ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: 31 ವಾರ್ಡ್‌ಗಳ ಸದಸ್ಯರಿಗೆ ಹಣ್ಣು ವಿತರಿಸಿದ ಶಾಸಕ

ಬಡ, ನಿರ್ಗತಿಕರಿಗೆ ಹಣ್ಣು ವಿತರಿಸಲು ಮುದ್ನಾಳ ಸೂಚನೆ
Last Updated 15 ಏಪ್ರಿಲ್ 2020, 6:34 IST
ಅಕ್ಷರ ಗಾತ್ರ

ಯಾದಗಿರಿ: ರೈತರಿಂದ ಖರೀದಿಸಿದ ಕಲ್ಲಂಗಡಿ ಹಣ್ಣುಗಳನ್ನು ನಗರದ 31 ವಾರ್ಡ್‌ ನಗರಸಭೆ ಸದಸ್ಯರಿಗೆ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ವಿತರಿಸಿ ಬಡ ಜನರಿಗೆ ಉಚಿತವಾಗಿ ಹಣ್ಣುಗಳನ್ನು ವಿತರಿಸಿ ಎಂದು ತಿಳಿಸಿದರು.

ಮಂಗಳವಾರ ಬೆಳಗ್ಗೆ ಶಾಸಕರ ಕಚೇರಿ ಮುಂಭಾಗದಲ್ಲಿ ಶಾಸಕರು 300 ಕ್ವಿಂಟಲ್ ಕಲ್ಲಂಗಡಿ ಹಣ್ಣುಗಳನ್ನು ತಮ್ಮ ವಾರ್ಡ್‌ಗಳಲ್ಲಿರುವ ಬಡ ಜನರಿಗೆ ಉಚಿತವಾಗಿ ಹಣ್ಣುಗಳನ್ನು ವಿತರಿಸಿ ನಗರಸಭೆ ಸದಸ್ಯರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಗ್ರಾಮೀಣ ಭಾಗದ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಕಲ್ಲಂಗಡಿ ಹಣ್ಣು ನಾಶವಾಗುತ್ತಿರುವುದನ್ನು ಗಮನಿಸಿ ಶಾಸಕ ವೆಂಕಟರಡ್ಡಿ ಮುದ್ನಾಳ ಅವುಗಳನ್ನು ಖರೀದಿಸುತ್ತಿದ್ದಾರೆ.

ಈ ವೇಳೆ ಮಾತನಾಡಿದ ಅವರು, ರೈತರು ಕೊರೊನಾ ವೈರಸ್ ದಾಳಿಯಿಂದ ಸಂಕಷ್ಟದಲ್ಲಿದ್ದಾರೆ. ಅವರು ಬೆಳೆದ ಹಣ್ಣುಗಳನ್ನು ಮಾರಾಟ ಮಾಡಲು ತೊಂದರೆಯಾಗುತ್ತಿದೆ. ನಾವು ಖರೀದಿಸುವ ಮೂಲಕ ನೈತಿಕ ಬೆಂಬಲ ಸೂಚಿಸುತ್ತಿದ್ದೇವೆ ಎಂದು ತಿಳಿಸಿದರು.

ಈ ವೇಳೆ ಮುಖಂಡರಾದ ಖಂಡಪ್ಪ ದಾಸನ್, ಉಮೇಶರಡ್ಡಿ ದದ್ದಲ್, ಹಣಮಂತ ಇಟಗಿ, ಸ್ವಾಮಿದೇವ ದಾಸನಕೇರಿ, ಮಾರುತಿ ಕಲಾಲ್, ಬಸವರಾಜ ಚಂಡರಕಿ, ಪರಶುರಾಮ ಕುರಕುಂದಿ, ರಾಮು ರಾಠೋಡ, ಸುನೀತಾ ಚವ್ಹಾಣ, ವಿಲಾಸ ಪಾಟೀಲ್, ಡಾ. ಸಿದ್ದವೀರಪ್ಪ ಪಾಟೀಲ್, ಅಸದ್ ಚಾವುಸ್, ಗೋಪಾಲ ದಾಸನಕೇರಿ, ಸುರೇಶ ಮಡ್ಡಿ, ಮಂಜುನಾಥ ದಾಸನಕೇರಿ, ಮಶೇಪ್ಪ ತಾತಳಗೇರಾ, ಕಿಟ್ಟು, ಅಂಬಯ್ಯ ಶಾಬಾದಿ, ಬಸವರಾಜಪ್ಪಗೌಡ ಚಿಕ್ಕಬೂದುರ, ಮಲ್ಲು ಮುದ್ನಾಳ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT