4ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹18 ವೆಚ್ಚ

7
ಅಭಿನಂದನಾ ಸಮಾರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಪ್ಪ ಎಸ್.ಹೊಟ್ಟಿ

4ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹18 ವೆಚ್ಚ

Published:
Updated:
Prajavani

ಯಾದಗಿರಿ: ‘ನಗರದಲ್ಲಿ ಈಚೆಗೆ ನಡೆದ 4ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಟ್ಟು ₹18 ಲಕ್ಷ ವೆಚ್ಚವಾಗಿದೆ ಎಂಬುದಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಪ್ಪ ಎಸ್.ಹೊಟ್ಟಿ ತಿಳಿಸಿದರು.

ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಸಮ್ಮೇಳನ ಯಶಸ್ವಿಗೆ ಶ್ರಮಿಸಿದವರಿಗೆ ಹಮ್ಮಿಕೊಂಡಿದ್ದ ಅಭಿನಂದನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರು ₹50 ಸಾವಿರ ಹಾಗೂ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ₹1 ಲಕ್ಷ ಸಮ್ಮೇಳನಕ್ಕೆ ದೇಣಿಗೆ ನೀಡಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತು ₹6 ಲಕ್ಷ ಅನುದಾನ ಓದಗಿಸಿದೆ. ಉಳಿದಂತೆ ಯಾರಿಂದಲೂ ಚಂದಾ ವಸೂಲಿ ಮಾಡಿಲ್ಲ’ ಎಂದರು.

‘ಈ ಸಮ್ಮೇಳನದ ವಿಶೇಷ ಎಂದರೆ ಹೊಸ ಲೇಖಕರ 12 ಕೃತಿಗಳನ್ನು ಪ್ರಕಟಿಸಿದ್ದು. ಈಗಾಗಲೇ ಪರಿಷತ್ತು ಪ್ರಕಾಶನ ಮಾಡಿದ ಪ್ರಕಟಿಸಿದ್ದ ಲೇಖಕರ ಕೃತಿ ಪ್ರಕಟಣೆಗೆ ಆಗ್ರಹ ಬಂದರೂ, ಹೊಸ ಲೇಖಕರಿಗೆ ಆದ್ಯತೆ ನೀಡಲಾಯಿತು. ಇಷ್ಟು ಕೃತಿಗಳನ್ನು ಅಚ್ಚುಕಟ್ಟಾಗಿ ಬರಲು ಸಾಹಿತಿ ಚಂದ್ರಕಾಂತ ಕರದಳ್ಳಿ ಅವರ ಶ್ರಮ ಅಪಾರ’ ಎಂದು ಹೇಳಿದರು.

ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಸಾಹಿತಿ ಸಿದ್ದರಾಮ ಹೊನ್ಕಲ್‌ ಮಾತನಾಡಿ,‘ಸಮ್ಮೇಳನ ಅಭೂತಪೂರ್ವಕವಾಗಿ ಯಶಸ್ವಿಗೊಂಡಿತು. ಇದಕ್ಕೆ ಕನ್ನಡಾಭಿಮಾನಿಗಳೇ ಕಾರಣ. ಸಮ್ಮೇಳನದಲ್ಲಿ ಖಾಲಿ ಕುರ್ಚಿಗಳು ಕಾಣಲಿವೆ ಎಂದುಕೊಂಡಿದ್ದೆ. ಆದರೆ, ಕನ್ನಡ ಸಾಹಿತ್ಯಾಭಿಮಾನಿಗಳ ದಂಡೇ ಜಮಾಯಿಸಿತ್ತು. ನನ್ನ ಪಾಲಿಗೆ ಸ್ಮರಣೀಯ ಸಮ್ಮೇಳನವಾಗಿತ್ತು’ ಎಂದು ನೆನೆದರು.

ಹಿರಿಯ ಸಾಹಿತಿ ಅಯ್ಯಣ್ಣ ಹುಂಡೇಕರ್‌, ಸುರಪುರ ಕಸಾಪು ಅಧ್ಯಕ್ಷ ಶ್ರೀನಿವಾಸ ಜಾಲವಾದಿ, ವಡಗೇರಾ ತಾಲ್ಲೂಕು ಕಸಾಪ ಅಧ್ಯಕ್ಷ ಗಾಳೆಪ್ಪ ಪೂಜಾರಿ, ಯಾದಗಿರಿ ತಾಲ್ಲೂಕು ಕಸಾಪ ಅಧ್ಯಕ್ಷ ಭೀಮರಾಯ ಲಿಂಗೇರಿ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಸುಭಾಶ್ಚಂದ್ರ ಕೌಲಗಿ, ಎಸ್‌.ಎಸ್.ನಾಯಕ, ಬಿಜೆಪಿ ಮುಖಂಡ ಖಂಡಪ್ಪ ದಾಸನ್ ಸಮ್ಮೇಳನ ಯಶಸ್ವಿ ಕುರಿತು ಮಾತನಾಡಿದರು.

ಸಾಹಿತಿ ಚಂದ್ರಕಾಂತ ಕರದಳ್ಳಿ, ಮಹಾದೇವಪ್ಪ ಅಬ್ಬೇತುಮಕೂರು, ನೂರೊಂದಪ್ಪ ಲೇವಡಿ, ಚನ್ನಪ್ಪಗೌಡ ಠಾಣಗುಂದಿ, ಬಸವರಾಜ ಮೋಟ್ನಹಳ್ಳಿ, ನೀಲಕಂಠ ಶೀಲವಂತ್, ದೇವೇಂದ್ರ ರೆಡ್ಡಿ, ಮಲ್ಲು ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !