ಸುರಪುರ: ‘ಧರ್ಮಸ್ಥಳ ಸಂಸ್ಥೆ ತಾಲ್ಲೂಕಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ನಿರ್ಗತಿಕರಿಗೆ ಸೂರು ಒದಗಿಸುವ, ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವ, ಕೆಟ್ಟ ವ್ಯಸನಗಳನ್ನು ಬಿಡಿಸಿ ಮುಖ್ಯವಾಹಿನಿಗೆ ತರುವ ಅತ್ಯದ್ಭುತ ಕಾರ್ಯ ಮಾಡುತ್ತಿದೆ’ ಎಂದು ಮುಖಂಡ ನಿಂಗಪ್ಪನಾಯಕ ಬಿಜಾಸಪುರ ಹೇಳಿದರು.

ಬಿಜಾಸಪುರ ಗ್ರಾಮದ ನಿರ್ಗತಿಕ ಮಹಿಳೆ ಹನುಮಂತಿ ಚಂದಪ್ಪ ಅವರಿಗೆ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ವತಿಯಿಂದ ವಾತ್ಸಲ್ಯ ಯೋಜನೆ ಅಡಿಯಲ್ಲಿ ಮಂಜೂರಾದ ಮನೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ನಾಗೇಶ ಮಾತನಾಡಿ, ‘ಈಗಾಗಲೇ ತಾಲ್ಲೂಕಿನಲ್ಲಿ ಹಲವು ನಿರ್ಗತಿಕರಿಗೆ ಸಂಸ್ಥೆಯಿಂದ ಉಚಿತವಾಗಿ ಮನೆ ನಿರ್ಮಿಸಿ ಕೊಡಲಾಗಿದೆ. ಬಡವರನ್ನು, ಮಹಿಳೆಯರನ್ನು ಆರ್ಥಿಕವಾಗಿ ಮುಂದೆ ತರುವ ಕಾರ್ಯಕ್ರಮಗಳು ನಡೆಯುತ್ತಿವೆ’ ಎಂದರು.

ಜ್ಞಾನವಿಕಾಸ ಸಮಿತಿ ಅಧಿಕಾರಿ ಅನಿತಾ, ಸೇವಾ ಪ್ರತಿನಿಧಿ ರಾಘಮ್ಮ, ರೆಡ್ಡಿಗೌಡ, ಮಡಿವಾಳಪ್ಪ, ಮಲ್ಲಪ್ಪ ಶ್ರೀನಿವಾಸಪುರ, ಫಲಾನುಭವಿ ಹನುಮಂತಿ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.