ಸುರಪುರ: ಜಮೀನು ಮಂಜೂರು ಆದೇಶ ರದ್ದುಪಡಿಸಬೇಕು ಎಂದು ಸಾಮೂಹಿಕ ಸಂಘಟನೆಗಳ ಒಕ್ಕೂಟ ಸೋಮವಾರ ಕರೆ ನೀಡಿದ್ದ ಸುರಪುರ ಬಂದ್ ಶಾಂತಿಯುತವಾಗಿ ಯಶಸ್ವಿಯಾಯಿತು.

ಅಂಗಡಿ-ಮುಂಗ್ಗಟ್ಟುಗಳು ಮುಚ್ಚಿದ್ದವು. ಬಸ್ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದರು. ಬೆಳಿಗ್ಗೆ 9 ಗಂಟೆ ಆರಂಭವಾದ ಹೋರಾಟ ಸಂಜೆ 4 ಗಂಟೆವರೆಗೂ ನಡೆದು ಜನ ಜೀವನ ಅಸ್ತವ್ಯಸ್ತಗೊಂಡಿತು.

ಎಚ್ಕೆಇ ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ ಮಾತನಾಡಿ, ‘ಪ್ರಭು ಕಾಲೇಜು ಮೈದಾನದ ಸರ್ವೆ ನಂ. 7/1 ರಲ್ಲಿ ಜಿಲ್ಲಾಧಿಕಾಲ್ದಲಿತ ಸಂಘಟನೆಗೆ ಭೂಮಿ ಮಂಜೂರು ಆದೇಶ ಮಾಡಿದ್ದು ಸರಿಯಲ್ಲ. ಇದು ಸಾರ್ವಜನಿಕರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಆಟಗಾರರಿಗೆ, ಸರ್ಕಾರಿ ಕಾರ್ಯಕ್ರಮಗಳಿಗೆ ತೊಂದರೆ ಮಾಡುವ ಆದೇಶವಾಗಿರುತ್ತದೆ’ ಎಂದು ಆರೋಪಿಸಿದರು.

‘75 ವರ್ಷಗಳಿಂದ ಅಲ್ಲಿ ಪ್ರಭು ಕಾಲೇಜು ಮೈದಾನವಿದ್ದು ಮತ್ತು ಅದಕ್ಕೆ ತಡೆಗೋಡೆ ನಿರ್ಮಾಣ ಮಾಡಿದ್ದು ಇರುತ್ತದೆ. ಜಿಲ್ಲಾಧಿಕಾರಿಗಳು ಕೆಲವರ ಒತ್ತಡಕ್ಕೆ ಮಣಿದು ಆದೇಶ ಮಾಡಿರುವುದು ನೋವುಂಟು ಮಾಡಿದೆ. ಈ ಆದೇಶವನ್ನು ಕೂಡಲೆ ಹಿಂಪಡೆದು ಯಥಾಸ್ಥಿತಿ ಸದರಿ ಕಾಲೇಜಿನ ಮೈದಾನವು ಮುಂದುವರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು’ ಒತ್ತಾಯಿಸಿದರು.

ಮನವಿ ಪತ್ರ ಸ್ವೀಕರಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ್ ಕೋಲಾರ ಆಗಮಿಸಿದಾಗ ಪ್ರಭು ಕಾಲೇಜಿಗೆ ಸಂಬಂಧಿಸಿದ ಅಂಗಡಿಗಳಿಗೆ ಹಾಕಿರುವ ಬೀಗ ತಕ್ಷಣ ತೆಗೆಸಬೇಕು. ಕಾಲೇಜಿನ ಮೈದಾನದಲ್ಲಿ ಹಾಕಿರುವ ಧ್ವಜಗಳನ್ನು ತೆರವುಗೊಳಿಸಬೇಕು, ಅಂಬೇಡ್ಕರ್ ವೃತ್ತದಲ್ಲಿ ಹಾಕಿರುವ ಟೆಂಟ್ನ್ನು ತೆಗೆಸಬೇಕು ಎಂದು ಹೋರಾಟಗಾರರ ಬಿಗಿ ಪಟ್ಟು ಹಿಡಿದರು.

