ಸುರಪುರ: ‘ಸಂಗೀತಕ್ಕೆ ಸಮ್ಮೋಹನಗೊಳಿಸುವ ಶಕ್ತಿ ಇದೆ. ಸಂಗೀತ ಸರ್ವರಿಗೂ ಸಂತೋಷ ನೀಡುತ್ತದೆ. ಸಂಗೀತ ಕಲೆಗೆ ಸಮಸ್ತ ಜೀವರಾಶಿಯನ್ನು ಮೋಡಿ ಮಾಡುವ ಶಕ್ತಿಯಿದೆ’ ಎಂದು ದೇವಾಂಗ ಸಮಾಜದ ಅಧ್ಯಕ್ಷ ಶರಣಪ್ಪ ಗುಮ್ಮಾ ಹೇಳಿದರು.

ಸಮೀಪದ ರಂಗಂಪೇಟೆಯ ಈಶ್ವರಿ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಶನಿವಾರ ರುಕ್ಮಾಪುರದ ಸಗರನಾಡು ಕಲಾ ವೇದಿಕೆ ಹಮ್ಮಿಕೊಂಡಿದ್ದ ಸ್ವರ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂಗೀತ ಮನುಷ್ಯನಿಗೆ ಒಳ್ಳೆಯ ವಿಚಾರಗಳು ಮೂಡುವಂತೆ ಮಾಡುತ್ತದೆ. ಸಂಗೀತವನ್ನು, ಸಂಗೀತ ಪ್ರತಿಭೆಗಳನ್ನು ಪೋಷಿಸಿ ಬೆಳೆಸಬೇಕು’ ಎಂದರು.

ಪಿಎಸ್ಐ ಕೃಷ್ಣಾ ಸುಬೇದಾರ್ ಮಾತನಾಡಿ, ‘ಮನುಷ್ಯನಿಗೆ ಸಂಗೀತ, ಕಲೆ, ಸಾಹಿತ್ಯ, ನೃತ್ಯ ಅವಶ್ಯಕವಾಗಿ ಬೇಕು. ಸಂಗೀತ, ಸಾಹಿತ್ಯ, ಕಲೆಗಳು ಮಾನವರನ್ನು ಸಂಸ್ಕಾರವಂತರನ್ನಾಗಿ ಮಾಡಲಿವೆ. ಮನಸ್ಸಿನ ನೋವನ್ನು ದೂರ ಮಾಡುವ ಶಕ್ತಿ ಸಂಗೀತ ಕ್ಷೇತ್ರಕ್ಕೆ ಇದೆ’ ಎಂದು ತಿಳಿಸಿದರು.

ಆಕಾಶವಾಣಿ ಕಲಾವಿದ ಶಿವಶರಣಯ್ಯಸ್ವಾಮಿ ಬಳ್ಳುಂಡಗಿ ಮಠ ಅಧ್ಯಕ್ಷತೆ ವಹಿಸಿದ್ದರು. ದತ್ತುರಾವ್ ಕುಲಕರ್ಣಿ ಮುಖ್ಯ ಅತಿಥಿಗಳಾಗಿದ್ದರು.

ದೇವಸ್ಥಾನದ ಅರ್ಚಕ ನಿಂಗಯ್ಯಸ್ವಾಮಿ ಹಿರೇಮಠ, ನಿಂಗಣ್ಣ ರಾಯಚೂರಕರ್, ಪ್ರಾಣೇಶರಾವ್ ಕುಲಕರ್ಣಿ, ಚನ್ನಪ್ಪ ಗುಂಡಾನೂರ್, ಸೋಮಶೇಖರ ಶಾಬಾದಿ ಭಾಗವಹಿಸಿದ್ದರು.

ಸಂಗೀತ ಕಲಾವಿದರಾದ ನರಸಿಂಹ ಬಂಡಿ, ಉಮೇಶ್ ಯಾದವ, ಜ್ಞಾನೇಶ್ವರ ಪಾಣಿಭಾತೆ, ಸುರೇಶ್ ಅಂಬೂರೆ, ಮಹೇಶ್ ಗೋಗಿ, ಶಿವಶಂಕರ ಅಲ್ಲೂರು, ಮಾನಪ್ಪ ಭಜಂತ್ರಿ, ಜ್ಞಾನೇಶ್ವರ ಪಾಣಿಭಾತೆ, ಇಸಾಕ್ ಮೊಹ್ಮದ್, ಗೋಪಾಲ್ ಗುಳೇದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ರಮೇಶ್ ಕುಲಕರ್ಣಿ ನಿರೂಪಿಸಿದರು. ಸಗರನಾಡು ಕಲಾ ವೇದಿಕೆ ಅಧ್ಯಕ್ಷ ರಾಜಶೇಖರ ಗೆಜ್ಜಿ ರುಕ್ಮಾಪುರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.