ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। ಜಿಲ್ಲೆಯಾದ್ಯಂತ ದೇವರ ದಾಸಿಮಯ್ಯ ಸ್ಮರಣೆ

ವಚನಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ತೊಡಗಿಸಿಕೊಳ್ಳಿ: ಕೊಟೆಪ್ಪಗೊಳ
Last Updated 26 ಮಾರ್ಚ್ 2023, 13:09 IST
ಅಕ್ಷರ ಗಾತ್ರ

ಯಾದಗಿರಿ: ಶರಣರು ತಮ್ಮ ಅನುಭವದಿಂದ ರಚಿಸಿರುವ ವಚನಗಳು ದಿನಂಪ್ರತಿ ಒಂದಾದರೂ ಓದಿ ಅರ್ಥೈಸಿಕೊಂಡು ಜೀವನದಲ್ಲಿ ತೊಡಗಿಸಿಕೊಂಡರೆ ಸಾಕು ಸಂತಸದ ಜೀವನ ನಮ್ಮದಾಗಲಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೊಟೆಪ್ಪಗೋಳ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಯಾದಗಿರಿ ಹಾಗೂ ದೇವರ ದಾಸಿಮಯ್ಯ ಜಯಂತ್ಯೋತ್ಸವ ಸಮಿತಿ ಹಾಗೂ ವಿವಿಧ ಇಲಾಖೆಗಳು ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶಿಷ್ಟ ಮತ್ತು ವೈಶಿಷ್ಟ್ಯತೆ ಹೊಂದಿನ ಏಕೈಕ ಸಾಹಿತ್ಯ ವಚನ ಸಾಹಿತ್ಯ. ಅಂತ ಶರಣರ ಸಾಹಿತ್ಯಕ್ಕೆ ಮೊದಲನೇಯವರು ದೇವರ ದಾಸಿಮಯ್ಯನವರು. ಕಾಯಕ ಮತ್ತು ದಾಸೋಹ ಎಂಬ ಪರಿಕಲ್ಪನೆಯಡಿ ಜೀವನ ನಡೆಸಬೇಕು ಎಂದು ಜಗತ್ತಿಗೆ ಸಾರಿ ಪ್ರತಿಯೊಬ್ಬರು ತಮ್ಮ ಕಾಯಕದಲ್ಲಿ ತೊಡಗುವ ಜೊತೆಗೆ ದಾನ, ಧರ್ಮ, ದಾಸೋಹದಂತ ಕಾರ್ಯಗಳಲ್ಲಿ ತಲ್ಲಿನರಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದ ಶರಣಲ್ಲಿ ದಾಸಿಮಯ್ಯನವರು ನಮ್ಮ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮುದನೂರಿನವರು ಎಂಬ ಭಾವವೇ ಹೆಮ್ಮೆಯ ವಿಷಯ. ಆದ್ದರಿಂದ ಪ್ರತಿಯೊಬ್ಬರು ಅವರ ದಾರಿಯಲ್ಲಿ ಸಾಗಬೇಕು ಎಂದು ತಿಳಿಸಿದರು.

ವಿಶೇಷ ಉಪನ್ಯಾಸಕರಾಗಿ ಯಾದಗಿರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಸುಭಾಶ್ಛಂದ್ರ ಕೌಲಗಿ ಮಾತನಾಡಿ, ಬದುಕಿಗಾಗಿ ಮಾಡುತ್ತಿದ್ದ ನೇಯ್ಗವೃತ್ತಿಯ ಜೊತೆಗೆ ತನ್ನ ಕಾಯಕ ಮತ್ತು ದರ್ಶನದ ಅನುಭವಗಳ ಸಾರವನ್ನು ಬಳಸಿಕೊಂಡು ವಚನಗಳನ್ನು ರಚಿಸಿ ನಾಡನ್ನು ಬೇಳಗಿಸಿದ ಕಾಯಕ ಯೋಗಿ ದಾಸಿಮಯ್ಯ. ವಚನಗಳು ಆಲಿಸುವುದರಿಂದ ಜೀವನದಲ್ಲಿ ಸ್ಫೂರ್ತಿ ಹೆಚ್ಚುತ್ತದೆ. ಸರಿಯಾದ ದಾರಿಯಲ್ಲಿ ನಡೆಯುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಲು ಶರಣರ ವಚನಗಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ವೆಂಕಟೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಆರಕ್ಷಕ ನೀರಿಕ್ಷಕ ಸುನೀಲ್ ಮುಲಿಮನಿ, ದೇವರ ದಾಸಿಮಯ್ಯ ಜಯಂತ್ಯೋತ್ಸವ ಸಮಿತಿಯ ಜಿಲ್ಲಾದ್ಯಕ್ಷ ಬಸವರಾಜ ಹುನಗುಂದ, ನೇಕಾರ ಸಂಘದ ರಾಜ್ಯ ಉಪಾಧ್ಯಕ್ಷ ಸಿ.ಎನ್. ಭಂಡಾರೆ, ಸಂತೋಷ ಬೊಜ್ಜಿ, ಮುತ್ತಣ್ಣ ಗಡೆದಗೌಡ, ಶಾಂತಪ್ಪ ನಡಗುಂದಿ, ಉಮೇಶ್ ಜಾಡರ್, ಯಲ್ಲಪ್ಪ್ ಮಾರಪಲ್ಲಿ, ಶಿವರಾಜ ಚಾವುಲ್, ಈರಪ್ಪ ಚಿನ್ನಿ, ತಿಪ್ಪಣ್ಣ ಮ್ಯಾಕಲ್, ಮಲ್ಲಪ್ಪ ಕೊಳಗದ, ಶಶಿಧರ ಮಾಸ್ಟರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT