ಸುರಪುರ: ‘ಎಲ್ಲಾ ಬೌದ್ಧ ಅನುಯಾಯಿಗಳು ಬೌದ್ಧ ಧಮ್ಮವನ್ನು ಪಾಲಿಸುವುದರ ಜತೆಗೆ ನಿತ್ಯವೂ ತ್ರಿಸರಣ ಪಂಚಶೀಲ ಪಠಣ ಮಾಡಬೇಕು. ಇದರಿಂದ ಆ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ’ ಎಂದು ಮುಖಂಡ ನಾಗಣ್ಣ ಕಲ್ಲದೇವನಹಳ್ಳಿ ಹೇಳಿದರು.

ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಪೌರ್ಣಿಮೆ ಅಂಗವಾಗಿ ಏರ್ಪಡಿಸಿದ್ದ ಧಮ್ಮ ವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈಗಾಗಲೇ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹೊಸ್ಮನಿ ಪರಿಪೂರ್ಣ ಬೌದ್ಧ ಅನುಯಾಯಿಯಾಗಿ ತಮ್ಮ ಮನೆಯಲ್ಲಿದ್ದ ದೇವರ ಫೋಟೊಗಳನ್ನು ಕೃಷ್ಣಾ ನದಿಗೆ ಅರ್ಪಿಸಿದ್ದಾರೆ. ಅದರಂತೆ ಎಲ್ಲಾ ಬೌದ್ಧ ಅನುಯಾಯಿಗಳು ಪರಿವರ್ತನೆಯಾಗಬೇಕು’ ಎಂದರು.

ರಾಹುಲ ಹುಲಿಮನಿ ಮಾತನಾಡಿ, ‘ಈಗ ಎಲ್ಲರೂ ಪ್ರತಿನಿತ್ಯ ತಮ್ಮ ತಮ್ಮ ಮನೆಯಲ್ಲಿ ತ್ರಿಸರಣ ಪಂಚಶೀಲ ಪಠಣ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ನಾವು ಪ್ರತಿ ತಿಂಗಳು ನಡೆಸುತ್ತಿರುವ ಈ ಕಾರ್ಯಕ್ರಮ ನ್ಯೂಯಾರ್ಕ್ನ ಉಪಾಸಕರಿಗೂ ಮೆಚ್ಚುಗೆಯಾಗಿದೆ. ಅವರು ಇಲ್ಲಿಗೆ ಭೇಟಿ ನೀಡುವ ಉತ್ಸುಕತೆ ತೋರಿದ್ದಾರೆ’ ಎಂದರು.

ಉಪಾಸಕರು ಗೌತಮ ಬುದ್ಧರ ಪುತ್ಥಳಿಗೆ ಮೇಣದ ಬತ್ತಿ ಬೆಳಗಿ ಪುಷ್ಪಾರ್ಚನೆ ಮಾಡಿ ವಂದಿಸಿದರು. ನಂತರ ತ್ರಿಸರಣ ಪಂಚಶೀಲ ಪಠಣ ನಡೆಸಿದರು.

ಭೋಜನ ದಾನಿ ಶರಣು ಹಸನಾಪುರ ಅವರನ್ನು ಗೌರವಿಸಲಾಯಿತು.

ವೆಂಕಟೇಶ ಹೊಸ್ಮನಿ, ಭೀಮರಾಯ ಸಿಂಧಗೇರಿ, ಮಾಳಪ್ಪ ಕಿರದಳ್ಳಿ, ಶಿವರಾಜ ಪಾಣೆಗಾಂವ್, ರಾಜು ಶಖಾಪುರ, ಶಿವಶಂಕರ ಬೊಮ್ಮನಹಳ್ಳಿ, ಚಂದಪ್ಪ ಪಂಚಮ್, ಶ್ರೀಮಂತ ಚಲುವಾದಿ, ಹಣಮಂತ ಆರ್.ಕೆ.ಎನ್ ಕಾಲೋನಿ, ವೀರಭದ್ರಪ್ಪ ತಳವಾರಗೇರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.