ಹುಣಸಗಿ: ಅತ್ತೆ–ಸೊಸೆ ಎಂದರೆ ಕಲಹ, ವೈಮನಸ್ಸು, ಸಿಡುಕು ಎಂಬುದು ಸಹಜ. ಆದರೆ ಇಲ್ಲೊಬ್ಬ ಅತ್ತೆ, ತಮ್ಮ ಸೊಸೆಗೆ ಒಂದು ಕಿಡ್ನಿ ದಾನ ಮಾಡಿ, ತಾಯಿಯಾಗಿದ್ದಾರೆ.

ತಾಲ್ಲೂಕಿನ ಗಡಿಗ್ರಾಮ ಮಾಳನೂರು ಗ್ರಾಮದ ಶಾಂತಾಬಾಯಿ ಮೇಲಿನಮನಿ ಕಿಡ್ನಿದಾನಿ.

ಶಾಂತಾಬಾಯಿ–ಗುರಣ್ಣ ಮೇಲಿನಮನಿ ದಂಪತಿಯ ಪುತ್ರ ಪ್ರಕಾಶ ಅವರೊಂದಿಗೆ 14 ವರ್ಷಗಳ ಹಿಂದೆ ತಾಳಿಕೋಟೆ ತಾಲ್ಲೂಕಿನ ಹೊಸಳ್ಳಿ ಗ್ರಾಮದ ಬಸಮ್ಮ ಅವರೊಂದಿಗೆ ಮದುವೆಯಾಗಿತ್ತು. ಖಾಸಗಿ ವಾಹನ ಚಾಲಕರಾಗಿ ಪ್ರಕಾಶ, ಬೆಂಗಳೂರನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮದುವೆ ಬಳಿಕ ಬಸಮ್ಮ ಆರೋಗ್ಯವಾಗಿದ್ದರು. ಮೊದಲ ಮಗು ಮಣಿಕಂಠನ ಹೆರಿಗೆ ವೇಳೆ ಕಿಡ್ನಿ ಸಮಸ್ಯೆ ತಿಳಿದಿದೆ. ಬಳಿಕ ವಿಜಯಪುರದ ಯಶೋಧಾ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯಲಾಗುತ್ತಿತ್ತು. ಆದರೆ ಕೆಲ ತಿಂಗಳಿಂದ ಸಮಸ್ಯೆ ಹೆಚ್ಚಾಗಿ ಕಿಡ್ನಿ ಬದಲಿಸಬೇಕಾಯಿತು. ಆಗ ಸಂಬಂಧಿಗಳು ನೆರವಿಗೆ ಬರುವುದಾಗಿ ಭರವಸೆ ನೀಡಿದರು.

‘ನಮ್ಮ ತಾಯಿ ಶಾಂತಾಬಾಯಿ(62) ಅವರು ಸೊಸಗೆ ಕಿಡ್ನಿ ದಾನ ಮಾಡಲು ಮುಂದಾದರು. ಪತ್ನಿ ಬಸಮ್ಮ ಹಾಗೂ ನಮ್ಮ ತಾಯಿಯ ರಕ್ತವನ್ನು ಮ್ಯಾಚ್ ಮಾಡಿ, ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಯಿತು. 10 ದಿನದ ಹಿಂದೆ ಆಪರೇಶನ್ ಮಾಡಲಾಗಿದ್ದು, ಇಬ್ಬರೂ ಆರೋಗ್ಯದಿಂದ ಇದ್ದಾರೆ ಎಂದು ಪ್ರಕಾಶ ಮೇಲನಮನಿ ಮಾಹಿತಿ ನೀಡಿದರು.

‘ಸೊಸೆ ಬಸಮ್ಮ, ನಮ್ಮನ್ನು ಚೆನ್ನಾಗಿಯೇ ನೋಡಿಕೊಂಡಿದ್ದಾರೆ. ಆತ್ಮ ತೃಪ್ತಿಯಿಂದ ಕಿಡ್ನಿಯನ್ನು ದಾನ ಮಾಡಿದ್ದೇನೆ. ನಮ್ಮ ಕುಟುಂಬ ಚೆನ್ನಾಗಿ ಇರಲಿ ಎಂಬುದು ಮುಖ್ಯ ಉದ್ದೇಶ’ ಎಂದು ಶಾಂತಾಬಾಯಿ ಮೇಲಿನಮನಿ ತಿಳಿಸಿದರು.

ಅತ್ತೆ–ಸೊಸೆ, ಇಬ್ಬರೂ ಮಾದರಿ ಕಾರ್ಯ ಮಾಡಿ, ಗ್ರಾಮಕ್ಕೆ ಹೆಮ್ಮೆ ತಂದಿದ್ದಾರೆ. ಬೇಗ ಗುಣಮುಖರಾಗಿ ಗ್ರಾಮಕ್ಕೆ ವಾಪಸಾಗಲಿ ಎಂದು ಪ್ರಭುಗೌಡ ಗದಿಗೆಪ್ಪಗೋಳ, ತಿಪ್ಪಣ್ಣ ಕಾರನೂರು, ವೀರೇಶ ಹಾಗೂ ಗ್ರಾಮಸ್ಥರು ಹೇಳಿದರು.

ದೇವರು ಎರಡು ಕಿಡ್ನಿ ಕೊಟ್ಟಿದ್ದಾನೆ. ಆದರೆ ಸೊಸೆಗೆ ತೊಂದರೆಯಾಗಿದ್ದರಿಂದಾಗಿ ಅವರು ಚನ್ನಾಗಿ ಇರಲಿ ಎಂಬ ಸದುದ್ದೇಶದಿಂದ ಒಂದು ಕಿಡ್ನಿ ದಾನ ಮಾಡಿದ್ದೇನೆ
– ಶಾಂತಾಬಾಯಿ ಮೇಲಿನಮನಿ, ಕಿಡ್ನಿ ದಾನ ಮಾಡಿದ ಅತ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.