ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಜಾಥಾ
Last Updated 2 ಅಕ್ಟೋಬರ್ 2021, 1:56 IST
ಅಕ್ಷರ ಗಾತ್ರ

ಯಾದಗಿರಿ: ಅಗತ್ಯ ವಸ್ತುಗಳ ಭಾರಿ ಬೆಲೆ ಏರಿಕೆ ವಿರೋಧಿಸಿ ಹಾಗು ಬಿಜೆಪಿ ಸರ್ಕಾರದ ಲೂಟಿಕೋರ ಕುಟಿಲ ನೀತಿಗಳನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಾಗರ ಬಣ)ಯಿಂದ ಹಳೆ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಜಾಥಾ ನಡೆಸಿ ಪ್ರತಿಭಟನೆ ನಡೆಸಲಾಯಿತು.

ಕೋವಿಡ್‌ ಸೇರಿದಂತೆ ಲಾಕ್‌ಡೌನ್‌ ಕಾರಣ ನಿರುದ್ಯೋಗ ದೇಶದ ಜನತೆಯನ್ನು ಕಾಡುತ್ತಿದೆ. ಕೃಷಿ ಮತ್ತು ಕೈಗಾರಿಕೆ ರಂಗಗಳಲ್ಲಿ ಖಾಸಗೀಕರಣಗೊಳಿಸಿ ದೇಶವನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ದಸಂಸ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಪ್ರತಿಭಟನೆಯಲ್ಲಿ ಚಂದಪ್ಪ ಮುನೆಪ್ಪನೋರ್, ಶಿವಲಿಂಗ ಹಸ್ನಾಪುರ, ಮಲ್ಲಪ್ಪ ಪೂಜಾರಿ, ಬಾಲರಾಜ ಖಾನಾಪುರ, ತಾಯಪ್ಪ ಭಂಡಾರಿ, ಮಲ್ಲಿಕಾರ್ಜುನ ಹುರಸಗುಂಡಗಿ, ಭೀಮಪ್ಪ ಮಂಡಗಳ್ಳಿ, ವೀರಭದ್ರಪ್ಪ ತಳವಾರ, ಭೀಮರಾಯ ರಸ್ತಾಪುರ, ಖಾಜಾ ಅಜ್ಮಿರ್, ಎಂ.ಪಟೇಲ್, ಮರೆಪ್ಪ ಕ್ರಾಂತಿ, ಬಸಪ್ಪ ಹಿರೇಲಿ, ಚನ್ನಬಸವ ಗುರುಸುಣಿಗಿ, ಸಂತೋಷ ಗುಂಡಳ್ಳಿ, ಶೇಖರ ಮಂಗಳೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT