ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಸ್‌ಎಸ್‌ ಶಿಬಿರ ಸಮಾರೋಪ

Last Updated 5 ಜನವರಿ 2022, 3:21 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆ ಮಹಿಳಾ ಮಹಾವಿದ್ಯಾಲಯದಿಂದ ಮೌನೇಶ್ವರ ದೇವಸ್ಥಾನದಲ್ಲಿ ಮಂಗಳವಾರ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮದ ಸಮಾರೋಪ ನಡೆಯಿತು.

2020-21ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಶಿಬಿರಾರ್ಥಿಗಳಿಂದ ಎನ್‌ಎಸ್‌ಎಸ್ ಗೀತೆ ಹಾಡಲಾಯಿತು. ಶಿಬಿರಾರ್ಥಿಗಳು ತಮ್ಮ ಏಳು ದಿನಗಳ ಶಿಬಿರದ ಅನುಭವವನ್ನು ಅನಿಸಿಕೆ ವ್ಯಕ್ತಪಡಿಸಿದರು. ಶಿಬಿರಾರ್ಥಿಗಳಿಂದ ದೇವಸ್ಥಾನದ ಆವರಣದಲ್ಲಿ ಶ್ರಮದಾನದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮತದಾನ ಜಾಗೃತಿ ಮತ್ತು ಸ್ವಚ್ಛ ಭಾರತ ಜಾಗೃತಿ ಕೋವಿಡ್ ಅರಿವು ಜಾಥಾ ಕಾರ್ಯಕ್ರಮಕ್ಕೆ ಸಾಹಿತಿ ಅಯ್ಯಣ್ಣ ಹುಂಡೇಕರ್, ದೇವಸ್ಥಾನದ ಅಧ್ಯಕ್ಷ ರಾಜು ಹೆಂದೆ ಚಾಲನೆ ನೀಡಿದರು.

ಶಿಬಿರಾರ್ಥಿಗಳು ಕೈಯಲ್ಲಿ ಫಲಕ ಹಿಡಿದುಕೊಂಡು ಘೋಷಣೆ ಕೂಗುತ್ತಾ ಬೀದಿ ಬೀದಿಗಳಲ್ಲಿ ಸಂಚರಿಸುತ್ತಾ ದೇವಸ್ಥಾನಕ್ಕೆ ಬಂದು ತಲುಪಿದರು.

ಬಾಲ್ಯವಿವಾಹ ಪದ್ಧತಿ ನಿರ್ಮೂಲನೆ, ಬಾಲ್ಯವಿವಾಹ ಮಾಡುವುದರ ವಿರುದ್ಧದ ಕಾನೂನುಗಳು, ಕುಡಿತದಿಂದಾಗುವ ಅನಾಹುತಗಳು ಅಲ್ಲದೇ ಕೋವಿಡ್ ಸುರಕ್ಷತೆಯ ಕ್ರಮಗಳ ಕುರಿತು ಅರಿವು ಮೂಡಿಸುವ ಜಾಥಾ ಮಾಡಿದರು.

ಸಮಾಜಶಾಸ್ತ್ರ ಉಪನ್ಯಾಸಕ ಬಸವರಾಜ ಜುಗೇರಿ ವಿದ್ಯಾರ್ಥಿನಿಯರಿಗೆ ಪೌರಾಣಿಕ ಕಥೆಗಳು, ಜಾನಪದ ಕಥೆಗಳು, ಹೇಳುವುದರ ಮುಖಾಂತರ ಶಿಬಿರಾರ್ಥಿಗಳಲ್ಲಿ ಉತ್ಸಾಹ ತುಂಬಿದರು. ಸಹ ಶಿಬಿರಾಧಿಕಾರಿಗಳಾದ ಡಾ.ಸುರೇಶ ಕೆ ಮಠ, ಪತ್ರಿಕಾ ಸಂಪರ್ಕಾಧಿಕಾರಿಗಳಾದ ಸತೀಶ್ ಕುಮಾರ ಹವಾಲ್ದಾರ, ತನುಜಾ ಪಾಟೀಲ, ಮಂಗಳಾ ಕಲಾಲ್, ಅರ್ಥಶಾಸ್ತ್ರ ಉಪನ್ಯಾಸಕಿ ಶಿಲ್ಪಾ ಭಿ, ಚಂದ್ರಾಯಗೌಡ ಪಾಟೀಲ, ಗೌರೀಶ್, ದೇವಿಂದ್ರಪ್ಪ ಬಾವೂರ್ ಹಾಗೂ ಶಿಬಿರಾರ್ಥಿಗಳಾದ ಚೈತ್ರಾ, ಮಹಿಮಾ, ಶ್ರೀಗೌರಿ, ರೇಣುಕಾ, ಹಣಮಂತಿ, ಭೀಮಬಾಯಿ, ಅಂಕಿತಾ, ಶ್ವೇತಾಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT