ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಥೀಮ್ ಆಧಾರಿತ ಮತದಾನ ಕೇಂದ್ರ

Published 2 ಮೇ 2024, 23:44 IST
Last Updated 2 ಮೇ 2024, 23:44 IST
ಅಕ್ಷರ ಗಾತ್ರ

ಯಾದಗಿರಿ: ಮತದಾನ ಕೇಂದ್ರಕ್ಕೆ ಮತದಾರರನ್ನು ಸೆಳೆಯಲು ಹಾಗೂ ಮತದಾನ ಪ್ರಮಾಣ ಹೆಚ್ಚುಮಾಡಲು ಜಿಲ್ಲಾಡಳಿತದಿಂದ ವಿಶಿಷ್ಟ ರೀತಿಯ ಥೀಮ್ ಆಧಾರಿತ ಮತದಾನ ಕೇಂದ್ರಗಳನ್ನು ಪರಿಚಯಿಸುತ್ತಿದ್ದು, ಜಿಲ್ಲೆಯ ಸಾಂಸ್ಕೃತಿಕ, ಸಾಮಾಜಿಕ ಮತ್ತು ನೈಸರ್ಗಿಕ ವೈವಿಧ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಸುಶೀಲಾ ಬಿ., ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಾಗೂ ಸುರಪುರ ವಿಧಾನಸಭಾ ಉಪ ಚುನಾವಣೆ ಕುರಿತಂತೆ ಕೈಗೊಳ್ಳಲಾದ ಸಿದ್ಧತೆಗಳ ಕುರಿತಂತೆ ಗುರುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಒಟ್ಟು ಮತದಾರರು:

ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಸುರಪುರ ಮತಕ್ಷೇತ್ರದಲ್ಲಿ 1,42,532 ಪುರುಷರು, 1,40,523 ಮಹಿಳೆಯರು, 28 ಲಿಂಗತ್ವ ಅಲ್ಪ‍ಸಂಖ್ಯಾತರು ಸೇರಿದಂತೆ ಒಟ್ಟು 2,83,083 ಮತದಾರರು ಇದ್ದಾರೆ.

ಶಹಾಪುರ ಮತಕ್ಷೇತ್ರದಲ್ಲಿ 1,23,339 ಪುರುಷರು, 123784 ಮಹಿಳೆಯರು, 15 ಲಿಂಗತ್ವ ಅಲ್ಪ‍ಸಂಖ್ಯಾತರು ಸೇರಿ ಒಟ್ಟು 2,47,138 ಮತದಾರರು ಇದ್ದಾರೆ.

ಯಾದಗಿರಿ ಮತಕ್ಷೇತ್ರದಲ್ಲಿ 1,23,301 ಪುರುಷರು, 124827 ಮಹಿಳೆಯರು, 20 ಲಿಂಗತ್ವ ಅಲ್ಪ‍ಸಂಖ್ಯಾತರು ಸೇರಿ ಒಟ್ಟು 2,48,148 ಮತದಾರರು.

ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಗುರುಮಠಕಲ್ ಮತಕ್ಷೇತ್ರದಲ್ಲಿ 1,26,825 ಪುರುಷರು, 1,28,386 ಮಹಿಳೆಯರು, 6 ಲಿಂಗತ್ವ ಅಲ್ಪ‍ಸಂಖ್ಯಾತರು ಸೇರಿ ಒಟ್ಟು 2,55,217 ಮತದಾರರು ಇದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 5,15,997 ಪುರುಷರು, 517520 ಮಹಿಳೆಯರು, 69 ಲಿಂಗತ್ವ ಅಲ್ಪ‍ಸಂಖ್ಯಾತರು ಸೇರಿ ಒಟ್ಟು 10,33,586 ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿರುವ ಯುವ ಮತದಾರರು:

ಸುರಪುರ ಮತಕ್ಷೇತ್ರದಲ್ಲಿ ಪುರುಷ ಯುವ ಮತದಾರರು 3,888, ಮಹಿಳಾ ಯುವ ಮತದಾರರು 2,824, ಲಿಂಗತ್ವ ಅಲ್ಪ‍ಸಂಖ್ಯಾತರು 2 ಸೇರಿ ಒಟ್ಟು 6,714.

ಶಹಾಪುರ ಮತಕ್ಷೇತ್ರದಲ್ಲಿ ಪುರುಷ ಯುವ ಮತದಾರರು 3,647, ಮಹಿಳಾ ಯುವ ಮತದಾರರು 2,931, ಲಿಂಗತ್ವ ಅಲ್ಪ‍ಸಂಖ್ಯಾತರು 4 ಸೇರಿದಂತೆ ಒಟ್ಟು 6582 ಮತದಾರರು.

ಯಾದಗಿರಿ ಮತಕ್ಷೇತ್ರದಲ್ಲಿ ಪುರುಷ ಯುವ ಮತದಾರರು 3,468, ಮಹಿಳಾ ಯುವ ಮತದಾರರು 2,618, ಲಿಂಗತ್ವ ಅಲ್ಪ‍ಸಂಖ್ಯಾತರು1 ಸೇರಿ ಒಟ್ಟು 6,087 ಯುವ ಮತದಾರರು.

ಗುರುಮಠಕಲ್ ಮತಕ್ಷೇತ್ರದಲ್ಲಿ ಪುರುಷ ಯುವ ಮತದಾರರು 3,469, ಮಹಿಳಾ ಯುವ ಮತದಾರರು 2,567 ಸೇರಿ ಒಟ್ಟು 6,036 ಯುವ ಮತದಾರರಿದ್ದಾರೆ.

ಜಿಲ್ಲೆಯ ಒಟ್ಟು ಪುರುಷ ಯುವ ಮತದಾರರು 14,472, ಮಹಿಳಾ ಯುವ ಮತದಾರರು 10,940, ಲಿಂಗತ್ವ ಅಲ್ಪ‍ಸಂಖ್ಯಾತರು 07 ಸೇರಿದಂತೆ ಒಟ್ಟು 25,419 ಯುವ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮತದಾರರು ತಮ್ಮ ಮತಗಟ್ಟೆ ಸಂಖ್ಯೆ, ಮತಗಟ್ಟೆ ಭಾಗದ ಕ್ರಮ ಸಂಖ್ಯೆ, ಮುಂತಾದ ಮಾಹಿತಿ ತಿಳಿದುಕೊಂಡು ಮೇ 7 ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಕಡ್ಡಾಯವಾಗಿ ಮಾಡಿ ಪ್ರಜಾಪ್ರಭುತ್ವ ಬಲಪಡಿಸಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಜಿಲ್ಲಾ ಪಂಚಾಯಿತಿ ಸಿಪಿಒ ಗುರುನಾಥ ಗೌಡಪ್ಪನ್ನೋರ್, ಚುನಾವಣೆ ತಹಶೀಲ್ದಾರ್‌ ಸಂತೋಷರಾಣಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT