ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಭಾವಿ: ಹಡಪದ ಅಪ್ಪಣ್ಣ ಜಯಂತಿ

Last Updated 27 ಜುಲೈ 2018, 13:00 IST
ಅಕ್ಷರ ಗಾತ್ರ

ಕೆಂಭಾವಿ: ’ಶಿವಶರಣ ಹಡಪದ ಅಪ್ಪಣ್ಣನವರು ಅನುಭವ ಮಂಟಪದ ಮಹಾನ್ ಚೇತನರಾಗಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಸಮರ್ಪಣಾ ಭಾವದಿಂದ ಸಲ್ಲಿಸಿದ ಸೇವೆ ಅವರ್ಣನೀಯ’ ಎಂದು ಮುಖ್ಯ ಶಿಕ್ಷಕಿ ಸುಜಾತಾ ಮೊಕಾಶಿ ಹೇಳಿದರು.

ಪಟ್ಟಣದ ಸ್ಪಂದನ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಶಿವಶರಣ ಹಡಪದ ಅಪ್ಪಣ್ಣನವರ 884 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಕಿಯರಾದ ಎಂ. ಶ್ವೇತಾ, ರೋಹಿಣಿ ಗುಬ್ಯಾಡ, ಶಿವರಂಜಿನಿ, ಫರೀದಾ ಬೇಗಂ, ರೇಣುಕಾ ಭೋವಿ, ಶಿವರಂಜಿನಿ, ಭಾಗ್ಯಲಕ್ಷ್ಮಿ, ಶ್ಯಾಮು ನಾಡಿಗೇರ, ದಾನೇಶ ದೇವೂರ, ನಿಂಗಯ್ಯಸ್ವಾಮಿ ಇದ್ದರು.

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಆಚರಿಸಲಾಯಿತು. ಪುರಸಭೆ ಅಧ್ಯಕ್ಷ ದೇವಪ್ಪ ಮ್ಯಾಗೇರಿ ಹಾಗೂ ಸದಸ್ಯರು ಸಿಬ್ಬಂದಿ ಇದ್ದರು.

ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಡಪದ ಅಪ್ಪಣ್ಣನವರ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಶರಣು ಸಜ್ಜನ, ಮಡಿವಾಳಪ್ಪ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT