ವಡಗೇರಾ: ಪಟ್ಟಣದ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸ್ವರ್ಣ ಜಯಂತಿಯ ಹಾಗೂ ಭಾರತೀಯ ಸಂಸ್ಕೃತಿ ಉತ್ಸವದ ಅಂಗವಾಗಿ ನಡೆದ ತಾಲ್ಲೂಕುಮಟ್ಟದ ಕ್ರಿಡಾಕೂಟದಲ್ಲಿ ಇಲ್ಲಿನ ಕಸ್ತೂರ ಬಾ ಗಾಂಧಿ ಶಾಲೆಯ ಬಾಲಕಿಯರು ಜಾನಪದ ನೃತ್ಯ ಹಾಗೂ ಭಜನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಕಸ್ತೂರಬಾ ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಶಾಲೆಯ ಮುಖ್ಯಶಿಕ್ಷಕಿ ಲಲಿತಾಬಾಯಿ ನಾಟೇಕಾರ, ಶಿಕ್ಷಕರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಿದಾಗ ಮಾತ್ರ ಗ್ರಾಮೀಣ ಪ್ರತಿಭೆಗಳು ರಾಜ್ಯ ಮಟ್ಟದಲ್ಲಿ ಅರಳಲು ಸಾಧ್ಯ. ಜಿಲ್ಲಾ ಮಟ್ಟದಲ್ಲಿಯು ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಎಂದು ಹಾರೈಸಿದರು.
ವಿಕಾಸ ಅಕಾಡೆಮಿಯ ತಾಲೂಕು ಸಂಯೋಜಕ ಸಿದ್ದಣ್ಣಗೌಡ ಕಾಡಂನೋರ, ಪಿಎಸ್ಐ ಮೈಬೂಬ್ಅಲಿ, ಶಾಂತಾ ಎನ್ .ಜಡಿ , ನಿಲಯ ಪಾಲಕಿ ಚಂದ್ರಕಲಾ, ಅನ್ನಪೂರ್ಣ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.