‘ನಾಳೆಯೇ ಅಂಗಡಿಗಳ ಬೀಗ ತೆಗೆಯಲಾಗುವುದು. 2-3 ದಿನದಲ್ಲಿ ಪೊಲೀಸ್ ಬಂದೋಬಸ್ತ್ನಲ್ಲಿ ಪ್ರಭು ಕಾಲೇಜಿನ ಮೈದಾನದಲ್ಲಿರುವ ಧ್ವಜಗಳನ್ನು ತೆರವುಗೊಳಿಸಲಾಗುವುದು. ಜಮೀನು ಮಂಜೂರಾತಿ ಆದೇಶಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ ಮನವಿ ಪತ್ರವನ್ನು ಪ್ರಾದೇಶಿಕ ಆಯುಕ್ತರಿಗೆ ಕಳಿಸಿ ಕೊಡಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

ಅಂಗಡಿಗಳ ಬೀಗ, ಟೆಂಟ್, ಧ್ವಜಗಳನ್ನು ತೆಗೆಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಪ್ರತಿಭಟನಾಕಾರರು ಹೋರಾಟ ಮುಂದುವರೆಸಿದರು. ತಹಶೀಲ್ದಾರ್ ಎಚ್.ಎ. ಸರಕಾವಸ, ಪೌರಾಯುಕ್ತ ಬಸವರಾಜ ಟಣಕೆದಾರ್, ಡಿವೈಎಸ್ಪಿ ಜಾವೇದ್ ಇನಾಮದಾರ್ ಉಪಸ್ಥಿತರಿದ್ದರು.

ಎಚ್ಕೆಇ ಸಂಸ್ಥೆಯ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಆಡಳಿತ ಮಂಡಳಿ ಸದಸ್ಯರಾದ ನಾಗಣ್ಣ ಘಂಟಿ, ಅರುಣಕುಮಾರ ಮರಗೋಳ, ಶರಣಬಸಪ್ಪ ಹರವಾಳ, ಪ್ರಮುಖರಾದ ವೇಣುಗೋಪಾಲ ನಾಯಕ ಜೇವರ್ಗಿ, ಸುರೇಶ್ ಸಜ್ಜನ್, ರಮೇಶ ದೊರೆ ಆಲ್ದಾಳ, ಭೀಮನಗೌಡ ಲಕ್ಷ್ಮೀ, ಸೋಮಶೇಖರ ಶಾಬಾದಿ, ವೆಂಕಟೇಶ ನಾಯಕ ಬೈರಿಮಡ್ಡಿ, ಶಿವಮೋನಯ್ಯ ಎಲ್ಡಿ ನಾಯಕ, ವೆಂಕಟೇಶ ಬೇಟೆಗಾರ, ನಾಗರಾಜ ನಾಯಕ ಪ್ಯಾಪಲಿ, ಕಾಳಪ್ಪ ಕವಾತಿ, ವಿಜಯಕುಮಾರ ಚಿಟ್ಟಿ, ದತ್ತು ಎಸ್.ಗುತ್ತೇದಾರ, ಉಸ್ತಾದ್ ವಜಾಹತ್ ಹುಸೇನ್, ಹಣಮಂತ ಕಟ್ಟಿಮನಿ, ದಾನಪ್ಪ ಕಡಿಮನಿ, ಉಪೇಂದ್ರ ನಾಯಕ ಸುಬೇದಾರ್, ಲಕ್ಷ್ಮೀಕಾಂತ ದೇವರಗೋನಾಲ, ಅಶೋಕ ಕವಲಿ, ಭೀಮು ನಾಯಕ ಮಲ್ಲಿಬಾವಿ, ದೇವಿಂದ್ರಪ್ಪಗೌಡ ಮಾಲಿ ಪಾಟೀಲ್, ಗಂಗಾಧರ ನಾಯಕ ಅರಳಹಳ್ಳಿ, ನಿಂಗಪ್ಪ ನಾಯಕ ಬಿಜಾಸಪೂರ, ಚಂದ್ರಶೇಖರ ಎಲಿಗಾರ, ಮಲ್ಲೇಶಿ ನಾಗರಾಳ, ಮಲ್ಲಣ್ಣ ಸಾಹು ಜಾಲಿಬೆಂಚಿ, ದೇವಿಂದ್ರ ವಿಶ್ವಕರ್ಮ, ಬಸವರಾಜ ಹಾದಿಮನಿ, ಮಲ್ಲು ಹೊಸಮನಿ, ಧರ್ಮಣ್ಣ ಕುಪಗಲ್, ಆನಂದ ವಿಶ್ವಕರ್ಮ ವಸಂತಕುಮಾರ ಮಲ್ಲು ಹೂಗಾರ ರಮೇಶ ಡೊಳ್ಳಿ, ಭೈರಣ್ಣ ಅಂಬಿಗೇರ್, ವಿನಾಯಕ ಕರಡಕಲ್, ದೇವಿಂದ್ರಪ್ಪ ಅಜ್ಜಿಕೊಲ್ಲಿ, ಚಂದ್ರಶೇಖರ ಕಟ್ಟಿಮನಿ. ಹಣಮಂತ ಬಿಲ್ಲವ್, ಮಾನಪ್ಪ ಶಹಾಪುರಕರ್ ಸೇರಿದಂತೆ 51 ಸಂಘಟನೆಗಳ ಮುಖಂಡರು, ಪ್ರಭು ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೋರಾಟದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.