ಯಾದಗಿರಿ: ‘ಗ್ರಾಮೀಣ ಭಾಗದ ಮಹಿಳೆಯರು ಅರಿವಿನ ಕೊರತೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಿದರೆ, ನಗರ ಪ್ರದೇಶದ ಮಹಿಳೆಯರು ಕೆಲಸದ ಒತ್ತಡ ಹಾಗೂ ನಿರ್ಲಕ್ಷ್ಯದ ಕಾರಣದಿಂದ ಹಲವಾರು ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ’ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ರಿಜ್ವಾನಾ ಆಫ್ರೀನ್ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಮಹಿಳೆಯರಿಗಾಗಿ ಶುಕ್ರವಾರ ಅಯೋಜಿಸಿದ್ದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಒತ್ತಡದ ಬದುಕು ಹಾಗೂ ನಿರ್ಲಕ್ಷ್ಯ ಅನೇಕ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಮಹಿಳೆಯರು ಕುಟುಂಬದ ಆಧಾರಸ್ತಂಭವಾಗಿದ್ದು, ಮಹಿಳೆ ಸುಶಿಕ್ಷಿತರಾದರೆ ಇಡೀ ಕುಟುಂಬವೇ ಸಶಕ್ತವಾಗಿ ರೂಪುಗೊಳ್ಳುತ್ತದೆ ಎಂದರು.

ವಿಶೇಷ ಉಪನ್ಯಾಸ ನೀಡಿದ ಮನೋಶಾಸ್ತ್ರಜ್ಞ ಆರ್.ವೆಂಕಟರೆಡ್ಡಿ ಮಾತನಾಡಿ, ಮಹಿಳೆಯರು ದಿನನಿತ್ಯದ ಬದುಕಿನಲ್ಲಿ ಹತ್ತು ಹಲವು ಸಾಮಾಜಿಕ, ದೈಹಿಕ, ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳನ್ನು ಸಮರ್ಥವಾಗಿ ನಿರ್ವಹಿಸುವ ಕಲೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಚಿಂತಕ ಪ್ರೊ.ಆರ್.ಕೆ.ಹುಡಗಿ ಮಾತನಾಡಿ, ಪರಂಪರಾಗತವಾಗಿ ನಮ್ಮಲ್ಲಿ ಜಿಡ್ಡುಗಟ್ಟಿರುವ ಮೌಢ್ಯತೆಯ ಕಾರಣದಿಂದ ಇಂದಿಗೂ ಮಹಿಳೆಯರು ಶೋಷಣೆಗೆ ಒಳಗಾಗುತ್ತಿದ್ದು, ಅವುಗಳಿಂದ ಹೊರಬಂದು ನಾವು ಯಾರಿಗೂ ಕಡಿಮೆಯಿಲ್ಲ ಎಂದು ಧೈರ್ಯದಿಂದ ಮುನ್ನುಗ್ಗಿ ಬರಬೇಕು ಎಂದರು.

ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಅಧ್ಯಕ್ಷೆ ಅನ್ನಪೂರ್ಣ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ತನಾರತಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಿದ್ಧರಾಜರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಧ್ಯೆಯೋದ್ದೇಶಗಳ ಕುರಿತು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಪಲ್ಲವಿ ಪಾಟೀಲ ಅವರನ್ನು ಸಂಸ್ಥೆಯ ವತಿಯಿಂದ ವಿಶೇಷವಾಗಿ ಸತ್ಕರಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ವೇದಾ ಕರೆಡ್ಡಿ ಮಲ್ಹಾರ, ಶ್ರೀದೇವಿ ಪಾಟೀಲ ಚಾಮನಹಳ್ಳಿ, ಪೂರ್ಣಿಮಾ ಪಾಟೀಲ ತುನ್ನೂರ, ಡಾ.ಶೃತಿ ಹುನಕುಂಟಿ, ಸುರೇಖಾ ಪಾಟೀಲ ಚಟ್ನಳ್ಳಿ, ಡಾ.ಪ್ರೀತಿ ರೆಡ್ಡಿ, ಮಂಜುಳಾ ಪಾಟೀಲ, ದೀಪಾ ಪಾಟೀಲ ಬಂದಳ್ಳಿ, ಸಹನಾ ಪಾಟೀಲ ಕುರಕುಂದಿ, ಡಾ.ನೀಲಮ್ಮ ರೆಡ್ಡಿ, ಡಾ.ಜಯಲಕ್ಷ್ಮಿ ಆರ್ ಮುದ್ನಾಳ, ಶ್ವೇತಾ ಪಾಟೀಲ ಬಿಳ್ಹಾರ, ಡಾ.ಲಕ್ಷ್ಮೀ ಪಾಟೀಲ, ಡಾ.ಪ್ರೀತಿ ಪಾಟೀಲ, ಶಶಿಕಲಾ ಕ್ಯಾತ್ನಾಳ, ವಿದ್ಯಾ ಪಾಟೀಲ ಅರಶಿಣಗಿ, ನಾಗಮ್ಮ ಪಾಟೀಲ ಭಾಗವಹಿಸಿದ್ದರು.

ಹೇಮಾ ಪಾಟೀಲ ಯಕ್ಷಂತಿ ಸ್ವಾಗತಿಸಿದರು. ಅಂಬಿಕಾ ಪಾಟೀಲ ನಿರೂಪಿಸಿದರೆ ಅರಣಾ ಸಿದ್ಧರಾಜರೆಡ್ಡಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.