ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ರೆಡ್‍ಝೋನ್ ಹಳ್ಳಿಗಳಿಗೆ ಸಿಇಒ ಭೇಟಿ 

Last Updated 4 ಜೂನ್ 2021, 2:46 IST
ಅಕ್ಷರ ಗಾತ್ರ

ಸುರಪುರ: ’ಕೊರೊನಾ ಹೊಡೆದೊಡಿಸಲು ಸಾರ್ವಜನಿಕರು ಗ್ರಾಮ ಪಂಚಾಯಿತಿ ಟಾಸ್ಕ್ ಪೋರ್ಸ್ ಸಮಿತಿಯೊಂದಿಗೆ ಸಹಕರಿಸಬೇಕು' ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.

ರೆಡ್ ಜೋನ್ ಗ್ರಾಮ ಪಂಚಾಯಿತಿಗಳಾದ ತಾಲ್ಲೂಕಿನ ಖಾನಾಪುರ ಎಸ್.ಎಚ್, ದೇವಾಪುರ ಮತ್ತು ದೇವತ್ಕಲ್ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ಆಯಾ ಗ್ರಾಮ ಪಂಚಾಯಿತಿ ಕಾರ್ಯಪಡೆಯ ಸಭೆಯಲ್ಲಿ ಮಾತನಾಡಿದರು.

’ರೆಡ್‍ಝೋನ್‍ನಲ್ಲಿದ್ದ ಖಾನಾಪುರ ಎಸ್.ಎಚ್ ಗ್ರಾಮ ಪಂಚಾಯಿತಿ ಈಗ ಯಲ್ಲೋ ಝೋನ್‍ಗೆ ಬಂದಿದೆ. ಟಾಸ್ಕ್‌ಪೋರ್ಸ್ ಒಳ್ಳೆಯ ರೀತಿ ಕೆಲಸ ಮಾಡುತ್ತಿದೆ. ಸೋಂಕಿತರನ್ನು ಗುರುತಿಸಿ ಅವರಿಗೆ ಚಿಕಿತ್ಸೆ ಕೊಡಿಸಿ ಪ್ರಕರಣಗಳ ಸಂಖ್ಯೆ ಕಡಿಮೆ ಗೊಳಿಸಿರುವದು ಪ್ರಶಂಸನೀಯ' ಎಂದರು.

ರೆಡ್‍ಝೋನ್‍ನಲ್ಲಿರುವ ದೇವಾಪುರ ಮತ್ತು ದೇವತ್ಕಲ್ ಗ್ರಾಮಗಳು ಕೂಡ ಗ್ರೀನ್ ಝೋನ್‍ಗೆ ಬರಬೇಕು. ಈ ದಿಶೆಯಲ್ಲಿ ಗ್ರಾಮ ಪಂಚಾಯಿತಿ ಕಾರ್ಯಪಡೆಯವರು ಕೆಲಸ ಮಾಡಬೇಕು. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದಲ್ಲಿ ಕೊರೊನಾ ಖಂಡಿತವಾಗಿ ನಿಯಂತ್ರಣಕ್ಕೆ ಬರುತ್ತದೆ' ಎಂದು ಸಲಹೆ ನೀಡಿದರು.

’ದೇವತ್ಕಲ್ ಗ್ರಾಮದಲ್ಲಿ ಟಾಸ್ಕ್ ಪೋರ್ಸ್ ಸಮಿತಿಯವರು ಅಂಗಡಿ ಸೀಲ್ ಮಾಡಿರುವುದನ್ನು ನೋಡಿ ಸಿಇಒ ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು. ಜೂ. 14 ರವರೆಗೂ ಯಾರೊಬ್ಬರು ಅಂಗಡಿ ತೆರೆಯಬಾರದು. ಒಂದು ವೇಳೆ ಸೀಲ್ ಮುರಿದು ಅಂಗಡಿ ಓಪನ್ ಮಾಡಿದಲ್ಲಿ ಮುಲಾಜಿಲ್ಲದೆ ದಂಡ ಹಾಕುವಂತೆ' ಸೂಚಿಸಿದರು.

'ಶಾಸಕ ರಾಜೂಗೌಡ ಅವರು ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಮತ್ತು ಸೋಂಕಿತರಿಗೆ ಅನ್ನ, ನೀರು, ಪೌಷ್ಠಿಕ ಆಹಾರ ನೀಡುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಉತ್ತಮವಾಗಿ ಕೆಲಸ ಮಾಡುತ್ತಿರುವ ತಹಶೀಲ್ದಾರ್, ತಾಪಂ ಇಒ, ಪೊಲೀಸ್, ಆರೋಗ್ಯ , ಕಂದಾಯ ಇಲಾಖೆ ಸಿಬ್ಬಂದಿಗಳು ಮತ್ತು ಗ್ರಾಪಂ ಕಾರ್ಯಪಡೆಗೆ ಜಿಲ್ಲಾಡಳಿತದಿಂದ ಕೃತಜ್ಞತೆ ಸಲ್ಲಿಸುವುದಾಗಿ' ಹೇಳಿದರು.

ನಂತರ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಕೆಲ ಗರ್ಭಿಣಿಯರನ್ನು ಭೇಟಿ ಮಾಡಿದರು. ಚಿಕಿತ್ಸೆ, ಔಷಧಿÀ ಸೇವನೆ ಬಗ್ಗೆ ವಿಚಾರಿಸಿದರು. ಅಂಗನವಾಡಿ ಕೇಂದ್ರಗಳಿಗೆ ಬೇಟಿ ನೀಡಿ ಕ್ರಾಸ್ ಚೆಕ್ ಮಾಡಿದರು. ತಾಲ್ಲೂಕು ಪಂಚಾಯಿತಿ ಇಒ ಅಮರೇಶ, ಆಯಾ ಗ್ರಾಪಂಗಳ ಅಧ್ಯಕ್ಷರು, ಸದಸ್ಯರು, ಪಿಡಿಒಗಳು, ಆರೋಗ್ಯ ಇಲಾಖೆ, ಅಶಾ, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT