ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಾಭಿವೃದ್ಧಿ ನಿಧಿ: ದೇಗುಲ,ಸಿಸಿ ರಸ್ತೆ, ಚರಂಡಿಗೆ ಹೆಚ್ಚು ಅನುದಾನ

ಯಾದಗಿರಿ ಮತಕ್ಷೇತ್ರಕ್ಕೆ ಯಾದಗಿರಿ, ವಡಗೇರಾ, ಶಹಾಪುರ ತಾಲ್ಲೂಕಿನ ಗ್ರಾಮಗಳು
Last Updated 13 ಅಕ್ಟೋಬರ್ 2021, 7:51 IST
ಅಕ್ಷರ ಗಾತ್ರ

ಯಾದಗಿರಿ: ಯಾದಗಿರಿ ಮತಕ್ಷೇತ್ರದ ಶಾಸಕ ವೆಂಕಟರಡ್ಡಿ ಮುದ್ನಾಳ ಅವರು ಮೊದಲ ಬಾರಿಗೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದು, ತಮ್ಮ ಪ್ರದೇಶಾಭಿವೃದ್ಧಿ ಯೋಜನೆಯಡಿ ಸಿ. ಸಿ ರಸ್ತೆ, ಚರಂಡಿ, ದೇವಸ್ಥಾನಗಳಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ.

ಯಾದಗಿರಿ ಮತಕ್ಷೇತ್ರಕ್ಕೆ ಯಾದಗಿರಿ ತಾಲ್ಲೂಕು, ವಡಗೇರಾ ತಾಲ್ಲೂಕು, ಶಹಾಪುರ ತಾಲ್ಲೂಕಿನ ಗ್ರಾಮಗಳು ಒಳಪಡುತ್ತವೆ. ವಡಗೇರಾ ನೂತನ ತಾಲ್ಲೂಕು ಕೇಂದ್ರವಾಗಿದ್ದು, ಗ್ರಾಮ ಪಂಚಾಯಿತಿ ಸ್ಥಾನ ಹೊಂದಿದೆ.

2018–19ರಲ್ಲಿ ವಡಗೇರಾ ತಾಲ್ಲೂಕಿನ ಇಟಗಾ ಗ್ರಾಮದ ಆಂಜನೇಯ ದೇವಸ್ಥಾನ ಅಭಿವೃದ್ಧಿಗೆ ₹2 ಲಕ್ಷ, ಶಹಾಪುರ ತಾಲ್ಲೂಕಿನ ಬಲಕಲ್‌ ಗ್ರಾಮದ ಸಿ.ಸಿ ಚರಂಡಿ ನಿರ್ಮಾಣಕ್ಕೆ ₹4 ಲಕ್ಷ, ದೋರನಹಳ್ಳಿ ಗ್ರಾಮದ ಮಲ್ಲಮ್ಮ ದೇವಸ್ಥಾನದಿಂದ ಚಿಕ್ಕಮಠದ ವರೆಗೆ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ ₹4.50 ಲಕ್ಷ ವೆಚ್ಚ ಮಾಡಲಾಗಿದ್ದು, ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ದಾಖಲೆಗಳಲ್ಲಿ ತಿಳಿಸಲಾಗಿದೆ.

ಶಹಾಪುರ ತಾಲ್ಲೂಕಿನ ಮುನಮುಟಗಿ ಗ್ರಾಮದ ಹೊನ್ನಪ್ಪ ಮನೆಯಿಂದ ನೀಲಮ್ಮ ಮನೆವರೆಗೆ ಸಿ.ಸಿ ರಸ್ತೆಗಾಗಿ ₹2 ಲಕ್ಷ, ಇಬ್ರಾಹಿಂಪುರ ಗ್ರಾಮದ ಮಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ₹2 ಲಕ್ಷ, ವಡಗೇರಾ ತಾಲ್ಲೂಕಿನ ಕೊಡಾಲ ಸಂಗಮದಲ್ಲಿನ ಸಂಗಮೇಶ್ವರ ದೇವಸ್ಥಾನದ ಸಭಾ ಮಂಟಪ ನಿರ್ಮಾಣಕ್ಕಾಗಿ ₹3 ಲಕ್ಷ, ಮನಗನಾಳ ಗ್ರಾಮದ ಬಸವಣ್ಣ ದೇವಸ್ಥಾನ ಅಭಿವೃದ್ಧಿಗಾಗಿ ₹3 ಲಕ್ಷ ವೆಚ್ಚ ಮಾಡಿದ್ದು ಕೆಲಸ ಪೂರ್ಣಗೊಂಡಿದೆ.

ವಡಗೇರಾ ತಾಲ್ಲೂಕಿನ ಚೆನ್ನೂರ ಗ್ರಾಮದ ದ್ಯಾವಮ್ಮ ದೇವಸ್ಥಾನ ಅಭಿವೃದ್ಧಿಗೆ ₹50 ಸಾವಿರ, ಇದೇ ಗ್ರಾಮದ ನದಿ ರಸ್ತೆ, ಚರಂಡಿ ನಿರ್ಮಾಣಕ್ಕಾಗಿ ₹1.50 ಲಕ್ಷ, ಶಹಾಪುರ ತಾಲ್ಲೂಕಿನ ಅನವಾರ ಗ್ರಾಮದ ರಂಗಪ್ಪನಾಯಕ ಮನೆಯಿಂದ ಯಂಕೋಬ ಮನೆವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ₹1.50 ಲಕ್ಷ, ಮದರಕಲ್‌ ಗ್ರಾಮದ ಶಿವರಾಜಪ್ಪ ಮನೆಯಿಂದ ಅಗಸಿವರೆಗೆ ಚರಂಡಿ ನಿರ್ಮಾಣ ₹1.50 ಲಕ್ಷ, ಕೊಳ್ಳೂರು (ಎಂ) ಗ್ರಾಮದ ಶಿವಪ್ಪ ಮನೆಯಿಂದ ಮಾನಸಯ್ಯ ಮನೆವರೆಗೆ ಚರಂಡಿ ನಿರ್ಮಾಣ ₹2 ಲಕ್ಷ, ವಡಗೇರಾ ತಾಲ್ಲೂಕಿನ ಅನಕಸುಗೂರು ಗ್ರಾಮದ ಬಸವಣ್ಣ ದೇವಸ್ಥಾನ ಅಭಿವೃದ್ಧಿಗೆ ₹2.80 ಲಕ್ಷ, ಕದರಾಪುರ ಗ್ರಾಮದ ಮುಖ್ಯ ರಸ್ತೆಯಿಂದ ಬಿಳ್ಹಾರ ಗ್ರಾಮದವರಗೆ ರಸ್ತೆ ಸುಧಾರಣೆ ₹4 ಲಕ್ಷ, ಉಳ್ಳೆಸೂಗೂರ ಗ್ರಾಮ ಮರೆಮ್ಮ ದೇವಸ್ಥಾನ ಅಭಿವೃದ್ಧಿ ₹2 ಲಕ್ಷ, ಬೆಂಡೆಬೆಂಬಳಿಯಿಂದ ಸಂಗಮ ಮುಖ್ಯ ರಸ್ತೆಯಿಂದ ಕೋಡಾಲ ಗ್ರಾಮದ ವರೆಗೆ ರಸ್ತೆ ಸುಧಾರಣೆ ₹4 ಲಕ್ಷ ವೆಚ್ಚದಲ್ಲಿ ಕಾಮಗಾರಿ ಮಾಡಲಾಗಿದೆ.

ಪೂರ್ಣಗೊಂಡ ಕೆಲಸಗಳು:ಶಹಾಪುರ ತಾಲ್ಲೂಕಿನ ಇಬ್ರಾಂಹಿಪುರ ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ (ಹುರಸಗುಂಡಗಿ ಮುಖ್ಯ ರಸ್ತೆಯಿಂದ ನಾಸಿಯವರ ಮನೆವರೆಗೆ) ₹3 ಲಕ್ಷ, ಇಬ್ರಾಹಿಂಪುರ ಗ್ರಾಮದ ಬಸವಣ್ಣ ದೇವಸ್ಥಾನ 3 ಲಕ್ಷ, .ವಡಗೇರಾ ತಾಲ್ಲೂಕಿನ ಗೊಂದೆನೂರ ಗ್ರಾಮದಲ್ಲಿ ದ್ಯಾವಮ್ಮ ದೇವಸ್ಥಾನ ₹1.22 ಲಕ್ಷದಲ್ಲಿ ಕಾಮಗಾರಿ ಪೂರ್ಣಗೊಂಡಿದೆ.

2018–19, 2019–20ರಲ್ಲಿ ಶಹಾಪುರ ತಾಲ್ಲೂಕಿನಲ್ಲಿ 4, ವಡಗೇರಾ ತಾಲ್ಲೂಕಿನಲ್ಲಿ 4 ಕಾಮಗಾರಿಗಳು ಪ್ರಗತಿಯಲ್ಲಿವೆ.

2019–20ರಲ್ಲಿ ಶಹಾಪುರ ತಾಲ್ಲೂಕಿನ 7 ಕಾಮಗಾರಿ, ವಡಗೇರಾ ತಾಲ್ಲೂಕಿನ 9 ಕಾಮಗಾರಿಗಳಿಗೆ ತುಂಡು ಗುತ್ತಿಗೆ ಉಪವಿಭಾಗದಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ.

2019–20ರಲ್ಲಿ ಕೋವಿಡ್‌ ಕಾರಣದಿಂದ ಅಂದಾಜು ಪತ್ರಿಕೆ ಮಾತ್ರ ಸಲ್ಲಿಸಲಾಗಿದೆ. ಶಹಾಪುರ ತಾಲ್ಲೂಕಿನ 4 ಕಾಮಗಾರಿ, ವಡಗೇರಾ ತಾಲ್ಲೂಕಿನ 9 ಕಾಮಗಾರಿ, 2020–21ರಲ್ಲಿ ವಡಗೇರಾ ತಾಲ್ಲೂಕಿನ 19 ಕಾಮಗಾರಿ, ಶಹಾಪುರ ತಾಲ್ಲೂಕಿನ 5 ಕಾಮಗಾರಿಗಳಿಗಾಗಿ ಅಂದಾಜು ಪತ್ರಿಕೆ ಸಲ್ಲಿಸಲಾಗಿದೆ.
ಶಹಾಪುರ ತಾಲ್ಲೂಕಿನ 12, ವಡಗೇರಾ ತಾಲ್ಲೂಕಿನ 5 ಕಾಮಗಾರಿಗಳು ಅಂದಾಜು ಪತ್ರಿಕೆ ಹಂತದಲ್ಲಿವೆ. 2021–22ರಲ್ಲಿ ವಡಗೇರಾ ತಾಲ್ಲೂಕಿನ 8, ಶಹಾಪುರ ತಾಲ್ಲೂಕಿನ 2 ಕಾಮಗಾರಿಗಳು ಅಂದಾಜು ಪತ್ರಿಕೆ ಹಂತದಲ್ಲಿವೆ.

‘ಕೋವಿಡ್‌–19 ಸಂಬಂಧಿತ ಆಸ್ಪತ್ರೆಗಳ ಸುಧಾರಣೆಗೂ ಅನುದಾನ ಬಳಸಿಕೊಳ್ಳಲಾಗುತ್ತಿದೆ. ಆಂಬುಲೆನ್ಸ್‌, ಬೆಡ್‌, ಗಾಲಿಖುರ್ಚಿ ಸೇರಿದಂತೆ ವಿವಿಧ ಉದ್ದೇಶಗಳಿಗೆ ಇನ್ನೂ ಅನುದಾನ ನೀಡಬೇಕಾಗಿದೆ’ ಎನ್ನುತ್ತಾರೆ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬೇಡಿಕೆ ಇದ್ದ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಸಿಸಿ ರಸ್ತೆ, ಚರಂಡಿ, ದೇವಸ್ಥಾನಗಳಿಗೆ ಹೆಚ್ಚು ಅನುದಾನ ನೀಡಲಾಗಿದೆ.
- ವೆಂಕಟರೆಡ್ಡಿ ಮುದ್ನಾಳ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT