ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಂಪೇಟೆ:ಟಿಪ್ಪು ಸುಲ್ತಾನ್‌ ಜಯಂತ್ಯುತ್ಸವ

Last Updated 16 ಡಿಸೆಂಬರ್ 2019, 10:22 IST
ಅಕ್ಷರ ಗಾತ್ರ

ಸುರಪುರ: ‘ಟಿಪ್ಪು ಮಹಿಳೆಯರಿಗೆ ತುಂಬಾ ಗೌರವ ನೀಡುತ್ತಿದ್ದರು. ಉಳುವವನೇ ಭೂ ಒಡೆಯ ಎಂಬ ನಿಯಮ ಮಾಡಿದವರು ಟಿಪ್ಪು.ಅವರ ಗುಣಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.

ನಗರದ ರಂಗಂಪೇಟೆಯಲ್ಲಿ ಟಿಪ್ಪು ಸುಲ್ತಾನ್ ಸಂಯುಕ್ತ ರಂಗದಿಂದ ಶನಿವಾರ ಹಮ್ಮಿಕೊಂಡಿದ್ದ ಟಿಪ್ಪು ಸುಲ್ತಾನ್ 270ನೇ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತಿ ಟಿ. ಗುರುರಾಜ ಮಾತನಾಡಿ, ‘ಬ್ರಿಟಿಷರೊಂದಿಗೆ ಹೋರಾಡಿದ ಟಿಪ್ಪು ಇಂದು ರಾಜಕಾರಣಿಗಳಿಗೆ ಅಪಥ್ಯವಾಗಿದ್ದು ದುರಂತ. ಟಿಪ್ಪುವಿನ ಬಗ್ಗೆ ಮಾತನಾಡಿದರೆ, ಲಾವಣಿ ಪದಗಳನ್ನಾಡಿದರೆ ಅಂತವರನ್ನು ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ’ ಎಂದು ಟೀಕಿಸಿದರು.

‘ಟಿಪ್ಪುವಿಗೆ ಯಾವುದೇ ಧರ್ಮದ ಬಗ್ಗೆ ವಿರೋಧವಿರಲಿಲ್ಲ. ಶ್ರೀರಂಗಪಟ್ಟಣದ ಗವಿಗಂಗಾಧರೇಶ್ವರ ದೇವಾಲಯ, ರಂಗನಾಥಸ್ವಾಮಿ ದೇವಾಲಯ, ಕೊಲ್ಲೂರು ಮೂಕಾಂಬಿಕೆ ಮತ್ತು ಶೃಂಗೇರಿ ಶಾರದಾಂಬಾ ದೇವಾಲಯ ಜೀರ್ಣೋದ್ಧಾರ ಗೊಳಿಸಿದ್ದಾರೆ’ ಎಂದರು.

ಮಳಖೇಡದ ಹಜರತ್ ಸಯ್ಯದ್ ಶಾ ಮುಸ್ತಫಾ ಖಾದ್ರಿ ಮಾತನಾಡಿ, ‘ಇಂದು ಟಿಪ್ಪುವನ್ನು ವಿರೋಧಿಸುವವರು ಆತನು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮರೆತಿದ್ದಾರೆ. ಟಿಪ್ಪು ಒಬ್ಬ ಮುಸ್ಲಿಂ ಎಂಬ ಕಾರಣಕ್ಕೆ ವಿರೋಧಿಸುತ್ತಿದ್ದಾರೆ’ ಎಂದು ತಿಳಿಸಿದರು.

ಮುಫ್ತಿ ಮೊಹ್ಮದ ಇಕ್ಬಾಲ್ ಒಂಟಿ, ಮೌಲಾನಾ ಜಾವಿದ್ ಖಾಸಿಂಪ್ರಾಸ್ತಾ ವಿಕವಾಗಿ ಮಾತನಾಡಿದರು.

ಮುಖಂಡರಾದ ವಿಠ್ಠಲ್ ಯಾದವ್, ರಾಜಾ ರೂಪಕುಮಾರ ನಾಯಕ, ಇಲಿಯಾಸ್ ಸೇಠ ಬಾಗವಾನ, ಅಬ್ದುಲ್ ಗಫೂರ ನಗನೂರಿ, ಸರ್ದಾರ ಅಹ್ಮದ್ ಖುರೇಶಿ, ಸೂಗುರೇಶ ವಾರದ, ಅಬ್ದುಲ್ ಅಲಿಂ ಗೋಗಿ, ಡಾ.ಇಮ್ತಿಯಾಜ್ ಹುಸೇನ, ಖಾಲೀದ್ ಅಹ್ಮದ ತಾಳಿಕೋಟಿ, ಶೇಖ್ ರಾಜ್ಮಹ್ಮದ್, ಡಾ. ಮುನಾವಾರ ಬೋಡೆ, ತೋಫಿಕ್ ಅಹ್ಮದ್, ಶಿವಲಿಂಗ ಹಸನಾಪುರ ಇದ್ದರು.

ರಾಹುಲ್ ಹುಲಿಮನಿ ನಿರೂಪಿಸಿದರು. ರತ್ನರಾಜ ಸಾಲಿಮನಿ ಸ್ವಾಗತಿಸಿದರು. ಮಹ್ಮದ ಮೌಲಾ ಸೌದಾಗರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT