ಶನಿವಾರ, ಜನವರಿ 28, 2023
14 °C
ಕೇಕ್‌ ಕತ್ತರಿಸಿ ಶುಭಾಶಯ; ಹಣ್ಣು, ಕಬ್ಬಿನ ಹಾಲು ವಿತರಣೆ

ಹೊಸ ವರ್ಷಕ್ಕೆ ಸಂಭ್ರಮದ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಯಾದಗಿರಿ: ಶನಿವಾರ ರಾತ್ರಿವೇಳೆ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಹೊಸ ವರ್ಷಾಚರಣೆಯ ಸಂಭ್ರಮ ಮನೆ ಮಾಡಿತ್ತು.

ಕೇಂದ್ರ ಮೆಥೋಡಿಸ್ಟ್ ಚರ್ಚ್: ನಗರದ ಕೇಂದ್ರ ಮೆಥೋಡಿಸ್ಟ್ ಚರ್ಚಿನಲ್ಲಿ ಹೊಸ ವರ್ಷಾಚರಣೆಯ ಹಿನ್ನಲೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಪ್ರಾರ್ಥನೆಯ ನಂತರ ಕೇಕ್ ಕತ್ತರಿಸಿದ ಮೆಥೋಡಿಸ್ಟ್ ಚರ್ಚನ ಜಿಲ್ಲಾ ಮೇಲ್ವಿಚಾರಕ ರೆ.ಸತ್ಯಾಮಿತ್ರ ಜನತೆಗೆ ನೂತನ ವರ್ಷದ ಶುಭಾಶಯಗಳನ್ನು ಕೋರಿದರು. ಸಹಾಯ ಸಭಾಪಾಲಕ ರೆ.ಯೇಸುನಾಥ ನಂಬಿ ಸೇರಿದಂತೆ ಮುಖಂಡರು ಇದ್ದರು.

ಟೋಕ್ರಿ ಕೋಲಿ ಸಮಾಜದ ಕಚೇರಿ: ನಗರದ ಟೋಕ್ರಿ ಕೋಲಿ ಸಮಾಜದ ಜಿಲ್ಲಾ ಹಳೆ ಕಚೇರಿಯಲ್ಲಿ ಶನಿವಾಅರ ರಾತ್ರಿ ವೇಳೆ ಕಲ್ಲಂಗಡಿ ಹಣ್ಣನ್ನು ಕತ್ತರಿಸಿ, ಕಬ್ಬಿನ ಹಾಲು ವಿತರಿಸಿ ನೂತನ ವರ್ಷವನ್ನು ಸ್ವಾಗತಿಸಿದರು.

ನಂತರ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಮುದ್ನಾಳ ಮಾತನಾಡಿದರು.

ಸುನಂದಾ, ಹರ್ಷಿತಾ, ಅರ್ಪಿತಾ, ಪವನ ಮುದ್ನಾಳ, ವಿಶಾಲ ಮುದ್ನಾಳ, ಜಗದೀಶ, ಸಣ್ಣ ಹಣಮಂತ, ತಾಯಪ್ಪ ಪೂಜಾರಿ, ಚಂದ್ರಶೇಖರ, ಯಲ್ಲಾಲಿಂಗ, ರಾಮಕರಷ್ಣಾ, ಮಹಾದೇವಪ್ಪ, ಮೈಲಾರಲಿಂಗ, ಭಾಗಪ್ಪ, ಕುಮ್ಮದ, ಬೃಂದಾ, ನಂದಿನಿ, ಪ್ರೀತಮ್, ರವಿ, ಶಿವು, ಅನೀಲ, ಲಕ್ಕಿ, ಮನ್ವಿತ್, ಅಮೂಲ್ಯ, ಭುವನ, ಪ್ರಜ್ವಲ್ ಇದ್ದರು.

ತಾತಾ ಸೀಮಂಡ್ಸ್ ಮೆಮೋರಿಯಲ್ ಚರ್ಚ್: ನಗರದ ತಾತಾ ಸೀಮಂಡ್ಸ್ ಮೆಮೋರಿಯಲ್ ಮೆಥೋಡೊಸ್ಟ್ ಚರ್ಚ್ ನಲ್ಲಿ ಹೊಸ ವರ್ಷವು ನಮ್ಮೆಲ್ಲರ ಬಾಳಲ್ಲಿ ಸಂತಸವನ್ನು ತರಲಿ, ಯೇಸುವಿನ ಕರುಣೆ ಎಲ್ಲರಿಗೂ ಸಿಗಲಿ ಎಂದು ಪ್ರಾರ್ಥಿಸಿದ ನಂತರ ಸಭಾಪಾಲಕ ರೆ.ಸಂಸೋನ್ ಕೇಕ್ ಕತ್ತರಿಸಿ ಹೊಸ ವರ್ಷದ ಶುಭಾಶಯ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.