ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಮಹಾದೇವಪ್ಪ ರಾಂಪುರೆ ಶೈಕ್ಷಣಿಕ ಧ್ರುವತಾರೆ’

Published : 2 ಆಗಸ್ಟ್ 2024, 14:40 IST
Last Updated : 2 ಆಗಸ್ಟ್ 2024, 14:40 IST
ಫಾಲೋ ಮಾಡಿ
Comments

ಸುರಪುರ: ‘ಮಹಾದೇವಪ್ಪ ರಾಂಪುರೆ ಶೈಕ್ಷಣಿಕ ಧ್ರುವತಾರೆ. ಶಿಕ್ಷಣದ ಮೂಲಕ ಅಭಿವೃದ್ಧಿ ಸಾಧ್ಯ ಎಂದು ಬಲವಾಗಿ ನಂಬಿದ ಅವರು ಸಮಾಜದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದರು’ ಎಂದು ನಿವೃತ್ತ ಉಪನ್ಯಾಸಕ ವೇಣುಗೋಪಾಲ ಜೇವರ್ಗಿ ಹೇಳಿದರು.

ಪ್ರಭು ಮತ್ತು ಬೋಹರಾ ಪದವಿ ಕಾಲೇಜಿನಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಹಾದೇವಪ್ಪ ರಾಂಪುರೆಯವರ 103ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಾಚಾರ್ಯ ಎಂ.ಡಿ. ವಾರೀಸ್ ಕುಂಡಾಲೆ ಮಾತನಾಡಿ, ‘ನಮ್ಮ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿ. ಮಹಾದೇವಪ್ಪ ರಾಂಪುರೆಯವರ ಜನ್ಮದಿನವನ್ನು ಪ್ರತಿ ವರ್ಷವು ಶೈಕ್ಷಣಿಕ ಹಬ್ಬವಾಗಿ ಆಚರಿಸುತ್ತ ಬಂದಿದ್ದೇವೆ. ಈ ಮಹಾನ್ ನಾಯಕನ ಬದುಕು ಮತ್ತು ಆದರ್ಶಗಳು ಸಮಾಜಕ್ಕೆ ಮಾದರಿಯಾಗಿವೆ’ ಎಂದರು.

ನ್ಯಾಕ್ ಸಂಯೋಜಕ ಸಿ.ವಿ. ಕಲಬುರಗಿ ಮಾತನಾಡಿ, ‘ಮಹಾದೇವಪ್ಪ ರಾಂಪುರೆ ಅವರು ಈ ಭಾಗದಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಿಸಿದರು. ಶಿಕ್ಷಣ ಮತ್ತು ರಾಜಕೀಯ ಸೇವೆಗಳ ಮೂಲಕ ಅಭಿವೃದ್ದಿಗೆ ಮಾದರಿಯಾಗಿದ್ದಾರೆ’ ಎಂದರು.

ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥ ಶರಣಗೌಡ ಪಾಟೀಲ ಅವರು ನಿವೃತ್ತಿ ಹೊಂದಿದಕ್ಕಾಗಿ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.

ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಇದ್ದರು. ಸಾಯಿಬಣ್ಣ ಮೂಡಬೂಳ ನಿರೂಪಿಸಿದರು. ಧರ್ಮರಾಜ ಪಿಳಿಬಂಟ ಪ್ರಾರ್ಥಿಸಿದರು. ಶಶಿರಾಜ ನಾಯಕ ಸ್ವಾಗತಿಸಿದರು. ಅಡಿವೆಪ್ಪ ನರಗುಂದ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT