ಮಂಗಳವಾರ, ಸೆಪ್ಟೆಂಬರ್ 28, 2021
22 °C
ಹೆಲಿಕಾಪ್ಟರ್ ಮೂಲಕ ಸುರಪುರದಿಂದ ಬೆಂಗಳೂರಿಗೆ ಶಾಸಕರ ದಿಢೀರ್ ಪ್ರಯಾಣ

ಶಾಸಕ ರಾಜೂಗೌಡ ಹೆಗಲಿಗೆ ಆನಂದಸಿಂಗ್ ಹೊಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿರುವ ವಿಜಯನಗರ ಶಾಸಕ ಆನಂದಸಿಂಗ್ ಅವರ ಮನವೊಲಿಸುವ ಜವಾಬ್ದಾರಿಯನ್ನು ಪಕ್ಷದ ವರಿಷ್ಠರು ಶಾಸಕ ರಾಜೂಗೌಡರಿಗೆ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜೂಗೌಡರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರೆ ಮಾಡಿ ಆನಂದಸಿಂಗ್‍ನನ್ನು ಬೆಂಗಳೂರಿಗೆ ಕರೆ ತರಲು ತಿಳಿಸಿದರು. ರಾಜೂಗೌಡರನ್ನು ಕರೆದ್ಯೊಯಲು ಬೆಂಗಳೂರಿನಿಂದ ಹೆಲಿಕಾಪ್ಟರ್ ಬಂದಿತು. ಪಟ್ಟಣದ ಪ್ರವಾಸಿ ಮಂದಿರದ ಹೆಲಿಪ್ಯಾಡ್‍ನಿಂದ ಹೊಸಪೇಟೆಯ ಜಿಂದಾಲ್‍ಗೆ ಪಯಣ ಬೆಳೆಸಿದರು.

ಈ ಬಗ್ಗೆ ಮಾತನಾಡಿದ ರಾಜೂಗೌಡ, ‘ಆನಂದಸಿಂಗ್ ಮತ್ತು ನಾನು ಆಪ್ತ ಸ್ನೇಹಿತರು. ಅವರನ್ನು ಬಿಜೆಪಿಗೆ ನಾನೇ ಕರೆ ತಂದಿದ್ದೆ. ವರಿಷ್ಠರ ಸೂಚನೆ ಮೇರೆಗೆ ಉಪಚುನಾವಣೆಯ ಸಂಪೂರ್ಣ ಹೊಣೆ ಹೊತ್ತು ಅವರಿಗೆ ಗೆಲುವು ದೊರಕಿಸಿಕೊಟ್ಟಿದ್ದೆ‘ ಎಂದರು.

‘ಮಂಗಳವಾರದಿಂದ ವರಿ ಷ್ಠರು ಆನಂದಸಿಂಗ್ ಅವರನ್ನು ಸಂಪರ್ಕಿ ಸಲು ಯತ್ನಿಸಿದ್ದರೂ ಸಾಧ್ಯವಾಗಿಲ್ಲ. ಅವರೊಂದಿಗೆ ನನ್ನ ಒಡನಾಟ ಇರುವುದರಿಂದ ವರಿಷ್ಠರು ಈ ಜವಾಬ್ದಾರಿ ನನ್ನ ಮೇಲೆ ಹೊರೆಸಿದ್ದಾರೆ. ನಾನು ಅವರೊಂದಿಗೆ ಮಾತನಾಡಿದ್ದೇನೆ’ ಎಂದು ಹೇಳಿದರು.

‘ಆನಂದಸಿಂಗ್ ಅವರನ್ನು ಬಿ.ಎಸ್. ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಕರೆದುಕೊಂಡು ಹೋಗುತ್ತೇನೆ. ನಿರೀಕ್ಷಿತ ಖಾತೆ ತಪ್ಪಿದ್ದರಿಂದ ಅಸಮಾಧಾ ನಗೊಂಡಿದ್ದಾರೆ. ಅವರ ಮನವೊಲಿಕೆ ಖಂಡಿತವಾಗಿ ಸಾಧ್ಯವಾಗಲಿದೆ’ ಎಂದರು.

‘ನನಗೆ ಸಚಿವ ಸ್ಥಾನ ನೀಡಿದರೂ ಸ್ವೀಕರಿಸುವುದಿಲ್ಲ. ನನ್ನ ನಿರ್ಧಾರ ಅಚಲವಾಗಿ. ಉಳಿದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರುವುದು ನನ್ನ ಗುರಿ. ಆಗ ಸಚಿವನಾಗುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.