ಸೋಮವಾರ, ಜನವರಿ 24, 2022
28 °C
ಯಾದಗಿರಿ ಜಿಲ್ಲೆಯ ಪ್ರಜಾವಾಣಿ ಸಾಧಕರ ವಿವರ–1

ಪ್ರಜಾವಾಣಿ ಸಾಧಕರು: ನಿಸ್ವಾರ್ಥ ಸೇವಕ ದಯಾನಂದ ಜಮಾದಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ (ಯಾದಗಿರಿ ಜಿಲ್ಲೆ): ಸುರಪುರ ನಗರ ಠಾಣೆಯಲ್ಲಿ 2016ರಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಆಗಿ ನೇಮಕಗೊಂಡಿರುವ ದಯಾನಂದ ಜಮಾದಾರ ಅವರು  ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಮೂಲತಃ ಕಲಬುರಗಿ ಸಮೀಪದ ಭೂಪಾಲ ತೆಗನೂರ ಗ್ರಾಮದವರು. ಬಡತನದಲ್ಲಿಯೇ ಬದುಕು ಕಟ್ಟಿಕೊಂಡಿರುವ ಇವರು ವಿದ್ಯಾರ್ಥಿ ದಿನಗಳಲ್ಲಿ ತಮ್ಮ ತಾಯಿಯೊಂದಿಗೆ ತರಕಾರಿ ವ್ಯಾಪಾರ ಮಾಡುತ್ತಿದ್ದರು.

ಕಷ್ಟಪಟ್ಟು ಓದಿ ಬಿಎ ಪಾಸಾಗಿ ಮೊದಲ ಯತ್ನದಲ್ಲೇ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಬಡತನದ ಬೇಗುದಿಗಳನ್ನೆಲ್ಲ ಸ್ವತಃ ಅನುಭವಿಸಿರುವ ಅವರು ದೀನರಿಗೆ, ನಿರ್ಗತಿಕರಿಗೆ, ಭಿಕ್ಷುಕರಿಗೆ ನೆರವು ನೀಡುತ್ತಿದ್ದಾರೆ. ತಮ್ಮ ವೇತನದ ಶೇಕಡ 10 ರಷ್ಟು
ಮೊತ್ತವನ್ನು (₹ 4 ರಿಂದ ₹ 5 ಸಾವಿರ) ಇದೇ ಉದ್ದೇಶಕ್ಕೆ ವಿನಿಯೋಗಿಸುತ್ತಿದ್ದಾರೆ. ಇವರ ಪತ್ನಿಯೂ ಸಾಥ್ ನೀಡುತ್ತಿದ್ದಾರೆ.

ಪ್ರತಿ ದಿನ ಮನೆಯಲ್ಲಿ ಅನ್ನದ ಪೊಟ್ಟಣಗಳನ್ನು ಮಾಡಿ ಭಿಕ್ಷುಕರಿಗೆ, ನಿರ್ಗತಿಕರಿಗೆ ಅವರಿದ್ದ ಸ್ಥಳಕ್ಕೆ ಹೋಗಿ ಕೊಡುತ್ತಾರೆ. ಅಶಕ್ತರಿಗೆ ತಮ್ಮ ಕೈಯಿಂದಲೆ ಉಣಿಸುತ್ತಾರೆ. ರೋಗ ಪೀಡಿತ ಅನಾಥರನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ಇವರ ಸೇವೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಮೇಲಧಿಕಾರಿಗಳು ಇವರ ನಿಸ್ವಾರ್ಥ ಸೇವೆ ಕಂಡು, ಅನೇಕ ಬಾರಿ ಕರ್ತವ್ಯದಲ್ಲಿ ಇದ್ದಾಗಲೂ ಸಮಾಜ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.