ಶಹಾಪುರ: ಮಾರ್ಚ್ ತಿಂಗಳಲ್ಲಿ ರಾಜ್ಯ ವಕೀಲರ ಪರಿಷತ್ ಚುನಾವಣೆ ನಡೆಯಲಿದ್ದು, ಸೇವಾ ಆಕಾಂಕ್ಷಿ ವಕೀಲರು ಮಾಗಿಯ ಚಳಿಯ ನಡುವೆ ಚುನಾವಣೆಯ ಪ್ರಚಾರದ ಕಾವು ಹೆಚ್ಚಿಸಿದೆ. ಜಿಲ್ಲೆಯಿಂದ ಇಬ್ಬರು ವಕೀಲರು ಸ್ಫರ್ಧೆಗೆ ಇಳಿಯಲು ಪ್ರಚಾರದಲ್ಲಿ ಧುಮುಕಿದ್ದಾರೆ.

ಎಂಟು ವರ್ಷದ ಬಳಿಕ ಚುನಾವಣೆ ನಡೆಯುತ್ತಲಿದೆ. ರಾಜ್ಯದಲ್ಲಿ 72 ಸಾವಿರಕ್ಕೂ ಹೆಚ್ಚು ವಕೀಲ ಮತದಾರರು ಇದ್ದು, ಪ್ರಾಶಸ್ತ್ಯ ಮತ ನೀಡುವ ಅವಕಾಶವಿದೆ. 25 ಜನ ಪರಿಷತ್ ಆಯ್ಕೆಗೆ ಮಾಡಬೇಕು. ಅದರಲ್ಲಿ ಮಹಿಳಾ ಮೀಸಲಾತಿಯಂತೆ 5 ಜನ ಮಹಿಳಾ ಸದಸ್ಯರು ಹಾಗೂ 17 ಪುರುಷರು ಸದಸ್ಯರು ಸೇರಿದ್ದಾರೆ. ನಂತರ ಮೂವರು ಮಹಿಳಾ ಸದಸ್ಯರನ್ನು ನಾಮ ನಿರ್ದೇಶನ ಸದಸ್ಯರಾಗಿ ನೇಮಿಸಲಾಗುತ್ತದೆ ಎಂದು ವಕೀಲರ ಸಂಘದ ಅಧ್ಯಕ್ಷ ಯೂಸೂಫ್ ಸಿದ್ದಿಕಿ ತಿಳಿಸಿದರು.

ಜಿಲ್ಲೆಯಿಂದ ಶಹಾಪುರ ವಕೀಲರ ಸಂಘದಿಂದ ಸಾಲೋಮನ್ ಆಲ್ಫ್ರೇಡ್ ಹಾಗೂ ರಾಮನಗೌಡ ಕೊಲ್ಲೂರ ಸ್ಫರ್ಧೆಗೆ ಇಳಿಯುವುದಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಇದು ಉತ್ತಮ ಬೆಳವಣಿಗೆಯಾಗಿದೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆ ಹಾಗೂ ತಾಲ್ಲೂಕು ವಕೀಲರ ಸಂಘಕ್ಕೆ ಭೇಟಿ ನೀಡಿ ಮತಯಾಚನೆ ಮಾಡಿದ್ದಾರೆ. ಅಲ್ಲದೆ ರಾಜ್ಯದ ವಿವಿಧ ಜಿಲ್ಲೆಯ ಸ್ಫರ್ಧಾ ಆಕಾಂಕ್ಷಿಗಳು ನಮ್ಮ ವಕೀಲರ ಸಂಘಕ್ಕೆ ಆಗಮಿಸಿ ಮತಯಾಚಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಚುನಾವಣೆಯು ಪ್ರಜಾತಂತ್ರದ ಹಬ್ಬದಂತೆ ಕೆಲ ಸ್ಫರ್ಧಾ ಆಕಾಂಕ್ಷಿಗಳು ವಕೀಲರ ಸಂಘಕ್ಕೆ ಆಗಮಿಸಿ ಹೊಸ ವರ್ಷದ ಕೊಡುಗೆಯಾಗಿ ಡೈರಿ ಹಂಚಿಕೆಯನ್ನು ಮಾಡಿದ್ದಾರೆ. ನಾವು ಚುನಾವಣೆಯ ಅಂಗವಾಗಿ ಡೈರಿ ಕೊಡುತ್ತಿಲ್ಲ. ಹೊಸ ವರ್ಷದ ಸಲುವಾಗಿ ಶುಭ ಕೋರಿಕೆಯ ರೂಪದಲ್ಲಿ ಕಾಣಿಕೆ ನೀಡುತ್ತಿರುವೆ. ಡೈರಿ ನೀಡಿದ ಕಾರಣಕ್ಕೆ ನನಗೆ ಮತ ಹಾಕಿ ಎನ್ನುವಂತೆ ಕೇಳುತ್ತಿಲ್ಲ ಎಂದು ಸ್ಫರ್ಧಾ ಆಕಾಂಕ್ಷಿ ಒಬ್ಬರು ಡೈರಿ ವಿತರಿಸಿ ಸಮರ್ಥಿಸಿಕೊಂಡರು.

‘ಪ್ರಸಕ್ತ ಬಾರಿ ಚುನಾವಣೆಯ ಕಾವು ಹೊಸ ರೂಪ ಪಡೆಯುತ್ತಲಿದೆ. ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದ ಸಮುದಾಯದ ವಕೀಲರು ಚುನಾವಣೆಯ ಅಖಾಡಕ್ಕೆ ಧುಮುಕಿದ್ದಾರೆ. ರಾಜ್ಯದಲ್ಲಿ ಆಯಾ ಸಮುದಾಯದ ವಕೀಲರ ವಾಟ್ಸ್ಪ್ ಗ್ರೂಪ್ ಮಾಡಿಕೊಂಡು ದಿನದ ಬೆಳವಣಿಗೆಯ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಅದರಂತೆ ಮೇಲ್ವರ್ಗದ ಸಮುದಾಯದ ವಕೀಲರ ಸದಸ್ಯರು ಕೂಡಾ ತಮ್ಮದೆ ಜಾತಿ ಪ್ರಭಾವ ಹಾಗೂ ರಾಜಕೀಯ ಶಕ್ತಿಯನ್ನು ಒಗ್ಗೂಡಿಸಿಕೊಂಡು ಪ್ರಚಾರದ ಭರಾಟೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುತ್ತಾರೆ’ ಹಿರಿಯ ವಕೀಲ ಆರ್.ಚೆನ್ನಬಸ್ಸು ವನದುರ್ಗ.

ಪರಿಷತ್ಗೆ ಸ್ಫರ್ಧಿಸುತ್ತಿರುವ ಸೇವಾ ಆಕಾಂಕ್ಷಿ ಅಭ್ಯರ್ಥಿಗಳು ವಕೀಲರ ಕಲ್ಯಾಣ ಭರವಸೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಕಾಣಿಕೆ ರೂಪದಲ್ಲಿ ಡೈರಿಯನ್ನು ವಿತರಿಸುತ್ತಿದ್ದಾರೆ. ಆದರೆ ಯಾರಿಗೂ ಒತ್ತಾಯ ಮಾಡಿಲ್ಲ
–ಯೂಸೂಫ್ ಸಿದ್ದಿಕಿ, ವಕೀಲರ ಸಂಘದ ಅಧ್ಯಕ್ಷ ಶಹಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.