ಮಂಗಳವಾರ, ಅಕ್ಟೋಬರ್ 26, 2021
27 °C
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ

ಉತ್ತಮ ವ್ಯಕ್ವಿತ್ವಕ್ಕೆ ಮಾನಸಿಕ ಆರೋಗ್ಯ ಮುಖ್ಯ: ಶಾಸಕ ವೆಂಕಟರೆಡ್ಡಿ ಮುದ್ನಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಉತ್ತಮ ವ್ಯಕ್ವಿತ್ವ ರೂಪಿಸಿಕೊಳ್ಳಲು ಮಾನಸಿಕ ಆರೋಗ್ಯವು ಸದೃಢವಾಗಿರಬೇಕು. ವ್ಯಕ್ತಿಯ ಮನಸ್ಥಿತಿಯಿಂದಾಗಿಯೇ ನಡವಳಿಕೆ ರೂಪಿತವಾಗುತ್ತದೆ ಎಂದು ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅಭಿಪ್ರಾಯಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಮಾನಸಿಕ ವಿಭಾಗ) ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯದಲ್ಲಿ ಸೋಮವಾರ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾನಸಿಕ ರೋಗಗಳನ್ನು ವೈದ್ಯರು ಶಾಂತಚಿತ್ತದಿಂದ ತಾಳ್ಮೆಯಿಂದ ಅವರನ್ನು ಪ್ರೀತಿಯಿಂದ ಚಿಕಿತ್ಸೆಗೆ ಒಳಗಾಗುವಂತೆ ಮಾಡುವುದು ತುಂಬಾ ಕಠಿಣದ ಕೆಲಸ. ಆದರೂ ಆರೋಗ್ಯ ಅಧಿಕಾರಿಗಳು ಅದನ್ನು ನಿಭಾಯಿಸುತ್ತಿದ್ದಾರೆ ಎಂದು ತಿಳಿಸಿದರು.

ಕೆಲವೊಬ್ಬರು ಹುಟ್ಟಿನಿಂದಲೇ ಹಾಗೂ ಬೆಳೆಯುತ್ತಾ ವಾತಾವರಣದ ಪರಿಣಾಮದಿಂದಾಗಿ ಮಾನಸಿಕ ಖಿನ್ನತೆಗೆ ಒಳಗಗುತ್ತಾರೆ. ಅಂಥವರಿಗೆ ವೈದ್ಯರ ಹಾಗೂ ಕುಟುಂಬದವರ ಸಹಕಾರ ಅವಶ್ಯವಾಗಿರುತ್ತದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ ಮಾತನಾಡಿ, ಕೋವಿಡ್‌ನ ಸಂದಿಗ್ಧ ಸಂದರ್ಭದಲ್ಲಿ ಪ್ರತಿಯೊಬ್ಬರು ಕುಟುಂಬದ ಆರೋಗ್ಯದ ಜೊತೆಗೆ ಕರ್ತವ್ಯ ನಿಭಾಯಿಸುವುದು ಹೇಗೆ ಎಂಬುದಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇವೆ ಎಂದು ಹೇಳಿದರು.

ಮಾನಸಿಕ ಖಿನ್ನೆತೆ ಒಳಗಾದವರಿಗೆ ಕೌನ್ಸಿಲಿಂಗ್ ಅನಿವಾರ್ಯತೆ ಹೆಚ್ಚಾಗಿರುತ್ತದೆ. ಕೌನ್ಸಿಲಿಂಗ್ ಪಡೆದುಕೊಳ್ಳುವುದರಿಂದಾಗಿ ಒತ್ತಡ, ಆತಂಕಗಳಿಂದ ಚೇತರಿಸಿಕೊಳ್ಳುತ್ತಾರೆ. ತುಂಬಾ ಆಲೋಚನೆ, ಒಂಟಿತನ ಒತ್ತಡ ಹೆಚ್ಚಾದಾಗ ನಾವು ತಜ್ಞರಿಂದ ಸಲಹೆ ಪಡೆದುಕೊಳ್ಳುವುದು ಅಗತ್ಯ ಎಂದರು.

ಮಕ್ಕಳಿಗೆ ಮಾನಸಿಕವಾಗಿ ಸದೃಢ ಪಡಿಸುವಂಥ ಹವ್ಯಾಸಗಳತ್ತ ಹೆಚ್ಚಿನ ಒಲವು ಮೂಡಿಸಬೇಕು ಎಂದರು. ಮಾನಸಿಕತೆಯೂ ವಿಭಿನ್ನ ವಾತಾವರಣಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ರೀತಿಯ ಮನಸ್ಥಿತಿಗಳನ್ನು ವೈದ್ಯರು ಅರಿತುಕೊಳ್ಳುವುದು ಮುಖ್ಯ ಎಂದು ಹೇಳಿದರು.

ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ.ಭಗವಂತ ಅನವಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ವಿಲಾಸ್ ಬಿ.ಪಾಟೀಲ, ಆರ್‌ಸಿಎಚ್‌ಒ ಅಧಿಕಾರಿ ಡಾ.ಲಕ್ಷ್ಮಿಕಾಂತ, ಕಾರ್ಯಕ್ರಮ ಅಧಿಕಾರಿ ಸಾಧಿಕ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಹಣಮಂತರೆಡ್ಡಿ ಹಾಗೂ ಇಲಾಖೆಯ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮಾಳಪ್ಪ ಯಾದವ ನಿರೂಪಿಸಿ, ನಂದಣ್ಣ ಪಾಟೀಲ ವಂದಿಸಿದರು.

ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪ್ರೀತಿ, ವಿಶ್ವಾಸ ಆರೈಕೆ ಅಗತ್ಯ. ಏಕಾಂಗಿತನ ಕಾಡದಂತೆ ನೋಡಿಕೊಳ್ಳುವುದು ಕುಟುಂಬದ ಹೊಣೆಯಾಗಿರುತ್ತದೆ.
- ವೆಂಕಟರೆಡ್ಡಿ ಮುದ್ನಾಳ, ಶಾಸಕ 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.