ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರ ಮೀಸಲಾತಿ ಹೆಚ್ಚಿಸಿ

ವಾಲ್ಮೀಕಿ ಸಮಾಜದ ಮುಖಂಡ ಮರೆಪ್ಪ ಪ್ಯಾಟಿ ಶಿರವಾಳ ಆಗ್ರಹ
Last Updated 12 ಮೇ 2022, 4:28 IST
ಅಕ್ಷರ ಗಾತ್ರ

ಶಹಾಪುರ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಅಗ್ರಹಿಸಿ ಪ್ರಸನ್ನಾನಂದ ಸ್ವಾಮೀಜಿ ಕಳೆದ 90 ದಿನಗಳಿಂದ ಧರಣಿ ನಡೆಸಿದ್ದಾರೆ. ಸರ್ಕಾರ ಎಚ್ಚೆತ್ತುಕೊಳ್ಳದೆ ಇರುವುದು ಬೇಸರ ಮೂಡಿಸಿದೆ. ತಕ್ಷಣ ಸರ್ಕಾರ ಮೀಸಲಾತಿಯನ್ನು ಹೆಚ್ಚಳ ಮಾಡಬೇಕು. ಇಲ್ಲದೆ ಹೋದರೆ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ವಾಲ್ಮೀಕಿ ನಾಯಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಮುಖಂಡರಾದ ಶರಣು ದೋರನಹಳ್ಳಿ, ನೀಲಕಂಠ ಬಡಿಗೇರ ಮಾತನಾಡಿ, ಶೋಷಿತ ಸಮುದಾಯಗಳು ಒಗ್ಗೂಡಿ ಹೋರಾಟ ನಡೆಸುವ ಕಾಲ ಬಂದಿದೆ. ಪರಿಶಿಷ್ಟರಿಗೆ ಸಿಗಬೇಕಾದ ನ್ಯಾಯಬದ್ದ ಹಕ್ಕುಗಳನ್ನು ನಾವು ಹೋರಾಟದ ಮೂಲಕ ಪಡೆದುಕೊಳ್ಳಬೇಕಾಗಿದೆ. ಪರಿಶಿಷ್ಟ ಪಂಗಡದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ನಡೆಸುತ್ತಿರುವ ಹೋರಾಟಕ್ಕೆ ನಾವೆಲ್ಲರೂ ಕೈ ಜೋಡಿಸಬೇಕು. ಮುಂದೆ ಅನಿವಾರ್ಯವಾದರೆ ಉಗ್ರ ಹೋರಾಟಕ್ಕೂ ಅಣಿಯಾಗಲು ನಾವು ಸನ್ನದ್ಧರಾಗಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಣಮಂತರಾಯ ದೊರೆ ದಳಪತಿ, ಮಾನಸಿಂಗ್ ಚವ್ಹಾಣ, ಗೌಡಪ್ಪಗೌಡ ಆಲ್ದಾಳ,ಸಿದ್ದಣ್ಣ ಮಾನಸೂಣಗಿ, ಶಿವಪುತ್ರಪ್ಪ ಜವಳಿ, ಶಿವಕುಮಾರ ತಳವಾರ, ಶೇಖರ ದೊರೆ, ರವಿ ಯಕ್ಷಿಂತಿ,ನಾಗಣ್ಣ ಬಡಿಗೇರ, ಸತ್ಯನಾರಾಯಣ ಅನವಾರ, ರಂಗನಾಥ ದಳಪತಿ, ಅಶೋಕ ಹಳಿಸಗರ, ಹಣಮಂತರಾಯ ಟೋಕಾಪುರ, ಚಂದ್ರಶೇಖರ ಜಾದವ, ಯಲ್ಲಪ್ಪ ದೊಡ್ಮನಿ, ಶ್ರೀನಿವಾಸ ವನದುರ್ಗ, ಯಲ್ಲಾಲಿಂಗ ಯಕ್ಷಿಂತಿ, ಶರಣಪ್ಪ ಪ್ಯಾಟಿ, ಶಿವರಾಜ ಕಾಶಿರಾಜ,ಶರಣುರಡ್ಡಿ ಹತ್ತಿಗೂಡೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT