ಬುಧವಾರ, ಮಾರ್ಚ್ 3, 2021
19 °C

ಭಾರತ್ ಬಂದ್‌ಗೆ ಸಹಕರಿಸಿ: ಹುಲಕಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಯಾದಗಿರಿ:‘ತೈಲ ಬೆಲೆ ಏರಿಕೆ ಖಂಡಿಸಿ ಅಖಿಲ ಭಾರತ್ ಕಾಂಗ್ರೆಸ್ ಸಮಿತಿ ಆಗಸ್ಟ್ 10ರಂದು ಸೋಮವಾರ ಕರೆ ನೀಡಿರುವ ಭಾರತ್ ಬಂದ್ ಗೆ ಜಿಲ್ಲೆಯಲ್ಲಿ ಎಲ್ಲರೂ ಸಹಕರಿಸಬೇಕು’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಪಾಟೀಲ್ ಹುಲಕಲ್ ಮನವಿ ಮಾಡಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ಕಳೆದ ಲೋಕಸಭಾ ಚುನಾವಣೆ ಪೂರ್ವದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದರು. ನಂತರ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದ ದೇಶದ ಮಧ್ಯಮ ವರ್ಗ ಹಾಗೂ ಬಡ ಜನರಿಗೆ ತೊಂದರೆಯಾಗಿದೆ’ ಎಂದು ಟೀಕಿಸಿದರು.

‘ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿದ ಮೇಲೆ ಅಗತ್ಯ ವಸ್ತುಗಳ ದರ ಗಗನಕ್ಕೆ ಏರುತ್ತಿದೆ. ಅಡುಗೆ ಅನಿಲ ಬೆಲೆ ದುಪ್ಪಟ್ಟಾಗಿದೆ. ಇದರಿಂದಾಗಿ ಸಾಮಾನ್ಯ ಜನರು ಬದುಕು ನಿರ್ವಹಿಸಲು ಒದ್ದಾಡುತ್ತಿದ್ದಾರೆ. ಮಧ್ಯಮ ಮತ್ತು ಬಡತನ ರೇಖೆಗಿಂತ ಕೆಳವರ್ಗದವರ ಬಗ್ಗೆ ಮೋದಿ ಕಿಂಚಿತ್ತೂ ಯೋಚನೆ ಮಾಡುತ್ತಿಲ್ಲ. ಇದರಿಂದಾಗಿ ಶ್ರೀಸಾಮಾನ್ಯರ ಬದುಕು ದುರ್ಬರವಾಗಿದೆ’ ಎಂದು ಕೇಂದ್ರ ಸರ್ಕಾರ ಆಡಳಿತ ವೈಖರಿ ವಿರುದ್ಧ ಹರಿಹಾಯ್ದರು.

‘ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ಮೇಲೆ ಭಾತರದಲ್ಲಿ ಬಡ ಜನರು ಅನೇಕ ಆಸೆ ಆಶೋತ್ತರ ಇಟ್ಟುಕೊಂಡಿದ್ದರು. ಬಡವರ ಪರವಾಗಿ ಯೋಜನೆಗಳು ಜಾರಿಯಾಗಬೇಬಹುದು ಎಂದು ನಿರೀಕ್ಷಿಸಿದ್ದರು. ಆದರೆ, ಮೋದಿ ಜಾರಿ ಮಾಡಿರುವ ಎಲ್ಲ ಯೋಜನೆಗಳ ಹಿಂದಿನ ಉದ್ದೇಶ ಬಂಡವಾಳ ಸಂಗ್ರಹವೇ ಆಗಿದೆ. ಇದಕ್ಕೆ ಸುಕನ್ಯಾ ಸಮೃದ್ಧಿ ಯೋಜನೆ ಸಾಕ್ಷಿ ಎನ್ನಬಹುದು. ದೀರ್ಘ ಯೋಜನೆಗಳಿಂದ ಬಡತನ ರೇಖೆಗಿಂತ ಕೆಳಗಿನವರಿಗೆ ಪ್ರಯೋಜನವಿಲ್ಲ. ಇಂಥಾ ಅನೇಕ ಯೋಜನೆಗಳಿಂದ ಜನರಿಗೆ ಮರಳು ಮಾಡಲು ಮೋದಿ ಅಧಿಕಾರ ಹಿಡಿದಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇಡೀ ಬಿಜೆಪಿಯನ್ನು ಸಾರಾಸಗಟಾಗಿ ಜನರು ತಿರಸ್ಕರಿಸಲಿದ್ದಾರೆ’ ಎಂದರು.

ಕೇಂದ್ರ ಸರ್ಕಾರದ ಇಂಥಾ ಕೆಟ್ಟ ಆಡಳಿತ ಧೋರಣೆ ಖಂಡಿಸಿ ಕಾಂಗ್ರೆಸ್‌ ಸಮಿತಿ ಬಂದ್‌ಗೆ ಕರೆ ನೀಡಿದೆ.

ವಿಧಾನ ಪರಿಷತ್ ಮಾಜಿ ಸದಸ್ಯ ಚನ್ನಾರಡ್ಡಿ ಪಾಟೀಲ್ ತುನ್ನೂರ್, ಡೇವಿಡ್ ಸೀಮಿಯನ್, ಶ್ರೀನಿವಾಸರಡ್ಡಿ ಕಂದಕೂರ, ಮಹಿಪಾಲರೆಡ್ಡಿ ಹತ್ತಿಕುಣಿ, ಮಲ್ಲಣ್ಣ ದಾಸನಕೇರಿ, ರವಿ ಮಾಲಿಪಾಟೀಲ, ಸುರೇಶ ಜೈನ್, ಮಾಣಿಕರೆಡ್ಡಿ ಕುರಕುಂದಿ, ಸಂಜಯ ಕುಮಾರ್ ಕಾವಲಿ, ಸೋಮಶೇಖರ ಮಸಕನಲ್ಲಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು