ಕಕ್ಕೇರಾ: ಪುರಸಭೆ ವ್ಯಾಪ್ತಿಯ ಗ್ರಾಮಗಳ ರೈತರ ಫಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಒದಗಿಸಿದಿದ್ದರೆ ಬೆಳೆಗಳು ಹಾಳಾಗುವ ಸಂಭವವಿದೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆಯ ಪದಾಧಿಕಾರಿಗಳು ವಾಲ್ಮೀಕಿ ವೃತ್ತದಲ್ಲಿ ಶನಿವಾರ ಪ್ರತಿಭಟನೆ ಮಾಡಿ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮುಖಂಡ ಬುಚ್ಚಪ್ಪನಾಯಕ, ಹೊಸೂರು ಪೈದೊಡ್ಡಿ, ಗೊಲಪಲ್ಲೇರದೊಡ್ಡಿ, ಬನದೊಡ್ಡಿ, ಗುಗಲಗಟ್ಟಿ ಸೇರಿ ಇತರ ಗ್ರಾಮಗಳ ವ್ಯಾಪ್ತಿಯ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು ನಿರಂತರ ವಿದ್ಯುತ್ ನೀಡಬೇಕು, ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಜೆಸ್ಕಾಂ ಎಇಇ ವಿಷ್ಣು, ರೈತರಿಂದ ಮನವಿ ಪತ್ರ ಸ್ವೀಕರಿಸಿ ‘ನಿರಂತರ ಹಾಗೂ ಸಮರ್ಪಕ ವಿದ್ಯುತ್ ನೀಡಲು ಕ್ರಮಕೈಗೊಳ್ಳಲಾಗುವುದು‘ ಎಂದು ತಿಳಿಸಿದರು.

ಅಂಬ್ರಯ್ಯಸ್ವಾಮಿ, ತಿಪ್ಪಣ್ಣ ಜಂಪಾ, ಹಣಮಂತ ಬನದೊಡ್ಡಿ, ಮುದಕಪ್ಪ ಹೊಸೂರ, ಪರಮಣ್ಣ ಹಡಪದ, ದೇವಿಂದ್ರಪ್ಪ ಕುಂಬಾರ, ಸಂಗಪ್ಪ ಹೊಸೂರ, ಲಕ್ಷ್ಮಣ ಬಂಗೇರ, ಶಿವಪ್ಪ ಕುಂಬಾರ, ಸೋಮರಾಯ ದೊರೆ, ರಾಯಪ್ಪ ಹೊಸೂರ, ಹಣಮಂತ ಗೋನಾಟ್ಲ, ವೆಂಕಟೇಶ ಕಾರಲಕುಂಟಿ, ಸಂಗಯ್ಯಸ್ವಾಮಿ, ಹಣಮಂತ ಸುಂಕಾಪುರ, ದುರಗಪ್ಪ ಮಕಾಶಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.