ಹುಣಸಗಿ: ಗ್ರಾಮ ಪಂಚಾಯಿತಿ ನೌಕರರ ಬೇಡಿಕೆ ಈಡೇರಿಕೆಗಾಗಿ ಹುಣಸಗಿ ಪಟ್ಟಣದಲ್ಲಿ ಗ್ರಾ.ಪಂ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ನೌಕರರ ಸಂಘದ ಅಧ್ಯಕ್ಷ ಸಿದ್ರಾಮಯ್ಯ ನಂದಿಕೋಲಮಠ ಮಾತನಾಡಿ, ‘ಹಲವಾರು ವರ್ಷಗಳಿಂದ ಸಾವಿರಾರು ನೌಕರರು ಕಡಿಮೆ ವೇತನದಲ್ಲಿಯೇ ದುಡಿಯುತ್ತಾ ಬಂದಿದ್ದಾರೆ. ಆದರೆ ಸರ್ಕಾರ ನಮಗೆ ಅಗತ್ಯವಿರುವ ಭದ್ರತೆ ಹಾಗೂ ಬೇಡಿಕೆಗಳು ಈಡೇರಿಸುವಲ್ಲಿ ಮುಂದೆ ಬಂದಿಲ್ಲ. ಇದರಿಂದಾಗಿ ಸಾಕಷ್ಟು ಜನ ಕಷ್ಟದಲ್ಲಿಯಲ್ಲಿಯೇ ಜೀವನ ನಡೆಸುವಂತಾಗಿದೆ. ಇನ್ನಾದರೂ ಪಿಂಚಣಿ, ಆರೋಗ್ಯ ವಿಮೆ, ಸೇವಾ ಹಿರಿತನ ಭತ್ಯೆ ನೀಡುವ ಮೂಲಕ ನೆರವಿಗೆ ಬರಬೇಕು’ ಎಂದು ಆಗ್ರಹಿಸಿದರು.

ನೌಕರರ ಸಂಘದ ಉಪಾಧ್ಯಕ್ಷ ಮಲ್ಲಯ್ಯಸ್ವಾಮಿ ನಾಯ್ಕಲ್ ಮಾತನಾಡಿ, ‘ಈ ಕುರಿತು ಹಲವಾರು ಬಾರಿ ಹೋರಾಟ ಮಾಡಿದರೂ ಕೇವಲ ಮೌಖಿಕ ಭರವಸೆ ನೀಡಲಾಗಿದೆ. ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ಬರೆದ ಮನವಿಪತ್ರವನ್ನು ತಾ.ಪಂ ಸಹಾಯಕ ನಿರ್ದೇಶಕ ಶಿವಕುಮಾರ ಚೌದ್ರಿ ಅವರಿಗೆ ನೀಡಲಾಯಿತು. ಪಟ್ಟಣದ ಬಸವೇಶ್ವರ ವೃತ್ತದಿಂದ ತಾಪಂ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈರಣ್ಣಗೌಡ ಹೊಸಗೌಡರ, ನಾಗಪ್ಪ ಕುಂಬಾರ, ಶಿವಪುತ್ರ ನವಲಿ, ಮಲ್ಲು ಮಾರನಾಳ, ಭೀಮಬಾಯಿ ಮ್ಯಾಗೇರಿ, ಹಣಮಂತ್ರತಾಯ ಬರದೇವನಾಳ, ದುರಗಪ್ಪ ಬೈಲಕುಂಟಿ, ಶಿವರಾಜ ಗೆದ್ದಲಮರಿ, ಬೈಲಪ್ಪ ಮುದನೂರು, ಬಸವರಾಜ ಅಗ್ನಿ, ಗೋವೀಂದ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಪಂ ನೌಕರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.