ಯಾದಗಿರಿ: ಗುರುಮಠಕಲ್ ತಾಲ್ಲೂಕಿನ ಗಾಜರ್ಕೋಟ್ ಗ್ರಾಮದಲ್ಲಿ ಮಂಗಳವಾರ ಶಾಲಾ ವಾಹನದ ಹಿಂಬದಿಯ ಚಕ್ರಕ್ಕೆ ಸಿಲುಕಿ ನಾಲ್ಕು ವರ್ಷದ ಬಾಲಕ ಮೃತಪಟ್ಟಿದ್ದಾನೆ.

ಗಾಜರ್ಕೋಟ್ ನಿವಾಸಿ ರಜನಿಕಾಂತ್ ಮತ್ತು ಅಂಬಿಕಾ ದಂಪತಿ ಪುತ್ರ ಪುನೀತ್ ಗ್ರಾಮ ಹೊರವಲಯದ ಖಾಸಗಿ ಶಾಲೆಯಲ್ಲಿ ಎಲ್ಕೆಜಿ ಓದುತ್ತಿದ್ದ. ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಚಾಲಕ ಅನಿಲ್ಕುಮಾರ್ ವಿರುದ್ಧ ದೂರು ದಾಖಲಾಗಿದೆ.

ಶಾಲಾ ತರಗತಿ ಮುಗಿದ ಬಳಿಕ ಅನಿಲ್ಕುಮಾರ್ ವಿದ್ಯಾರ್ಥಿಗಳನ್ನು ವಾಹನದಲ್ಲಿ ಹತ್ತಿಸಿಕೊಂಡರು. ಪಂಚಾಯಿತಿ ಕಟ್ಟೆಯ ಸಮೀಪ ವಾಹನ ನಿಲ್ಲಿಸುತ್ತಿದ್ದಂತೆ ಪುನೀತ್ ಸೇರಿ ಇತರೆ ಮಕ್ಕಳು ಇಳಿದು ತಮ್ಮ ಮನೆಗಳತ್ತ ತೆರಳಿದರು. ವಾಹನವನ್ನು ಹಿಂದಕ್ಕೆ ತೆಗೆದುಕೊಳ್ಳವಾಗ ಪುನೀತ್ ಬಲ ಬದಿಯ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.