ಶುಕ್ರವಾರ, ಡಿಸೆಂಬರ್ 2, 2022
19 °C
ಜನರನ್ನು ನಕ್ಕನಗಿಸಿದ ಜ್ಯೂನಿಯರ್ ಸಾದುಕೋಕಿಲಾ

ಗುರುಮಠಕಲ್: ರಾಜ್ಯೋತ್ಸವ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್: ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಈಚೆಗೆ ಕರುನಾಡು ಸೇನೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಹಾಗೂ ಕನ್ನಡ ಜಾಗೃತಿ ಕಾರ್ಯಕ್ರಮ ಜರುಗಿತು.

ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ರತ್ನ ದಿ.ಪುನೀತ ರಾಜಕುಮಾರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಗೌರವ ಸಲ್ಲಿಸಿದರು.

ವಿದ್ಯಾರ್ಥಿನಿ ಶ್ರೀಜಾ ಮಾಡಿದ ಕನ್ನಡ ನಾಡು-ನುಡಿ ಕುರಿತು ಮಾತನಾಡಿದರು. ಖುಷಿರೆಡ್ಡಿ , ದೀಪ, ಪುಷ್ಪ ಕೆ. ಕಣೆಕಲ್, ಬಸವಪ್ರಿಯ ಗೋಗಿ ,ವಿಶ್ವ, ಮೇಘನರೆಡ್ಡಿ, ದೀಕ್ಷಾ ಗುಮಡಾಲ್ ಕನ್ನಡ ನಾಡ ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದರು.

ಜೂನಿಯರ್ ಸಾದು ಕೋಕಿಲ ಹಾಸ್ಯ ಮತ್ತು ಲಕ್ಷ್ಮಿ ಬಿಜಾಪುರ ಗಾನ ಮಂಜರಿ ನಡೆಸಿಕೊಟ್ಟರು.

ಲಲಿತಾ ಕೆ.ಕಣೆಕಲ್, ಬಾಲ ಕಾರ್ಮಿಕ ಇಲಾಖೆಯ ರಿಯಾಜ್ ಪಟೇಲ ವರ್ಕನಳ್ಳಿ, ಕರುನಾಡು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಕಾಶಿನಾಥ ಕಣೆಕಲ್, ತಾಲ್ಲೂಕು ಘಟಕದ ಅಧ್ಯಕ್ಷ ಮೋಹನ ಟಿ.ರಾಠೋಡ, ಪ್ರಧಾನ ಕಾರ್ಯದರ್ಶಿ ಮಹಮ್ಮದ ಗೌಸ್, ಸಂಚಾಲಕ ಶಿವಶಂಕರ, ಬಸವರಾಜ ವಿಭೂತಿ, ಆಂಜನೇಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು