾನಂದ ಪದವಿ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯ ಎಸ್.ಎಂ.ಕಿರಣಗಿ ಧ್ವಜಾರೋಹಣ ಮಾಡಿದರು.

ಪಾಟೀಲ ಬಸನಗೌಡ, ನಾಗಪ್ಪ.ಟಿ, ಕಾಶೀಂಸಾಬ, ಬಸವರಾಜ ಜಾಧವ, ಪದ್ಮಾವತಿ ಇದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಧ್ವಜಾರೋಹಣ ನೆರವೇರಿಸಿದರು.

ಗೌರವ ಕಾರ್ಯದರ್ಶಿ ಮಲ್ಲಣ್ಣ ಡಂಗಿ, ಕೋಶಾಧ್ಯಕ್ಷ ಮಶಾಕ ಯಾಳಗಿ, ಕಾಂತೇಶ ಹಲಗಿಮನಿ, ಸಣ್ಣಕೆಪ್ಪ ಕೊಂಡಿಕರ್, ಆರ್.ಎಲ್ ಸುಣಗಾರ್, ನಾಗನಗೌಡ ಪಾಟೀಲ, ನೀಲಕಂಠ ಹೊನಕಲ, ಬಸವರಾಜ ಸಜ್ಜನ, ನಂದಲಾಲ್ ಠವಾಣಿ, ಅಯ್ಯನಗೌಡ ಬನ್ನೀಬಸವ ಇದ್ದರು.

ಅದ್ಧೂರಿ ಆಚರಣೆ

ಕಕ್ಕೇರಾ: ‘ಕನ್ನಡ ರಾಜ್ಯೋತ್ಸವ ದಿನದಂದು ಡಾ. ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿರುವುದ ಸಂತಸದ ವಿಷಯ’ ಎಂದು ಗವಿಸಿದ್ದೇಶ ಹೊಗರಿ ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ವಲಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆಯಾದ ಹೊನ್ನಪ್ಪ ಹಾದಿಮನಿ ಮತ್ತು ಗವಿಸಿದ್ಧೇಶ ಧ್ವಜಾರೋಹಣ ನೇರವೇರಿಸಿದರು.

ರಮೇಶ ಶಟ್ಟಿ, ದೇವಿಂದ್ರಪ್ಪ ಬಳಿಚಕ್ರ, ಡಾ.ಗುಡ್ನಾಳ, ಪರಮಣ್ಣ ತೇರಿನ್, ಗುಂಡಪ್ಪ ಸೋಲಾಪುರ, ಲಕ್ಷ್ಮಣ ಲಿಂಗದಳ್ಳಿ, ಲಕ್ಕಪ್ಪ ಮೇಲಾ, ಚಿದಾನಂದ ಕಮತಗಿ, ಸೋಮಶೇಖರ ದೊರೆ, ಬಸವರಾಜ ಗುತ್ತೇದಾರ, ರಾಮಣ್ಣಗೌಡ, ರಾಘು ಮುದ್ನೂರು, ಆದಯ್ಯ ಗುರಿಕಾರ, ಮಲ್ಲಣ್ಣ ಹೆಗ್ಗಣದೊಡ್ಡಿ, ಸೋಮಣ್ಣ ಸೋಲಾಪುರ ,ಮುಖ್ಯಾಧಿಕಾರಿ ಪ್ರವೀಣಕುಮಾರ, ಹಣಮಂತನಾಯಕ, ನಿಂಗಪ್ಪನಾಯ್ಕ, ಮಲ್ಲು ಹುಲಿಕೇರಿ, ಪರಮಣ್ಣ ಹಡಪದ, ಪ್ರವೀಣ ಜಕಾತಿ, ಕರೀಮಸಾಬ ನಾಶಿ,ಮೈಬೂ ಸುರಪುರ ಎಎಸ್ಐ ಮಧುನಾಯಕ, ಅಯ್ಯನಗೌಡ ಹಾಜರಿದ್ದರು.

‘ಸ್ವಾಭಿಮಾನದ ಸಂಕೇತ’

ಶಹಾಪುರ: ‘ಸ್ವಾಭಿಮಾನ ಹಾಗೂ ಸಹಬಾಳ್ವೆಯ ಸಂಕೇತ ರಾಜ್ಯೋತ್ಸವ. ಕೇವಲ ನವೆಂಬರ್ 1 ರಂದು ರಾಜ್ಯೋತ್ಸವ ಆಗಬಾರದು ನಂಬರ್ 1 ರಾಜ್ಯೋತ್ಸವ ಆಗಬೇಕು. ನಾಡ ನುಡಿಗೆ ನಾವೆಲ್ಲರು ಬದ್ಧರಾಗಿರಬೇಕು’ ಎಂದು ತಹಶೀಲ್ದಾರ್ ಮಧುರಾಜ್ ಕೂಡ್ಲಗಿ ತಿಳಿಸಿದರು.

ನಗರದ ಟೌನ್ಹಾಲ್‌ನಲ್ಲಿ ಮಂಗಳವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ 67ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಶಿಕ್ಷಕ ಶಿವಶರಣಪ್ಪ ಶಿರೂರ ಮಾತನಾಡಿದರು.

ನಗರದ ಸಿ.ಬಿ ಕಮಾನ್‌ನಿಂದ ಟೌನ್ ಹಾಲ್‌ವರೆಗೆ ಮೆರವಣಿಗೆ ನಡೆಯಿತು. ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಮಲ್ಲಿಕಾರ್ಜುನ್ ಚಿಲ್ಲಾಳ, ನಗರಸಭೆ ಅಧ್ಯಕ್ಷೆ ಗಿರಿಜಮ್ಮ ಮಾಲಿಪಾಟೀಲ, ಪೌರಾಯುಕ್ತ ರಮೇಶ ಬಡಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಸೀಬಾ ಜಲಿಯನ್ ಸೇರಿದಂತೆ ಅಧಿಕಾರಿಗಳ ಇದ್ದರು.

ಸ್ಥಳಾಂತರ ಪೋಷಕರು ಬೇಸರ: ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಯಿಸಿಕೊಂಡು ಬರಲಾಗುತ್ತಿತ್ತು. ಪ್ರಸಕ್ತ ವರ್ಷ ಹೊರವಲಯದ ಟೌನ್ ಹಾಲ್‌ಗೆ ಸ್ಥಳಾಂತರಿಸಿದ್ದಕ್ಕೆ ಪೋಷಕರು ಬೇಸರ ವ್ಯಕ್ತಪಡಿಸಿದರು. ಅಲ್ಲದೆ ಸ್ಥಬ್ದ ಚಿತ್ರ ಮೆರವಣಿಗೆ ನಗರದ ರಾಜಬೀದಿಯಲ್ಲಿ ಸಂಚರಿಸಿದಾಗ ನಗರದ ಜನತೆ ಕಣ್ತುಂಬಿಕೊಳ್ಳುತ್ತಿದ್ದರು. ಆದರೆ ಸಿಬಿ ಕಮಾನಿಂದ ಟೌನ್‌ ಹಾಲ್‌ವರೆಗೆ ಸಿಮೀತಗೊಳಿಸಿರುವುದು ಕಾಟಾಚಾರದ ಕಾರ್ಯಕ್ರಮ ಇದಾಗಿತ್ತು ಎಂದು ಪಾಲಕರು ಆರೋಪಿಸಿದರು.

‘ಸ್ವಾಭಿಮಾನವಾಗಲಿ’

ಗುರುಮಠಕಲ್: ‘ಕನ್ನಡ ನಾಡು, ನುಡಿಯ ಕುರಿತ ನಮ್ಮ ಅಭಿಮಾನ ಕೇವಲ ರಾಜ್ಯೋತ್ಸವದ ಆಚರಣೆಗೆ ಸೀಮಿತವಾಗದಿರಲಿ. ಕನ್ನಡವು ನಮ್ಮ ನಿತ್ಯದ ಉಸಿರಾಗಿ, ಸ್ವಾಭಿಮಾನವಾಗಲಿ’ ಎಂದು ನಿವೃತ್ತ ಉಪನ್ಯಾಸಕ ಅಖಂಡೇಶ್ವರಯ್ಯ ಹಿರೇಮಠ ಸಲಹೆ ನೀಡಿದರು.

ಪಟ್ಟಣದ ಜವಹಾರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ತಾಲ್ಲೂಕು ಆಡಳಿತ, ವಿವಿಧ ಇಲಾಖೆಗಳು ಹಾಗೂ ಸಂಗಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು, ಕ್ರೀಡಾಂಗಣದಿಂದ ಗಾಂಧೀ ಮೈಧಾನದವರೆಗೆ ಮೆರವಣಿಗೆ ನಡೆಯಿಯಿತು.

ತಹಶೀಲ್ದಾರ್ ಶರಣಬಸವ ರಾಣಪ್ಪ ಧ್ವಜಾರೋಹಣನೆರವೇರಿಸಿದರು.

ಶಾಂತವೀರ ಗುರು ಮುರುಘರಾಜೇಂದ್ರ ಶ್ರೀ, 2 ತಹಶೀಲ್ದಾರ್ ನರಸಿಂಹಸ್ವಾಮಿ, ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಉಪಾಧ್ಯಕ್ಷೆ ಭೀಮಮ್ಮ ಮುಕುಡಿ, ಸೇರಿದಂತೆ ತಾ.ಪಂ ಇಒ ಎಸ್.ಎಸ್.ಖಾದ್ರೋಳಿ, ಪುರಸಭೆ ಮುಖ್ಯಾಧಿಕಾರಿ ಭಾರತಿ ಸಿ.ದಂಡೋತಿ, ಪಿಐ ದೌಲತ್ ಎನ್.ಕೆ.ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT