ಶುಕ್ರವಾರ, ಆಗಸ್ಟ್ 19, 2022
27 °C

ಮೊಹರಂ ಕುಣಿತ ವೇಳೆ ವ್ಯಕ್ತಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಮೊಹರಂ ಕಡೆ ದಿನದ ಅಂಗವಾಗಿ ಅಲಾಯಿ ಕುಣಿಯಲು ತಮಟೆ ತರಲು ಪಕ್ಕದ ಮನೆಗೆ ಹೋದಾಗ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಹೊಸಹಳ್ಳಿ (ಎಸ್) ತಾಂಡಾದಲ್ಲಿ ನಡೆದಿದೆ. ಹೊಸಹಳ್ಳಿ ತಾಂಡಾದ ಬಾಲಪ್ಪ (45) ಕೊಲೆಯಾದ ವ್ಯಕ್ತಿ.

ಭಾನುವಾರ ಮೊಹರಂನ ಕೊನೆ ಇತ್ತು. ಈ ವೇಳೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕುಣಿತಕ್ಕೆ ತಮಟೆ ತರಲು ಪಕ್ಕದ ಮನೆಗೆ ಹೋದಾಗ ಐವರು ಬಡಿಗೆಯಿಂದ ಹೊಡೆದು ಬಾಲಪ್ಪನ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 ಈ ಕುರಿತು ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು