ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗಾಗಿ ಬಸವಸಾಗರ ಜಲಾಶಯದಿಂದ 1 ಟಿಎಂಸಿ ನೀರು ಬಿಡುಗಡೆ

Published 4 ಏಪ್ರಿಲ್ 2024, 15:56 IST
Last Updated 4 ಏಪ್ರಿಲ್ 2024, 15:56 IST
ಅಕ್ಷರ ಗಾತ್ರ

ನಾರಾಯಣಪುರ: ಬಸವಸಾಗರ ಜಲಾಶಯದಿಂದ 1 ಟಿಎಂಸಿ ಅಡಿಯಷ್ಟು ನೀರನ್ನು ಎಡದಂಡೆ ಮುಖ್ಯ ಕಾಲುವೆಗೆ ಹರಿಸಲಾಯಿತು.

ಕಲಬುರಗಿ ಪ್ರಾದೇಶಿಕ ಆಯುಕ್ತರ ಸೂಚನೆ ಮೇರೆಗೆ ಈಗಾಗಲೇ 0.48 ಟಿಎಂಸಿ ಅಡಿಗಳಷ್ಟು ನೀರನ್ನು ಎಡದಂಡೆ ಮುಖ್ಯ ಕಾಲುವೆಗೆ ಹರಿಬಿಡಲಾಗಿದ್ದು, ಬಾಕಿ ಉಳಿದ 0.42 ಟಿಎಂಸಿ ಅಡಿಗಳಷ್ಟು ನೀರನ್ನು ಮುಂದಿನ ಏ. 11ವರೆಗೆ ಹರಿಬಿಡಲಾಗುವದು ಎಂದು ಕೆಬಿಜೆಎನ್ಎಲ್ ಆಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಅಶೋಕ ರೆಡ್ಡಿ ಮಾಹಿತಿ ನೀಡಿದ್ದಾರೆ.

ಕಾಲುವೆಗೆ ಹರಿಬಿಡಲಾದ ನೀರು ಇಂಡಿ ಶಾಖಾ ಕಾಲುವೆಯಿಂದ ಸೊನ್ನ ಬ್ಯಾರೇಜ್ ಮೂಲಕ ಅಫಜಲಪುರ ತಾಲ್ಲೂಕಿಗೆ ಕುಡಿಯುವ ನೀರು ಪೂರೈಕೆ ಬಳಸಿಕೊಳ್ಳಲಾಗುತ್ತದೆ. ನಿಗದಿಪಡಿಸಿದ 1 ಟಿಎಂಸಿ ಅಡಿ ನೀರು ಪೂರ್ಣಗೊಂಡ ನಂತರ ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗುವುದು ಎಂದು ಗೇಟ್ಸ್ ಉಪವಿಭಾಗದ ಪ್ರಭಾರ ಎಇಇ ವಿಜಯಕುಮಾರ ಅರಳಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT