ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಪ್ಲೊಮಾ ವಿದ್ಯಾರ್ಥಿಗಳಿಗೆ ತ್ವರಿತ ಸರ್ವೆ

Last Updated 14 ಸೆಪ್ಟೆಂಬರ್ 2019, 14:37 IST
ಅಕ್ಷರ ಗಾತ್ರ

ಯಾದಗಿರಿ: ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಪ್ರಯುಕ್ತ ಇಲ್ಲಿನ ಆರ್.ವಿ. ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ತ್ವರಿತ ಸರ್ವೆ (ಕ್ವಿಕ್ ಸರ್ವೆ) ಕಾರ್ಯಕ್ರಮಕ್ಕೆ ನಗರಸಭೆ ಪೌರಾಯುಕ್ತ ರಮೇಶ ಸುಣಗಾರ ಚಾಲನೆ ನೀಡಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಜಿಲ್ಲಾ ಸಂಚಾಲಕ ಪಿ.ವೇಣುಗೋಪಾಲ ಮಾತನಾಡಿ, ‘ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಸದಾಗಿ ಬೆಳವಣಿಗೆ ಹೊಂದುತ್ತಿರುವ ತಂತ್ರಜ್ಞಾನವನ್ನು ತಿಳಿದುಕೊಳ್ಳುವ ಮೂಲಕ ಹೆಚ್ಚು ಸಾಧನೆ ಮಾಡಬೇಕು’ ಎಂದು ಹೇಳಿದರು.

‘ಎಂಜಿನಿಯರ್ಸ್ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿರುವ ಕ್ವಿಕ್ ಸರ್ವೇ ಕಾರ್ಯಕ್ರಮ ಆಯೋಜಿಸುವ ಮೂಲಕ ಎಂಜಿನಿಯರಿಂಗ್, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಉಪಯೋಗಿ ಕಾರ್ಯಕ್ರಮ ಮಾಡಿರುವುದು ಒಳ್ಳೆಯ ಕಾರ್ಯ ಎಂದರು.

ನಂತರ ನಿವೇದಿತ, ಯಾದಗಿರಿ ಪಾಲಿಟೆಕ್ನಿಕ್ ಹಾಗೂ ಜವಾಹರ್‌ ಕಾಲೇಜು ಡಿಪ್ಲೊಮಾ ವಿದ್ಯಾರ್ಥಿಗಳು ಶಾಸ್ತ್ರಿ ವೃತ್ತದಿಂದ ಸುಭಾಷ್‌ ವೃತ್ತದವರೆಗೆ ರೋಡೊ ಮಿಟರ್ ಯಂತ್ರದಿಂದ ಕ್ವಿಕ್ ಸರ್ವೆ ನಡೆಸಿದರು.

ಆರ್.ವಿ.ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ರಾಜಕುಮಾರ್ ಗಣೇರ, ಎಂಜಿನಿಯರ್‌ ಬನ್ನಪ್ಪ, ಸಚಿನ್ ನಾಯಕ, ನರೇಂದ್ರ ಅನವಾರ, ಪ್ರಭು ಯಡ್ಡಳ್ಳಿ, ನಾರಾಯಣ, ರಮೇಶ, ಬೀರೇಶ ಚಿರತೆನೋರ್, ವಿದ್ಯಾರ್ಥಿಗಳಾದ ರಮೇಶ, ಮಲ್ಲಿಕಾರ್ಜುನ, ನಿಖಿತಾ, ಪ್ರೀತಿ, ಮಲ್ಲಿಕಾರ್ಜುನ ಹುಲುಗಪ್ಪ ಹಾಗೂ ಸಾಬಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT