ಯಾದಗಿರಿ: ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ಬಂಧನಕ್ಕೊಳಗಾದ ಆರೋಪಿ ಫೈಯಾಜ್ ಜೊತೆ ಸಂಪರ್ಕ ಹೊಂದಿರುವ ಜಿಲ್ಲೆಯ ಶಹಾಪುರ ನಗರದ ಖಾಲೀದ್ ಅಹ್ಮದ್ ನಿವಾಸದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡ ಗುರುವಾರ ದಾಳಿ ಮಾಡಿದೆ.
ರಾಂಚಿ ಪೊಲೀಸ್ ಠಾಣೆಯ ಆರೋಪಿ ಫೈಯಾಜ್ ಜೊತೆ ಇನ್ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ಚಾಟ್ ಮಾಡುತ್ತಿದ್ದರಿಂದ ಶಂಕಿತ ಯುವಕನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ರಾಂಚಿ ಮೂಲದ ಎನ್ಐಎ ತಂಡ ಗುರುವಾರ ಬೆಳಗಿನ ಜಾವ 4 ಗಂಟೆಯಿಂದ 10 ಗಂಟೆಗೆ ವರೆಗೆ ಪರಿಶೀಲನೆ ನಡೆಸಿದೆ. ಅಲ್ಲದೇ ಶಂಕಿತ ಅಹ್ಮದ್‌ನ ಎರಡು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಖಾಲೀದ್ ಅಹ್ಮದ್‌ನ ತೀವ್ರ ವಿಚಾರಣೆ ನಡೆಸಿದ ತಂಡ ಸೆ. 20 ರಂದು ಮತ್ತೆ ರಾಂಚಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಮೊಬೈಲ್ ಜೊತೆಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್ ಜಿರಾಕ್ಸ್ ಪ್ರತಿ ದಾಖಲೆಗಳನ್ನು ತೆಗೆದುಕೊಂಡು ಹೋಗಿದೆ. ಎನ್ಐಎ ತಂಡದಿಂದ ಖಾಲಿದ್ ವಿಚಾರಣೆ ಮುಕ್ತಾಯವಾಗಿದೆ.
ಶಂಕಿತ ಯುವಕ 22 ವರ್ಷದ ಖಾಲೀದ್ ಅಹ್ಮದ್ ಶಹಾಪುರದ ಗುತ್ತಿಪೇಟದಲ್ಲಿ ವಾಸವಾಗಿದ್ದಾನೆ. ಹಣ್ಣು ಮತ್ತು ಚಿಲ್ಲರೆ ವ್ಯಾಪಾರ ಜೊತೆ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.