ಯಾದಗಿರಿ: ‘ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆಯ (ಎಸ್ಐಆರ್) ಕಾರ್ಯದಿಂದ ಕಾಂಗ್ರೆಸ್ನ ಖೊಟ್ಟಿ ಮತದಾರರ ವೋಟ್ ಬ್ಯಾಂಕ್ ಧ್ವಂಸವಾಗಲಿದೆ’ ಎಂದು ವಿಶೇಷ ಮತದಾರ ಪಟ್ಟಿ ಪರಿಷ್ಕರಣೆಯ ಬಿಜೆಪಿ ರಾಜ್ಯ ಸಮಿತಿ ಸಂಚಾಲಕ ಜಗದೀಶ ಹಿರೇಮನಿ ಹೇಳಿದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ಬಿಜೆಪಿ ನಗರ ಮತ್ತು ಗ್ರಾಮೀಣ ಮಂಡಲ ಆಯೋಜಿಸಿದ್ದ ಯಾದಗಿರಿ ಮತ್ತು ಗುರುಮಠಕಲ್ ವಿಧಾನ ಸಭಾ ಮತಕ್ಷೇತ್ರಗಳ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಬಿಎಲ್ಎ-2 ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಇದುವರೆಗೆ 17 ಬಾರಿ ಮತದಾರರ ಪಟ್ಟಿಯ ಪರಿಷ್ಕರಣೆ ನಡೆದಿದೆ. ಅದರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ 15 ಬಾರಿ ಹಾಗೂ ಬಿಜೆಪಿ ಅವಧಿಯಲ್ಲಿ ಎರಡು ಬಾರಿ ಮಾತ್ರವೇ ಜರುಗಿದೆ. 15 ಬಾರಿ ಮತದಾರರ ಪರಿಷ್ಕರಣೆ ಮಾಡಿದವರು ಈಗ ಏಕಾಏಕಿ ವಿರೋಧಿಸುತ್ತಿದ್ದಾರೆ. ಕಾಂಗ್ರೆಸಿಗರು ರಾಜಕೀಯ ಮೌಲ್ಯವನ್ನು ಬೆಳಸಿಕೊಳ್ಳದರ ಪರಿಣಾಮವಾಗಿ ಇವತ್ತು ಬೀದಿಗೆ ಬಂದು ನಿಲ್ಲುವ ಸ್ಥಿತಿಗೆ ತಲುಪಿದ್ದಾರೆ’ ಎಂದು ಟೀಕಿಸಿದರು.

‘ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸುಮ್ಮನೆ ಇದ್ದರು. ಬಿಹಾರದಲ್ಲಿ ಎನ್ಡಿಎ ಮೈತ್ರಿ ಕೂಟ ಅಧಿಕಾರಕ್ಕೆ ಬರುತ್ತಿದ್ದಂತೆ ಮತ ಕಳ್ಳತನದ ನಾಟಕ ಆರಂಭಿಸಿದ್ದಾರೆ. ಕಾಂಗ್ರೆಸ್ ನಾಯಕರ ನಾಟಕ ದೇಶದ ಜನರಿಗೆ ಗೊತ್ತಾಗಿದೆ. ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ಮತದಾರರ ಪರಿಷ್ಕರಣೆಯನ್ನು ತಡೆಯಲು ಸಾಧ್ಯವಿಲ್ಲ’ ಎಂದರು.

‘ಬೂತ್ ಮಟ್ಟದ ಮತಗಟ್ಟೆ ಅಧಿಕಾರಿಗಳ (ಬಿಎಲ್ಒ) ಜೊತೆಗೆ ಪಕ್ಷ ನಿಯೋಜನೆ ಮಾಡುವ ಬಿಎಲ್ಒ–2 ಕಡ್ಡಾಯವಾಗಿ ತೆರಳಬೇಕು. ಪರಿಷ್ಕರಣೆಗಾಗಿ 2002 ಹಾಗೂ 2022ರ ಮತದಾರರ ಪಟ್ಟಿಯನ್ನು ಹಿಡಿದುಕೊಂಡು ಮನೆ–ಮನೆಗೆ ಹೋಗಬೇಕು. ಅರ್ಹರು ಮತದಾರರ ಪಟ್ಟಿಯಿಂದ ತಪ್ಪದಂತೆ ಹಾಗೂ ಅನರ್ಹರು ಸೇರದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ನಿಮ್ಮ ಬೂತ್ನಲ್ಲಿನ ಮತದಾರರ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಬೇಕು’ ಎಂದು ಹೇಳಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಲಲಿತಾ ಅನಪುರ ಮಾತನಾಡಿ, ‘ಮುಂದಿನ ಚುನಾವಣೆಗಳಲ್ಲಿ ಪಂಚಾಯಿತಿ ಮಟ್ಟದಿಂದ ಲೋಕಸಭೆವರೆಗೆ ಗೆಲ್ಲಬೇಕಾದರೆ ಬಿಎಲ್ಎ–2 ಪಾತ್ರ ಮಹತ್ವದಾಗಿದೆ. ಈಗಾಗಲೇ ಜಿಲ್ಲೆಯ ನಾಲ್ಕೂ ಕ್ಷೇತ್ರಗಳನ್ನು ಕಳೆದುಕೊಂಡಿದ್ದೇವೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದು ಮರುಕಳಿಸಬಾರದು. ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿ 18 ವರ್ಷ ಮೇಲ್ಪಟ್ಟ ಅರ್ಹರನ್ನು ಸೇರ್ಪಡೆ ಮಾಡಬೇಕು’ ಎಂದರು.

‘ಜಿಲ್ಲೆಯಲ್ಲಿ ಸಾಕಷ್ಟು ಮತದಾರರು ಬೆಂಗಳೂರಿಗೆ ವಲಸೆ ಹೋಗಿದ್ದು, ಸೌಕರ್ಯಗಳಿಗಾಗಿ ಸ್ವಗ್ರಾಮಗಳಲ್ಲಿ ನೋಂದಣಿಯನ್ನು ಕಡಿತ ಮಾಡಿಕೊಂಡಿದ್ದಾರೆ. ಅವರ ಮನವೊಲಿಸಿ ಮತದಾನದ ಹಕ್ಕನ್ನು ಸ್ಥಳೀಯವಾಗಿ ಉಳಿದುಕೊಳ್ಳುವಂತೆ ನೋಡಿಕೊಳ್ಳಬೇಕು. ಕೆಲವು ಬಾರಿ ಬಿಎಲ್ಒ–2ಗಳಿಗೆ ಅಧಿಕಾರಿಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಅಂತಹ ಘಟನೆಗಳು ನಡೆದಲ್ಲಿ ತಕ್ಷಣವೇ ಮುಖಂಡರ ಗಮನಕ್ಕೆ ತರಬೇಕು’ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪರಶುರಾಮ್ ಕುರಕುಂದಾ, ಮೆಲಪ್ಪ ಗುಳಗಿ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ ಕಾಡಮ್ಮನೂರ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸುನೀತಾ ಚವ್ಹಾಣ, ಮುಖಂಡರಾದ ರಾಚಣ್ಣಗೌಡ ಮುದ್ನಾಳ, ಸಿದ್ದಣ್ಣ ಗೌಡ ಕಾಡಂನೊರ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಸಾಹುಕಾರ, ಮಂಡಲ ಅಧ್ಯಕ್ಷ ನರಸಿಂಹಲು ನಿರಟ್ಟಿ, ಪ್ರಮುಖರಾದ ವೀಣಾ ಮೋದಿ, ವೆಂಕಟಪ್ಪ ಅವಂಗಪೂರ, ಮಲ್ಲಿಕಾರ್ಜುನ ಹೊನಗೇರಾ, ಲಕ್ಷ್ಮಣ ನಾಯಕ ಓಳಾಬಾಪುರ, ಅಮೃತಾ ಬೊರಬಂಡಾ ಸೇರಿ ಇತರರು ಉಪಸ್ಥಿತರಿದ್ದರು.

ದೇಶವನ್ನು ಗೆಲ್ಲಬೇಕಾದರೆ ಬೂತ್ಗಳನ್ನು ಗೆಲ್ಲುವುದು ಅವಶ್ಯವಿದ್ದು ನಾಯಕರ ಭವಿಷ್ಯದ ಜೊತೆಗೆ ಕಾರ್ಯಕರ್ತರ ಭವಿಷ್ಯವೂ ಮತದಾರರ ಪರಿಷ್ಕರಣೆಯಲ್ಲಿದೆ.
–ಮಹೇಶರೆಡ್ಡಿ ಮುದ್ನಾಳ, ಬಿಜೆಪಿ ಮುಖಂಡ

ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಸೇರಿರುವರ ಮೇಲೆ ನಿಗಾ ಇರಿಸಿ ಅವರನ್ನು ಪಟ್ಟಿಯಿಂದ ತೆಗೆದು ಹಾಕುವ ಗುರುತರ ಜವಾಬ್ದಾರಿ ಬಿಎಲ್ಒ–2ಗಳ ಮೇಲಿದೆ.
–ದೇವೇಂದ್ರನಾಥ ನಾದ್, ಬಿಜೆಪಿ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.