ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಬ್ ದಬಿ ಜಲಪಾತ: ಪ್ರವಾಸಿಗ ಸಾವು

ಮರುಕಳಿಸುತ್ತಲೇ ಇರುವ ಸಾವುಗಳು; ಎಚ್ಚೆತ್ತುಕ್ಕೊಳ್ಳದ ಅಧಿಕಾರಿಗಳು
Last Updated 30 ಆಗಸ್ಟ್ 2021, 13:56 IST
ಅಕ್ಷರ ಗಾತ್ರ

ಗುರುಮಠಕಲ್: ಇಲ್ಲಿನ ಧಬ್ ದಬಿ ಜಲಪಾತ ನೋಡಲು ಬಂದಿದ್ದ ಪ್ರವಾಸಿಗರೊಬ್ಬರುಭಾನುವಾರ ಈಜಾಡುವಾಗ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

ಮೃತರನ್ನು ಕಲಬುರ್ಗಿ ನಗರದ ನಿವಾಸಿ ಸೈಯದ್ ಅಝರ್ ಸೈಯದ ಕೈಮ್ (33) ಎಂದು ಗುರುತಿಸಲಾಗಿದೆ.

ಸ್ನೇಹಿತರೊಡನೆ ಜಲಪಾತಕ್ಕೆ ಬಂದಿದ್ದ ಅವರು, ಈಜಲು ನೀರಿಗಿಳಿದಾಗ, ಧುಮ್ಮಿಕ್ಕುವ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದ್ದಾರೆ.

ಘಟನೆಯ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸಿಪಿಐ ಖಾಜಾ ಹುಸೇನ ಅವರು ಮೃತದೇಹವನ್ನು ಹೊರತೆಗೆದಿದ್ದಾರೆ. ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೂಚನಾ ಫಲಕಗಳಿಲ್ಲ:

ಧಬ್ ದಬಿ ಜಲಪಾತದ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಜಲಪಾತದ ಬಳಿ ಯಾವುದೇ ಸೂಚನಾ ಫಲಕಗಳಿಲ್ಲ. ಹೀಗಾಗಿ ಅಪಾಯದ ಅರಿವಿಲ್ಲದೆ, ಪ್ರವಾಸಿಗರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಮಳೆಗಾಲದಲ್ಲಿ ಜಲಪಾತವು ಹೆಚ್ಚು ರಭಸದಿಂದ ಹರಿಯುವ ಕಾರಣ ವರ್ಷಕ್ಕೆ ಕನಿಷ್ಠ ಒಬ್ಬರಂತೆ ಪ್ರವಾಸಿಗರು ಜಲಪಾತದ ಸೆಳೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ಘಟನೆಗಳು ಜರುಗುತ್ತಲೇ ಇವೆ.

‘ದುರ್ಘಟನೆ ಜರುಗಿದಾಗ ಸ್ಥಳಕ್ಕಾಗಮಿಸುವ ಅಧಿಕಾರಿಗಳು ಮುಂದೆ ಹೀಗಾಗದಂತೆ ಎಚ್ಚರ ವಹಿಸುವ ಭರವಸೆ ನೀಡುತ್ತಾರಾದರೂ ಯಾವ ಕ್ರಮವೂ ಕೈಗೊಳ್ಳುತ್ತಿಲ್ಲ’ ಎಂದು ಸ್ಥಳೀಯರು ದೂರುತ್ತಾರೆ.

ಜಲಪಾತದ ಅಂಗಳದ ನೀರಿನಲ್ಲಿ ಈಜಲೆಂದು ಹೋಗುವ ಪ್ರವಾಸಿಗರು ಮೇಲಿಂದ ಧುಮ್ಮಿಕ್ಕುವ ನೀರಿನ ಸೆಳೆತಕ್ಕೆ ಸಿಲುಕಿ, ಜಲಪಾತದ ಮೇಲೆ ಹತ್ತುವಾಗ ಕಾಲುಜಾರಿ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಮರುಕಳಿಸುತ್ತಲೇ ಇವೆ.

ಇಲಾಖೆಗಳ ನಡುವೆ ಸಮನ್ವಯ ಕೊರತೆ: ಜಲಪಾತವನ್ನು ಪ್ರವಾಸಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸುವ ಹೇಳಿಕೆಗಳನ್ನು ಸರ್ಕಾರ ನೀಡುತ್ತಲೇ ಇದೆ. ಈ ಮೊದಲು ₹1 ಕೋಟಿ ಅನುದಾನ ಒದಗಿಸಲಾಗಿತ್ತು. ಆದರೆ, ಪ್ರವಾಸೋದ್ಯಮ, ಅರಣ್ಯ, ಕಂದಾಯ ಹಾಗೂ ಪಂಚಾಯತ್ ರಾಜ್ ಇಲಾಖೆಗಳ ನಡುವೆ ಸಮನ್ವಯ ಕೊರತೆಯಿಂದ ಯಾವ ಕೆಲಸಗಳೂ ಸಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT