ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುರಪುರ | ಶ್ರಾವಣ-ಶ್ರವಣ ಶಿವಾನುಭವ ಚಿಂತನ ಇಂದಿನಿಂದ 

ಸುರಪುರ: ನಿಷ್ಠಿ ಕಡ್ಲಪ್ಪನವರ ವಿರಕ್ತ ಮಠದಲ್ಲಿ
Published 4 ಆಗಸ್ಟ್ 2024, 15:37 IST
Last Updated 4 ಆಗಸ್ಟ್ 2024, 15:37 IST
ಅಕ್ಷರ ಗಾತ್ರ

ಸುರಪುರ: ಇಲ್ಲಿಯ ಕಬಾಡಗೇರಾದ ನಿಷ್ಠಿ ಕಡ್ಲಪ್ಪನವರ ವಿರಕ್ತ ಮಠದ ಯಾತ್ರಿ ನಿವಾಸದಲ್ಲಿ ಶ್ರಾವಣ ಮಾಸದ ನಿಮಿತ್ತ ಈ ತಿಂಗಳ ಪ್ರತಿ ಸೋಮವಾರ ಸಂಜೆ 7 ಗಂಟೆಗೆ ಮಠದ ಪೀಠಾಧಿಪತಿ ಪ್ರಭುಲಿಂಗ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಶ್ರಾವಣ-ಶ್ರವಣ ಶಿವಾನುಭವ ಚಿಂತನ ಹಮ್ಮಿಕೊಳ್ಳಲಾಗಿದೆ.

ಶಿವಾನುಭವ ಚಿಂತನದಲ್ಲಿ ಶರಣರ ಭಕ್ತಿ ಮಾರ್ಗ ಕುರಿತು ಸೋಮಶೇಖರ ನಾಯಕ ಅವರು ಉಪನ್ಯಾಸ ನೀಡುವರು. ಬಸವರಾಜ ಸಜ್ಜನ್ ಉಪಸ್ಥಿತಿ. ಆ.12ರಂದು ‘ಅನುಭವ ಒಂದು ಚಿಂತನೆ’ ಕುರಿತು ರಂಗಂಪೇಟೆಯ ಸಂಸ್ಕೃತ ಪಂಡಿತ ಜನಾರ್ಧನ ಪಾಣಿಭಾತೆ ಅವರಿಂದ ಉಪನ್ಯಾಸ. ವಿನೋದ ವಿಶ್ವಕರ್ಮ ಭಾಗಿಯಾಗಲಿದ್ದಾರೆ.

ಆ.19 ರಂದು ಶಿವಶರಣರು ಮತ್ತು ಪರೋಪಕಾರ ಕುರಿತು ಸಿಆರ್‌‍ಪಿ ನಿಂಗಣ್ಣ ಗೋನಾಳ ಅವರಿಂದ ಶಿವಾನುಭವ ಚಿಂತನ. ಶಿಕ್ಷಕ ಪ್ರಕಾಶ ನಿಂಬಾಳ ಶೆಳ್ಳಗಿ ಭಾಗವಹಿಸುವರು. ಆ.26ರಂದು ಶರಣಬಸವೇಶ್ವರ ರೆಸಿಡೆನ್ಸಿಯಲ್ ಸ್ಕೂಲ್‍ನ ಶಿಕ್ಷಕರಾದ ಸಿದ್ದರಾಮ ಹಾವನೂರ ಅವರು ಬಸವೇಶ್ವರರ ದಾಸೋಹಂ ಭಾವ ಕುರಿತು ಮಾತನಾಡುವರು. ಪ್ರಾಧ್ಯಾಪಕ ಮೋಹನರೆಡ್ಡಿ ದೇಸಾಯಿ ಇರುತ್ತಾರೆ. ಅನೇಕ ಸಂಗೀತ ಕಲಾವಿದರು, ತಬಲಾ ವಾದಕರು ಸಾಥ್ ನೀಡಲಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT