ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿಕುಣಿ ಹಾಗೂ ಸೌಧಾಗರ ಜಲಾಶಯಕ್ಕೆ ಬಾಗೀನ ಅರ್ಪಿಸಿದ ಶಾಸಕ ಕಂದಕೂರ

Published 3 ನವೆಂಬರ್ 2023, 14:01 IST
Last Updated 3 ನವೆಂಬರ್ 2023, 14:01 IST
ಅಕ್ಷರ ಗಾತ್ರ

ಹತ್ತಿಕುಣಿ (ಯರಗೋಳ): ರೈತರ ಜೀವನಾಡಿಯಾಗಿರುವ ಹತ್ತಿಕುಣಿ ಹಾಗೂ ಸೌಧಾಗರ ಜಲಾಶಯಗಳು ಭರ್ತಿಯಾಗಿದ್ದು, ಗುರುಮಿಠಕಲ್ ಮತಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ಅವರು ಜಲಾಶಯದಲ್ಲಿ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ’ರಾಜ್ಯದಲ್ಲಿ ಒಂದು ಕಡೆ ಬರಗಾಲ, ಕುಡಿಯುವ ನೀರಿನ ಸಮಸ್ಯೆ ಹಾಗೂ ವಿದ್ಯುತ್ ಲೋಡ್ ಶೆಡ್ಡಿಂಗ್ ಸಮಸ್ಯೆಗಳು ರೈತರನ್ನು ಕಾಡುತ್ತೀವೆ, ಇಂತಹ ಸಮಯದಲ್ಲಿ ಜಲಾಶಯಗಳು ಭರ್ತಿಯಾಗಿರುವುದು ಸಂತಸ ತಂದಿದೆ. ರೈತರು ಸಂಯಮದಿಂದ ನೀರು ಪೋಲಾಗದಂತೆ ಎಚ್ಚರಿಕೆವಹಿಸಬೇಕು’ ಎಂದು ತಿಳಿಸಿದರು.

ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಎಸ್.ಎನ್ ಹಿರೇಮನಿ, ಕಾಡಾ ಇಇ ಸಿ.ಯು ಮಠಪತಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಚೇತನ ಕಳಸ್ಕರ್, ಎಂಜಿನಿಯರ್ ಕಾವೇರಿ, ನೀರು ಬಳಕೆದಾರರ ಸಂಘದ ಅಧ್ಯಕ್ಷರಾದ ಶರಣಪ್ಪಗೌಡ ಮಾಲಿ ಪಾಟೀಲ್, ಅಮೀನರಡ್ಡಿ ಬಿಳ್ಹಾರ, ಶರಣಪ್ಪ ದುಗ್ಗಾಣಿ, ಸುಭಾಶ್ಚಂದ್ರ ಹೊನಗೇರಾ, ಅಮೃತರಡ್ಡಿ ಪಾಟೀಲ್, ಟಿಎಪಿಎಂಎಸ್ ಅಧ್ಯಕ್ಷ ಜಿ. ತಮ್ಮಣ್ಣ, ಮಲ್ಲರಡ್ಡಿಗೌಡ ಪಾಟೀಲ್, ರಾಮಣ್ಣ ಕೊಟಗೇರಾ, ಭೀಮರಡ್ಡಿ ರಾಂಪೂರಳ್ಳಿ, ಕಂದಾಯ ಅಧಿಕಾರಿ ರಾಜಶೇಖರ ಪಾಟೀಲ್, ಕೃಷಿ ಅಧಿಕಾರಿ ಮಲ್ಲಿಕಾರ್ಜುನ ಕಂದರ, ರವಿ ಪಾಟೀಲ್, ಹಣಮಂತ ನಾಯಕ, ಅಯ್ಯಣಗೌಡ ಚಾಮನಳ್ಳಿ, ಲಿಂಗಾರಡ್ಡಿ ಯಡ್ಡಳ್ಳಿ ಸೇರಿದಂತೆ ಜಲಾಶಯ ವ್ಯಾಪ್ತಿಯ ರೈತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT