ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ; ಎಬಿವಿಪಿ ಪ್ರತಿಭಟನೆ

Last Updated 22 ಫೆಬ್ರವರಿ 2023, 6:28 IST
ಅಕ್ಷರ ಗಾತ್ರ

ಸುರಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ವಿಭಾಗೀಯ ಪ್ರಮುಖ ಉಪೇಂದ್ರನಾಯಕ ಸುಬೇದಾರ ಮಾತನಾಡಿ, ‘ಗುಲಬರ್ಗಾ ವಿಶ್ವವಿದ್ಯಾಲಯ ಸರಿಯಾದ ಸಮಯಕ್ಕೆ ಪರೀಕ್ಷೆ ನಡೆಯುತ್ತಿಲ್ಲ. ಉದ್ದೇಶಪೂರ್ವಕವಾಗಿ ಅಂಕಗಳ ಬದಲಾವಣೆ, ಆವಕದಲ್ಲಿ ಕೊಟ್ಟ ಅರ್ಜಿಯ ನಿರ್ಲಕ್ಷ್ಯ, ಕುಂಟು ನೆಪ ಹೇಳಿ ಫಲಿತಾಂಶ ತಡೆ ಹಿಡಿಯುವುದು, ಘಟಿಕೋತ್ಸವ ಸರಿಯಾದ ಸಮಯಕ್ಕೆ ಮಾಡುತ್ತಿಲ್ಲ’ ಎಂದು ಆರೋಪಿಸಿದರು.

‘ಪದವಿ ಪರೀಕ್ಷಾ ಕೇಂದ್ರಗಳಿಗೆ ಅನರ್ಹ ಮೇಲ್ವಿಚಾರಕರನ್ನು ನೇಮಿಸುವುದು, ಹೊಸ ಪದವಿ ಕಾಲೇಜುಗಳ ಅನುಮತಿಯಲ್ಲಿ ಭ್ರಷ್ಟಾಚಾರ ಹೀಗೆ ವಿಶ್ವವಿದ್ಯಾಲಯ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದು ನಿಂತಿದೆ. ರಾಜ್ಯಪಾಲರು ಈ ಬಗ್ಗೆ ಗಮನ ಹರಿಸಬೇಕು’ ಎಂದು ಮನವಿ ಮಾಡಿದರು.

ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಹನುಮಂತ ಸಿಂಗೆ, ವಿನೋದಕುಮಾರ, ಮಾರುತಿ, ದ್ಯಾವಣ್ಣ, ಮಹೆಬೂಬ, ವಿಶ್ವನಾಥ, ಭಾರ್ಗವನಾಯಕ, ಪಿಡ್ಡಪ್ಪ, ಶ್ರೀನಿವಾಸ, ಮುಸ್ಕಾನ, ರಾಧಿಕಾ, ಕಾವ್ಯಾ, ಬಸಮ್ಮ, ಉಮಾಶ್ರೀ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT