ಶುಕ್ರವಾರ, ಅಕ್ಟೋಬರ್ 23, 2020
27 °C

ಸ್ವಚ್ಛ ಗ್ರಾಮಕ್ಕೆ ಕೈಜೋಡಿಸಿ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಗಣ್ಣ ನಾಗಬೇನಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸಗಿ: ಗ್ರಾಮೀಣ ಭಾಗದಲ್ಲಿ ನೈರ್ಮಲೀಕರಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕಸ ವಿಲೇವಾರಿ ವಾಹನ ಆರಂಭಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮಸ್ಥರು ಸಹಕಾರ ಅಗತ್ಯ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಗಣ್ಣ ನಾಗಬೇನಾಳ ಹೇಳಿದರು.

ತಾಲ್ಲೂಕಿನ ಕೊಡೇಕಲ್ಲ ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ನೂತನ ವಾಹನಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಇಲಾಖೆಯ ವತಿಯಿಂದ ಗ್ರಾಮ ಪಂಚಾಯಿತಿಗೆ ಇದೇ ಪ್ರಥಮ ಬಾರಿಗೆ ವಾಹನ ನೀಡಿದೆ. ಸಾರ್ವಜನಿಕರು ಹಸಿ ಕಸ ಹಾಗೂ ಒಣ ಕಸ ಹಾಗೂ ತ್ಯಾಜ್ಯ ವಸ್ತುಗಳನ್ನು ಬೇರ್ಪಡಿಸಿ ಇಟ್ಟುಕೊಂಡಿರಬೇಕು. ವಾಹನವು ತಮ್ಮ ವಾರ್ಡಗಳಲ್ಲಿ ಬಂದು ಕಸ ಸಂಗ್ರಹಿಸುತ್ತದೆ. ಆ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಿದಂತಾಗುತ್ತದೆ ಎಂದರು.

ಪ್ರಮುಖರಾದ ರಂಗನಾಥ ದೊರೆ, ಶಾಮಸುಂದರ ಜೋಶಿ, ವಿ.ಎಸ್.ಹಾವೇರಿ, ವೀರಸಂಗಪ್ಪ ಅಂಬಲಿಹಾಳ, ಬಸಣ್ಣ ಹಾವೇರಿ, ಬಸವಂತ ಭಟ್ ಜೋಶಿ, ಬಸವರಾಜಪ್ಪಗೌಡ ಹೊಸಪೂಜಾರಿ, ಬಸಣ್ಣ ಹಳೇಪೂಜಾರಿ, ವೀರೇಶ ಜೈನಾಪುರ, ಕಾರ್ಯದರ್ಶಿ ಸಂಗಣ್ಣ ಕರಬಸಪ್ಪನವರ, ಪರಮಣ್ಣ ಹಗರಟಗಿ, ಬಸವರಾಜ ಅಂಗಡಿ, ದತ್ತಾತ್ರೇಯ, ಚನ್ನಬಸ್ಸು ಕೊಡೇಕಲ್ಲಮಠ, ರವಿ ಅಡ್ಡಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.